Oxford Educational Institutions ಆಕ್ಸ್ಫರ್ಡ್ ಶಾಲೆಯಲ್ಲಿ ಆಕಾಶ ವೀಕ್ಷಣೆ
ಗಗನದ ವೈಶಾಲತೆ, ವೈಶಿಷ್ಟಗಳನ್ನು ನೋಡಿ ಆನಂದಿಸಬೇಕು- ಹರೋನಹಳ್ಳಿಸ್ವಾಮಿ
“ಆಕಾಶ ಉಚಿತ ನಿಸರ್ಗದ ಪ್ರಯೋಗ ಶಾಲೆ, ಸುಂದರ ಶನಿಗ್ರಹ, ಬೃಹತ್ ಗುರುಗ್ರಹ ಮತ್ತು ಅದರ ಚಂದ್ರರು, ಬಣ್ಣ ಬಣ್ಣದ ನಕ್ಷತ್ರಗಳು ಗ್ರಹಗಳ ಚ¯ನೆಯ ಹಿನ್ನೆಲೆಯ ರಾಶಿಚಕ್ರ ವಿವಿಧ ಆಕೃತಿಯ ನಕ್ಷತ್ರ ಪುಂಜಗಳು, ಆಗಾಗ್ಗೆ ಬೀಳುವ ಉಲ್ಕೆಗಳು, ಚಲಿಸುವ ಕೃತಕ ಉಪಗ್ರಹಗಳು, ಧನ ನಕ್ಷತ್ರ, ಭೂಮಿಯ ಚಲನೆ, ಚಿತ್ತಾರಗಳ ನಕ್ಷತ್ರಗಳ ಗುಂಪು-ಹೀಗೆ ವೈವಿಧ್ಯತೆ, ವೈಶಿಷ್ಟತೆ ಹಾಗೂ ವೈಶಾಲತೆಗಳನ್ನು ಪ್ರತಿ ಕ್ಷಣವು ರೋಮಾಂಚನ ಹುಟ್ಟಿಸುವ ಈ ಗಗನದ ಎಲ್ಲಾ ಸಂಭ್ರಮಗಳನ್ನು ನೋಡಿ ಆನಂದಿಸಬೇಕು. ಪ್ರಶ್ನಿಸುತ್ತಾ, ಆಲೋಚಿಸುತ್ತಾ ಹೋದಂತೆಲ್ಲಾ ನಿಸರ್ಗ ತಾನಾಗಿ ತನ್ನೆಲ್ಲ ನಿಗೂಢತೆಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಈ ವಿಶ್ವÀದ ರಹಸ್ಯಗಳನ್ನು ಅರಿಯುತ್ತಾ ವಿಶ್ವ ಪ್ರಜ್ಞೆ ಬೆಳಸಿಕೊಳ್ಳಬೇಕು” ಎಂದು ಹವ್ಯಾಸಿ ಖಗೋಳ ತಜ್ಞ ಹರೋನಹಳ್ಳಿಸ್ವಾಮಿ ತಿಳಿಸಿದರು.
ಆಕ್ಸ್ಫರ್ಡ್ ಶಾಲಾ ಆವರಣದಲ್ಲಿ ಬೃಹತ್ ಟೆಲಿಸ್ಕೋಪ್ ಮೂಲಕ ಸಾವಿರಾರು ವಿದ್ಯಾರ್ಥಿಗಳು ಪೋಷಕರಿಗೆ ಹಾಗು ಸಾರ್ವಜನಿಕರಿಗೆ ಗುರುಗ್ರಹ, ಚಂದ್ರನ ಕುಳಿಗಳು, ನಕ್ಷತ್ರ ಪುಂಜಗಳು, ರಾಶಿ ನಕ್ಷತ್ರ ಪಥ, ಧ್ರುವ ನಕ್ಷತ್ರಗಳನ್ನು ದರ್ಶನ ಮಾಡಿಸುವ ಮೂಲಕ ಆಕಾಶ ವೀಕ್ಷಣೆ ಕಾರ್ಯಕ್ರಮ ನಡೆಸಿಕೊಟ್ಟರು.
“Oxford Educational Institutions ಗಗನವನು ನೋಡು ಮೈನೀಲಿಗಟ್ಟುವವರೆಗೆ” ಎಂದ ಕುವೆಂಪು ನಮಗೆ ಆದರ್ಶ. ಆಕಾಶದ ಗ್ರಹಗಳ ಚಲನೆ, ರಾಶಿಗಳು, ಭೂಮಿಯ ದೈನಂದಿನ ಚಲನೆ, ಚಂದ್ರನ ಕುಳಿಗಳು, ಬೀಳುವ ಉಲ್ಕೆಗಳು, ಮಿನುಗುವ ನಕ್ಷತ್ರಗಳು, ಮಿನುಗದಿರುವ ಗ್ರಹಗಳು ಇವೆಲ್ಲವನ್ನು ನೋಡಿ ಆನಂದಿಸಿ ನಮ್ಮ ಖಗೋಳದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಆಕಾಶ ವೀಕ್ಷಣೆ ಮಕ್ಕಳ ನೆಚ್ಚಿನ ಹವ್ಯಾಸವಾಗಬೇಕು ಎಂದು ಹರೋನಹಳ್ಳಿಸ್ವಾಮಿ ಪ್ರಾಯೋಗಿಕವಾಗಿ ತೋರಿಸಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕೇಳಿದ ನೂರಾರು ಖಗೋಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಕ್ಸ್ಫರ್ಡ್ ಸಂಸ್ಥೆಯ ಅಧ್ಯಕ್ಷರಾದ ಡಿ.ಆರ್. ಶ್ರೀನಿವಾಸ್, ನೇತೃತ್ವöವನ್ನು ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಅಮೃತ ಬಿ.ಜಿ ರವರು ವಹಿಸಿದ್ದರು, ಸ್ವಾಗತವನ್ನು ಕು. ತಬಸುಮ್ ವಹಿಸಿದ್ದು, ಕು: ಪ್ರತೀಕ್ಷ ವಂದಿಸಿದರು. ಕಾರ್ಯಕ್ರಮದಲ್ಲಿ ಆಕ್ಸ್ಫಡ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
Oxford Educational Institutions ಆಕಾಶವು ನಿಸರ್ಗದ ಉಚಿತ ಪ್ರಯೋಗಶಾಲೆ- ಹರೋನಹಳ್ಳಿ ಸ್ವಾಮಿ
Date: