Saturday, December 6, 2025
Saturday, December 6, 2025

Siddaramaiah 2017-18 ರಿಂದ ಇಲ್ಲಿಯವರೆಗೆ ₹1,87,000 ಲಕ್ಷ ಕೋಟಿ ಕೇಂದ್ರದಿಂದ ಬಂದಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತಿತ್ತು- ಸಿದ್ಧರಾಮಯ್ಯ

Date:

Siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಇಂದು 2024-25ನೇ ಸಾಲಿನ ಮುಂಗಡ ಪತ್ರದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ವಿತ್ತೀಯ ಕೊರತೆ 82,981 ಕೋಟಿ ರೂ.ಗಳು ರಷ್ಟಿದ್ದು, ರಾಜ್ಯದ ಜಿಎಸ್‌ಡಿಪಿ ಯ 2.95% ರಷ್ಟಿದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರಲ್ಲಿ ನಿಗದಿಪಡಿಸಿರುವ ಶೇ.3 ರ ಮಿತಿಯೊಳಗೆ ಇದ್ದು, ವಿತ್ತೀಯ ಶಿಸ್ತು ಪಾಲಿಸಲಾಗಿದೆ.

ಕರ್ನಾಟಕದಲ್ಲಿ ರಾಜಸ್ವ ಕೊರತೆ 27 354 ಕೋಟಿ ರೂ.ಇದ್ದು, 0.97% ರಷ್ಟಿದೆ. ಹೊಣೆಗಾರಿಕೆಯು(Borrowings) 1,05,246 ಕೋಟಿಗಳಿದ್ದು, ಜಿಎಸ್‌ಡಿಪಿಯ ಶೇ.23.68ರಷ್ಟಿದೆ. ರಾಜಸ್ವ ಹೆಚ್ಚಳವು (Revenue Surplus) ಮುಂದಿನ ವರ್ಷದಿಂದ ಸ್ಥಿರಗೊಳ್ಳಲಿದೆ.

2017-2018 ರಿಂದ ಇಲ್ಲಿಯವರೆಗೆ ರೂ.1,87,000 ಲಕ್ಷ ಕೋಟಿ ಬಂದಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತಿತ್ತು. 6 ವರ್ಷಗಳಲ್ಲಿ ರೂ.62,000 ಕೋಟಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಕೇಂದ್ರದಿಂದ ನ್ಯಾಯಯುತ ಪಾಲು ಬರದಿದ್ದರೂ ಆರ್ಥಿಕವಾಗಿ ಸುಭದ್ರವಾಗಿದ್ದೇವೆ. ಗ್ಯಾರಂಟಿಗಳಿಗೆ ರೂ.52,009 ಕೋಟಿ ಅಂದಾಜಿಸಲಾಗಿದೆ. ಇದಕ್ಕೂ ಹೆಚ್ಚು ಬೇಕಾದಲ್ಲಿ ನೀಡಲಾಗುವುದು.

ಉತ್ತರ ಪ್ರದೇಶ ರಾಜ್ಯದಿಂದ 49% ತೆರಿಗೆ ಹೋದರೆ ಕೇಂದ್ರದಿಂದ ಸ್ವೀಕೃತಿ ರೂ.3,12,280 ಕೋಟಿ ಬರುತ್ತದೆ. ಕರ್ನಾಟಕದಿಂದ 77 % ತೆರಿಗೆ ಕೇಂದ್ರಕ್ಕೆ ಹೋದರೆ ಮುಂದಿನ ವರ್ಷಕ್ಕೆ ರಾಜ್ಯಕ್ಕೆ ಕೇವಲ 59,785 ರೂ. ಅಂದರೆ ಕೇವಲ 23% ಬರುತ್ತದೆ. ಉತ್ತರಪ್ರದೇಶ, ರಾಜಸ್ಥಾನ, ಮದ್ಯಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲು ನಮಗೆ ವಿರೋಧವಿಲ್ಲ. ಆದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕತ್ತರಿಸಿದಂತೆ, ಕೇಂದ್ರ ಬಿಜೆಪಿ
ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಬಾರದು.

ಸಾರ್ವತ್ರಿಕ ಮೂಲ ಆದಾಯದಂತೆ ಪ್ರತಿಯೊಬ್ಬರಿಗೆ ವಾರ್ಷಿಕವಾಗಿ 50 ರಿಂದ 55 ಸಾವಿರ ರೂ. ಸಿಗುತ್ತದೆ. 155 ಕೋಟಿ ಮಹಿಳಾ ಪ್ರಯಾಣಿಕರು ಬಸ್ ಗಳಲ್ಲಿ ಉಚಿತವಾಗಿ ತಿರುಗಾಡಿದರೆ, ಅನ್ನಭಾಗ್ಯದಡಿ ಉಚಿತ ಅಕ್ಕಿ ಬದಲು ಹಣ ಕೊಡುತ್ತಿದ್ದೇವೆ, ವಿದ್ಯುತ್ ಬಿಲ್ ಕಟ್ಟಬೇಡಿ, 1.17 ಲಕ್ಷ ಮಹಿಳೆಯರಿಗೆ 2,000 ರೂ. ತಿಂಗಳಿಗೆ ನೀಡಿದರೆ, ಅದನ್ನು ಬಿಟ್ಟಿ ಭಾಗ್ಯ ಎಂದು ಬಡವರಿಗೆ ಅವಮಾನಿಸಿದ್ದಾರೆ.

ನಮ್ಮ ಆಯವ್ಯಯ ಎಲ್ಲರನ್ನೂ ಒಳಗೊಂಡ ಸಾಮಾಜಿಕ ನ್ಯಾಯದ ಆಧಾರದ ಮೇಲೆ ರಚಿತವಾಗಿದೆ. ಎಲ್ಲ ಜಾತಿ, ಧರ್ಮಗಳು, ಸೇರಿದಂತೆ ಎಲ್ಲರಿಗೂ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಲಿ ಎಂದು ಗ್ಯಾರಂಟಿ ಕಾರ್ಯಕ್ರಮ ಜಾರಿ ಮಾಡಲಾಗಿದೆ.

Siddaramaiah ದೂರದೃಷ್ಟಿಯಿರುವ, ಎಲ್ಲರನ್ನೂ ಒಳಗೊಂಡ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಇದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...