Shakhahaari Movie Review ನಿನ್ನೆ ರಾಜ್ಯಾದ್ಯಂತ ಬಿಡುಗಡೆಗೊಂಡ ಶಾಖಾಹಾರಿ ಸಿನಿಮಾವು ಸಂಪೂರ್ಣ ಮಲೆನಾಡಿನ ಭಾಗದಲ್ಲಿ ಚಿತ್ರೀಕರಣಗೊಂಡಿದ್ದು, ಚಿತ್ರದ ಕಥೆಯು ಸಾಕಷ್ಟು ಕೌತುಕ ಕಹಾನಿಯನ್ನು ಹೊಂದಿದೆ.
ತೀರ್ಥಹಳ್ಳಿಯ ಸುತ್ತ ಮುತ್ತ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಶಾಖಾಹಾರಿ ಸಿನಿಮಾದ ನಿರ್ದೇಶಕರಾದ ಸಂದೀಪ್ ಸುಂಕದ್ ಸಾಕಷ್ಟು ಟ್ವಿಸ್ಟ್ ಗಳ ಮೂಲಕ ಕಥೆಯನ್ನು ಹೆಣೆದಿದ್ದಾರೆ.
ಕೀಳಂಬಿ ಮೀಡಿಯ ಲ್ಯಾಬ್ ಲಾಂಛನದಡಿ
ಸಿನಿಮಾ ತಯಾರಾಗಿದೆ.
Shakhahaari Movie Review ವಿಶೇಷವಾಗಿ ಶಾಖಾಹಾರಿ ಸಿನಿಮಾದ ಹೀರೋ, ಕಥೆಯೇ ಆಗಿದೆ. ಸಿನಿಮಾದಲ್ಲಿ ಯಾವ ಪಾತ್ರಗಳನ್ನು ಆಡಂಬರವಾಗಿ ತೋರಿಸದೆ, ಸರಳವಾಗಿ ತೋರಿಸಿದ್ದಾರೆ. ಚಿತ್ರೀಕರಿಸಿದ ಪ್ರತಿಯೊಂದು ಸೀನ್ ಕೂಡ ನಮ್ಮೆದುರು ನಡೆಯುವ ಸನ್ನಿವೇಶ ಎಂದೇನಿಸುವಂತೆ ಕಾಣುತ್ತದೆ… ಸಿನಿಮಾದಲ್ಲಿ ಪ್ರಮುಖವಾಗಿ ಪ್ರೀತಿಯ ಅಮೂಲ್ಯತೆಯನ್ನು ಬಹಳ ಅಚ್ಚು ಕಟ್ಟಾಗಿ ನಿದೇರ್ಶಕರು ತೋರಿಸಿದ್ದಾರೆ. ಅಂದರೆ, ಪ್ರೀತಿಗೆ ವಯಸ್ಸು ಅಡ್ಡಿ ಆಗುವುದಿಲ್ಲ ಎನ್ನುವುದು ಸಿನಿಮಾದಿಂದ ತಿಳಿದು ಬರುತ್ತದೆ. ಮೇಳಿಗೆ ಹಳ್ಳಿಯ ಹೋಟೆಲ್ ಒಂದರ ಮಾಲೀಕನಾಗಿ ರಂಗಾಯಣ ರಘು ಅವರು ಸುಬ್ಬಣ್ಣ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಡುಗೆ ಭಟ್ಟ ಎಂದರೆ ಸಾಮಾನ್ಯವಾಗಿ ಅವರ ಕೈಯಲ್ಲಿ ಸೌಟ್ ಇರಬೇಕು, ಆದರೆ ಇಲ್ಲಿ ರಂಗಾಯಣ ರಘು ಅವರ ಕೈಯಲ್ಲಿ ಕತ್ತಿ ಬರಲು ಕಾರಣವೇನು ಎಂಬುವುದು ಬಹಳ ಕುತೂಹಲಕಾರಿಯಾಗಿ ತೋರಿಸಿದ್ದಾರೆ. ತೀರ್ಥಹಳ್ಳಿಯ ಸೊಬಗನ್ನು ಬಹಳ ನಾಜೂಕಾಗಿ ಚಿತ್ರೀಕರಿಸಲಾಗಿದೆ. ಪ್ರೇಕ್ಷರಿಗೆ ವಾಟ್ ನೆಕ್ಸ್ಟ್? ಹೀಗ್ ಆಗಿರಬಹುದಾ? ಎಂದುಕೊಳ್ಳುವ ಒಳಗೆ ಇನ್ನೊಂದು ಟ್ವಿಸ್ಟ್ , ರೆಡಿ ಆಗಿರುತ್ತದೆ… ಹೀಗೆ ಸಿನಿಮಾ ಪ್ರೇಕ್ಷಕರನ್ನು ಕೊನೆವರೆಗೂ ಎಲ್ಲೂ ಆಚೆ ಇಚೆ ಆಗದಂತೆ ಕರೆದು ಹೋಗುತ್ತದೆ… ಕೊನೆಯ ಅರ್ಧ ಗಂಟೆ ವಿಭಿನ್ನವಾಗಿರುವುದು ಸಿನಿಮಾದ ಪ್ಲಸ್ ಪಾಯಿಂಟ್ ಎನ್ನಬಹುದು.
ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ವಿನಯ್, ನಿಧಿ ಹೆಗ್ಡೆ, ಸುಜಯ್ ಶಾಸ್ತ್ರಿ, ಹರಿಣಿ,ಶ್ರೀ ಹರ್ಷ ಗೋಭಟ್ಟ ಮತ್ತಿತರು ಇದ್ದಾರೆ.
ವಿಶೇಷವಾಗಿ ಮಲೆನಾಡಿಗರು ಅಭಿನಯಿಸಿ, ನಿರ್ದೇಶಿಸಿರುವ ಶಾಖಾಹಾರಿ ಸಿನಿಮಾದಲ್ಲಿ ವಿಶ್ವಜಿತ್ ರಾವ್ ಛಾಯಾಗ್ರಹಣ,ಹಾಗೂ ಶಶಾಂಕ್ ನಾರಾಯಣ ಸಂಕಲನದಲ್ಲಿ ಮೂಡಿ ಬಂದಿದೆ.
ಸಿನಿಮಾಕ್ಕೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪೋಸ್ ಸಿಕ್ಕಿದೆ.
ಒಟ್ಟಿನಲ್ಲಿ ಹೇಳುವುದಾದರೆ ಶಾಖಾಹಾರಿ ಸಿನಿಮಾ ಫ್ಯಾಮಿಲಿ ಕುಳಿತು ನೋಡುವ ಸಿನಿಮಾವಾಗಿದೆ. ನೀವು ಇನ್ನೂ ಸಿನಿಮಾ ವೀಕ್ಷಿಸದಿದ್ದರೆ, ಹತ್ತಿರದ ಚಿತ್ರ ಮಂದಿರಕ್ಕೆ ತೆರಳಿ ಶಾಖಾಹಾರಿ ಸಿನಿಮಾವನ್ನು ವೀಕ್ಷಿಸಿ…
Shakhahaari Movie Review ಬುಕ್ ಮೈ ಶೋ ನಲ್ಲಿ ಟಿಕೆಟ್ ಗಳು ಲಭ್ಯವಾಗಿವೆ… ಈ ಮೂವೀ ಗೆ 10 ಸ್ಟಾರ್ ನೀಡುವ ಮೂಲಕ ಸಿನಿಮಾವನ್ನು ಪ್ರೋತ್ಸಾಹಿಸಿ…