Bilikal Rangaswamy Betta ಶಿವಮೊಗ್ಗದಿಂದ ಹದಿನಾರು ಕಿಮೀ ದೂರದಲ್ಲಿದೆ ಬಿಳಿಕಲ್ ಗಣಿ.ಆ ಪ್ರದೇಶದಲ್ಲಿ ಬಿಳಿಕಲ್ ಬೆಟ್ಟವಿದೆ.
ಬೆಟ್ಟದಲ್ಲಿ ಪುಟ್ಟ ಶ್ರೀರಂಗನಾಥ ದೇವಾಲಯವಿದೆ.
ಲಕ್ಕಿನ ಕೊಪ್ಪ ಸರ್ಕಲ್ ನಿಂದ ಕುವೆಂಪು ವಿವಿಗೆ ತೆರಳುವ ಹಾದಿಯ ಪಕ್ಕದಲ್ಲೇ ಬೆಟ್ಟಕ್ಕೆ ಸಾಗುವ ರಸ್ತೆಯಿದೆ.
ಬಿಳಿ ಬಣ್ಣದ ಕಮಾನು ನಿಮಗೆ ಸ್ವಾಗತ ಕೋರುತ್ತದೆ.
ಬಹಳ ಕಡೆ ನಿಂತಿರುವ ಮೂರ್ತಿಯನ್ನ ನೋಡಿದ್ದೇವೆ.ಆದರೆ ಇಲ್ಲಿಯದು ಶೇಷಶಾಯಿ.
ಅಪರೂಪದ ಮೂರ್ತಿ.
ಶ್ರೀರಂಗಪಟ್ಣದ ಭಾರೀ ವಿಗ್ರಹದ ಪುಟ್ಟಮಾದರಿಯಂತೆ
ದರ್ಶನವಾಗುತ್ತದೆ.
ಮೆಟ್ಟಿಲುಗಳಿವೆ.
ಶ್ರೀರಂಗನಾಥನ ಅಕ್ಕಪಕ್ಕ ಶ್ರೀಗೌಳಿಗಮ್ಮ ಮತ್ತು ಶ್ರೀ ಆಂಜನೇಯ ಗರ್ಭಗೃಹಗಳಿವೆ.
ಒಮ್ಮೆ ಬೆಟ್ಟದ ಮೇಲಿಂದ ಸುತ್ತಲೂ ಕಣ್ಣು ಹಾಯಿಸಿದರೆ ಎಲ್ಲೆಲ್ಲೂ ಹಸಿರು. ಮನಸ್ಸಿಗೆ ಒಂದುಕ್ಷಣ ಮುದನೀಡುತ್ತದೆ. ಹತ್ತಿರದಲ್ಲೇ ಇರುವ ರಂಗನಾಥಪುರ ಗ್ರಾಮಕ್ಕೆ ಸೇರಿದ ದೇವಳವಿದು.
ನೀರಿನ ವ್ಯವಸ್ಥೆಗೆ ಬೋರ್ ವೆಲ್ ಇದೆ.
ಒಮ್ಮೆ ಭಾನುವಾರ ಪೂಜೆ ಮತ್ತು ಪಿಕ್ ನಿಕ್( ಅವರವರ ಭಾವನೆಗೆ ತಕ್ಕಂತೆ) ಗೆ ಹೋಗಿ ಬರಬಹುದಾದ ತಾಣ.
Bilikal Rangaswamy Betta ಮುಂಚೆ ಇಲ್ಲಿ ದೊರೆಯುವ ಬಿಳಿಕಲ್ಲಿನ ಚೂರುಗಳನ್ನ ಸನಿಹದ ವಿಐಎಸ್ಎಲ್ ಕಾರ್ಖಾನೆಗೆ ಬಳಸಲು ಸಾಗಿಸಲಾಗುತ್ತಿತ್ತು.
ಈಗ ಇಲ್ಲಿನ ಗಣಿಗಾರಿಕೆ ನಿಂತಿದೆ.