Monday, May 4, 2026
Monday, May 4, 2026

Department of Transport ವಾಹನಗಳಿಗೆ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್: ಗಡುವು ವಿಸ್ತರಣೆ ಸದ್ಯದಲ್ಲೇ ಆದೇಶ

Date:

Department of Transport ರಾಜ್ಯದಲ್ಲಿ ಹಳೆ ವಾಹನಗಳಿಗೆ ಸುರಕ್ಷತೆ ನೋಂದಣಿ ಫಲಕ ಅಳವಡಿಕೆಗೆ ನಿಗದಿಪಡಿಸಿರುವ ಗಡುವನ್ನ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸದ್ಯದಲ್ಲೇ ಆದೇಶ ಹೊರಡಿಸಲಿದೆ.

2023 ಆಗಸ್ಟ್ ಹದಿನೆಂಟರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆಯು ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾದ ಹಳೆ ವಾಹನಗಳಿಗೆ ಹೆಚ್ಎಸ್ಆರ್‌ಪಿ ಅಳವಡಿಸಲು ನವೆಂಬರ್ 17ರ ವರೆಗೆ ಕಾಲಾವಕಾಶ ನೀಡಿತ್ತು.

ರಾಜ್ಯದಲ್ಲಿ ಅಂತಹ ಸುಮಾರು ಎರಡು ಕೋಟಿ ವಾಹನಗಳಿದ್ದು, ನವೆಂಬರ್ 17ರ ನಡುವಿನೊಳಗೆ ಬಹುತೇಕ ಹಳೆ ವಾಹನಗಳ ಮಾಲೀಕರು ಹೆಚ್ ಎಸ್ ಆರ್ ಪಿ ಅಳವಡಿಸಬಹುದೆಂದು ಇಲಾಖೆ ನಿರೀಕ್ಷಿಸಿತ್ತು. ಆದರೆ ಎಚ್ ಎಸ್ ಆರ್ ಪಿ ಅಳವಡಿಕೆಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ.

ಆದ್ದರಿಂದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಫೆಬ್ರವರಿ 17ರವರೆಗೆ ಗಡುವು ವಿಸ್ತರಿಸುವಂತೆ ಸೂಚಿಸಿದ್ದರು. ಆ ನಂತರವೂ ಸಾರ್ವಜನಿಕ ಹೆಚ್ಎಸ್ಆರ್‌ಪಿ ಅಳವಡಿಕೆಗೆ ಹಿಂದೆಟು ಹಾಕಿದ್ದು, ಎರಡು ಕೋಟಿ ಹಳೆ ವಾಹನಗಳಲ್ಲಿ ಇದುವರೆಗೆ ಸುಮಾರು 18.5 ಲಕ್ಷ ವಾಹನಗಳಿಗೆ ಮಾತ್ರ ಎಚ್ಎಸ್ಆರ್ಪಿ ಅಳವಡಿಕೆಯಾಗಿದೆ.

ಇನ್ನೊಂದುಡೆ ಹೆಚ್ ಎಸ್ ಆರ್ ಪಿ ಅಳವಡಿಕೆ ಗಾಗಿ ಕೋರಿಕೆ ಸಲ್ಲಿಸುವ ವೆಬ್ ಪೋರ್ಟ್ ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಆನ್ಲೈನ್ ನೊಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಈ ಕಾರಣಕ್ಕೆ ಮತ್ತೊಮ್ಮೆ ವಿಸ್ತರಿಸುವಂತೆ ಸಾರ್ವಜನಿಕರು ಹಾಗೂ ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘದ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Department of Transport ಮನವಿಗೆ ಪೂರಕವಾಗಿ ಸ್ಪಂದಿಸಿರುವ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಗಡುವು ವಿಸ್ತರಿಸಲು ನಿರ್ಧರಿಸಿದೆ. ಈ ಮುಂಚೆ ಫೆಬ್ರವರಿ 15ರ ನಡುವಿನೊಳಗೆ ಹೆಚ್ ಎಸ್ ಆರ್ ಪಿ ಅಳವಡಿಸದ ವಾಹನಗಳಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಗಡು ವಿಸ್ತರಣೆ ಮಾಡಲಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ದಂಡ ವಿಧಿಸದಿರಲು ಸರ್ಕಾರ ಎಂದು ಸಾರಿಗೆ ಇಲಾಖೆ ಮೂಲಗಳು ವರದಿಯಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...