Conversation – ಕರ್ನಾಟಕದ ಸಾಂಸ್ಕೃತಿಕ ವಾತಾವರಣವನ್ನು ಮತ್ತಷ್ಟು ಮೌಲ್ಯಯುತ ಗೊಳಿಸುವ ಅಥವಾ ಪುನರ್ ನಿರ್ಮಾಣ ಮಾಡುವ ಒಂದು ಸಣ್ಣ ಪ್ರಯತ್ನ.
ರಾಜಕೀಯ ಮತ್ತು ಮನರಂಜನೆ ಹೊರತುಪಡಿಸಿದ ಒಂದು ಚಿಂತನಶೀಲ ಕಾರ್ಯಕ್ರಮ. ಒಳ್ಳೆಯದನ್ನು ನಾವುಗಳು ಪ್ರೋತ್ಸಾಹಿಸಿ ಬೆಳೆಸದಿದ್ದರೆ ಮುಂದೆ ಪಶ್ಚಾತ್ತಾಪ ಕಟ್ಟಿಟ್ಟ ಬುತ್ತಿ. ಹೇಗಾದರೂ ಸಮಯ ಹೊಂದಾಣಿಕೆ ಮಾಡಿಕೊಂಡು ದಯವಿಟ್ಟು ಬನ್ನಿ. ಇಡೀ ದಿನ ಚರ್ಚೆ ಸಂವಾದದಲ್ಲಿ ಭಾಗವಹಿಸಿ.
” ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ “
ಅರಿವಿನ ಅನುಬಾವಿಗಳ ಅನುಭವ ಮಂಟಪದಲ್ಲಿ… ಒಂದು ಮುಕ್ತ ಸಂವಾದ….
ಸಿನೆಮಾ – ಧಾರವಾಹಿ – ರಾಜಕೀಯ – ವ್ಯಾಪಾರ – ವ್ಯವಹಾರಗಳ ಸ್ಪರ್ಧೆ – ವೇಗದ ಬದುಕಿನಲ್ಲಿ ಕಳೆದು ಹೋಗಿರುವ ಜನಸಾಮಾನ್ಯರಿಗೆ ಬಸವ ತತ್ವದ ಮಹತ್ವದ ಅರಿವು ಮೂಡಿಸುವ ಒಂದು ಪ್ರಯತ್ನ….
ರಾಜ್ಯದ ಸಮ ಸಮಾಜ ಆಶಯದ ಪ್ರಬುದ್ಧ ಚಿಂತಕರಿಂದ ಇಡೀ ದಿನ ಮಾಹಿತಿ ಪೂರ್ಣ ಚರ್ಚೆ – ಸಂವಾದ – ಮಂಥನ….
ದಿನಾಂಕ 18/02/2024…
ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5/30 ರವರೆಗೆ*…..
ಸ್ಥಳ :
ಬಾಪೂ ಸಭಾಂಗಣ
ಶಿವಾನಂದ ವೃತ್ತ
ಗಾಂಧಿ ಭವನ
ಬೆಂಗಳೂರು….
ಕಾರ್ಯಕ್ರಮ ವಿವರ…
ಬೆಳಗ್ಗೆ 9 ಗಂಟೆಗೆ
ಉಪಹಾರ…
9:3೦ ರಿಂದ 10 ಗಂಟೆಯವರೆಗೆ ;
ವಚನ – ಬಂಡಾಯ ಮತ್ತು ಕುವೆಂಪು ಸಾಹಿತ್ಯ ಗಾಯನ :
ಪಂಡಿತ್ ಶಿವಾನಂದ್ ಹೆರೂರ್ ಮತ್ತು ಎಚ್ ಸಿ
ಉಮೇಶ್ ತಂಡದವರಿಂದ..
ಬೆಳಗ್ಗೆ 10 ಗಂಟೆಗೆ….
ಆಶಯ ನುಡಿ….
ವಿವೇಕಾನಂದ ಎಚ್.ಕೆ.,
ಬರಹಗಾರರು ಮತ್ತು ಸಾಮಾಜಿಕ ಚಿಂತಕರು…
10/15 ಕ್ಕೆ ಉದ್ಘಾಟನೆ :
ಅಕೈ ಪದ್ಮಶಾಲಿ,
ಲೈಂಗಿಕ ಅಲ್ಪಸಂಖ್ಯಾತ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ….
ದಿನೇಶ್ ಅಮೀನ್ ಮಟ್ಟು,
ಹಿರಿಯ ಪತ್ರಕರ್ತರು ಮತ್ತು ಸಾಮಾಜಿಕ ಚಿಂತಕರು…..
ಉಪಸ್ಥಿತಿ :
ಫಾದರ್ ಅರುಣ್ ಲೂಯಿಸ್ ಎಸ್. ಜೆ.,
ನಿರ್ದೇಶಕರು ಆಶೀರ್ವಾದ
ಜನಾಬ್ ಮೌಲಾನಾ ಮಹಮದ್ ಯೂಸುಫ್ ಕನ್ನಿ,
ಮುಸ್ಲಿಂ ಸಮಾಜದ ಮುಖಂಡರು…
( ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಮತ್ತು ವಚನ ಬೋಧನೆಯ ಮುಖಾಂತರ……)
ಅಧ್ಯಕ್ಷತೆ :
ಪ್ರೊ ಎಸ್.ಜಿ ಸಿದ್ದರಾಮಯ್ಯ,
ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ,
ಹಿರಿಯ ಸಾಹಿತಿಗಳು ಮತ್ತು ವಿಮರ್ಶಕರು….
Conversation – ಸಂವಾದ 1
ಸಮಯ ಬೆಳಿಗ್ಗೆ 10/30 ರಿಂದ 11/30 ರವರೆಗೆ,
” ಬಸವ ತತ್ವದ ಮೂಲ ಆಶಯವೇ ಸಂವಿಧಾನ “
ನ್ಯಾ. ನಾಗಮೋಹನ್ ದಾಸ್,
ನಿವೃತ್ತ ನ್ಯಾಯಾಧೀಶರು,
ಕರ್ನಾಟಕ ಉಚ್ಚ ನ್ಯಾಯಾಲಯ…..
ಸಂವಾದ 2….
11/30 ರಿಂದ 12/30..
” ಕುವೆಂಪು ಒಳಗಿನ ಬಸವಣ್ಣ “
ಡಾಕ್ಟರ್ ಕೆ. ವೈ. ನಾರಾಯಣಸ್ವಾಮಿ,
ಸಾಹಿತಿಗಳು ಮತ್ತು ಖ್ಯಾತ ನಾಟಕಕಾರರು….
ಸಂವಾದ 3…..
12/30 ರಿಂದ 1/30
” ಮಹಿಳಾ ಘನತೆ ಮತ್ತು ಸಮಾನತೆ ಸಾಧ್ಯವಾಗಿಸುವ ಬಸವ ತತ್ವ…..”
ಡಾಕ್ಟರ್ ಎಂ ಎಸ್ ಆಶಾದೇವಿ,
ಪ್ರಾಧ್ಯಾಪಕರು, ಲೇಖಕರು ಮತ್ತು ವಿಮರ್ಶಕರು….
ಮಧ್ಯಾಹ್ನ 1/30 ರಿಂದ 2 ಗಂಟೆಯವರೆಗೆ ಊಟದ ವ್ಯವಸ್ಥೆ ಮಾಡಲಾಗಿದೆ…
ಸಂವಾದ 4….
ಮದ್ಯಾಹ್ನ 2 ರಿಂದ 3
“ಸಮ ಸಮಾಜದ ನಿರ್ಮಾಣಕ್ಕೆ ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣನವರ ಅಗತ್ಯ “
ಡಾಕ್ಟರ್ ಬಂಜಗೆರೆ ಜಯಪ್ರಕಾಶ್,
ಹಿರಿಯ ಬರಹಗಾರರು ಮತ್ತು ಚಿಂತಕರು….
ಸಂವಾದ 5…
3 ರಿಂದ 4
” ಭಗವದ್ಗೀತೆ – ಖುರಾನ್ – ಬೈಬಲ್ ನಲ್ಲಿ ಬಸವ ತತ್ವದ ಆಶಯಗಳು…”
ಡಾಕ್ಟರ್ ಟಿ. ಆರ್ ಚಂದ್ರಶೇಖರ್,
ಅರ್ಥಶಾಸ್ತ್ರಜ್ಞರು ಮತ್ತು ಪ್ರಾಧ್ಯಾಪಕರು….
ಸಂವಾದ 6…
4 ರಿಂದ 4/30
” ಮತ್ತೆ ಕಲ್ಯಾಣ…..”
ಜಿ.ಬಿ ಪಾಟೀಲ,
ರಾಷ್ಟ್ರೀಯ ಕಾರ್ಯದರ್ಶಿಗಳು, ಜಾಗತಿಕ ಲಿಂಗಾಯತ ಮಹಾಸಭಾ….
4/30 ರಿಂದ….
ಅಧ್ಯಕ್ಷೀಯ ಭಾಷಣ
” ಸಾಂಸ್ಕೃತಿಕ ನಾಯಕ ಬಸವಣ್ಣ ಮತ್ತು ಅಧ್ಯಕ್ಷೀಯ ಭಾಷಣ “
ಪ್ರೊಫೆಸರ್ ಎಸ್ ಜಿ ಸಿದ್ದರಾಮಯ್ಯ,
ಮಾಜಿ ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಿರಿಯ ಸಾಹಿತಿಗಳು…
ಸಾಮಾಜಿಕ ಕಳಕಳಿಯ,
ಸ್ಪರ್ಧಾತ್ಮಕ ಪರೀಕ್ಷೆಯ,
ಮಾನಸಿಕ ವಿಶ್ರಾಂತಿ ಬಯಸುವ
ಜನರಿಗೆ ನಿಜವಾದ ಮನೋಲ್ಲಾಸ ನೀಡುವ ಅರಿವಿನ ಕಾರ್ಯಕ್ರಮವಾಗಿಸುವ ಪ್ರಯತ್ನ….
ಮಾಧ್ಯಮ ಮಿತ್ರರು,
ಯೂಟ್ಯೂಬ್ ಚಾನಲ್ ನವರು,
ಸಾಮಾಜಿಕ ಜಾಲತಾಣಗಳ ಕ್ರಿಯಾತ್ಮಕವಾಗಿ ಬರಹಗಾರರು ಇದನ್ನು ರಾಜ್ಯಾದ್ಯಂತ ಪ್ರಸಾರ ಮಾಡಿದರೆ ಒಂದು ಸುಂದರ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಬಹುದು….
ಕಾರ್ಯಕ್ರಮದ ಸಂಯೋಜನೆ ಮತ್ತು ಸಂಚಾಲಕರು,
ಶ್ರೀ ಎಂ ಯುವರಾಜ್,
ಆಹಾರ ಸಂರಕ್ಷಣಾ ಅಭಿಯಾನ. ಬೆಂಗಳೂರು.
ಆಸಕ್ತರು ದಯವಿಟ್ಟು ಸಂಪರ್ಕಸಿ ತಮ್ಮ ಭಾಗವಹಿಸುವಿಕೆ ಖಚಿತಪಡಿಸಿದರೆ ಕಾರ್ಯಕ್ರಮ ನಿರ್ವಹಿಸಲು ಸಹಕಾರಿಯಾಗುತ್ತದೆ….
ಅತ್ಯಂತ ಸರಳ ಕಾರ್ಯಕ್ರಮ ಆದರೆ ಆಳ ವಿಷಯಗಳ ಪ್ರಸ್ತಾಪ ಸಹಜ ವಾತಾವರಣದಲ್ಲಿ…..
ದಯವಿಟ್ಟು ಮರೆಯದೆ ಬನ್ನಿ.
ನಿಮ್ಮ ಗೆಳೆಯರು, ಕುಟುಂಬದವರನ್ನು ಕರೆತನ್ನಿ,
ಸಮ ಸಮಾಜದ ನಿರ್ಮಾಣಕ್ಕಾಗಿ ಒಂದು ಸಣ್ಣ ಪ್ರಯತ್ನ ಮಾಡೋಣ…
ಒಳ್ಳೆಯದು ಕೇವಲ ಮಾತುಗಳಲ್ಲ ಅದು ನಮ್ಮ ನಡವಳಿಕೆಯಾಗಲಿ. ಕೇವಲ 8 ಗಂಟೆಗಳ ಸಮಯಾವಕಾಶ ನೀಡಿ ನಿಮ್ಮ ಕರ್ತವ್ಯ ನಿರ್ವಹಿಸಿ. ನಮ್ಮ ಮಕ್ಕಳ ಮುಂದಿನ ಒಳ್ಳೆಯ ಸಾಮಾಜಿಕ ವಾತಾವರಣ ನಿರ್ಮಾಣ ಮಾಡಲು…
ಧನ್ಯವಾದಗಳು
ಸಂಪರ್ಕಿಸಬೇಕಾದ
ದೂರವಾಣಿ..
ಯುವರಾಜ್ ಎಂ…. 8050802019,
ಉಮೇಶ್ ಎಚ್ ಸಿ…
9844057149,
ರೂಪೇಶ್ ಪುತ್ತೂರು…
8310510413,
ರಘುನಂದನ್ ಜೆ ಪಿ..
805006001
ವಿವೇಕಾನಂದ ಎಚ್ ಕೆ..
9844013068…..
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ವಚನ ಸಾಹಿತ್ಯವನ್ನು ನೆನಪಿಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,