Wednesday, September 16, 2026
Wednesday, September 16, 2026

K. J. George ಚಿಕ್ಕಮಗಳೂರು ಕಾಂಗ್ರೆಸ್ ಭವನ ಕಟ್ಟಡ ಕಾಮಗಾರಿಗೆ ಸಚಿವ ಜಾರ್ಜ್ ಅವರಿಂದ ಚಾಲನೆ

Date:

K. J. George ಚಿಕ್ಕಮಗಳೂರು, ನಗರದ ಕುವೆಂಪು ಕಲಾಮಂದಿರ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮೂರು ಅಂತಸ್ತಿನ ಕಾಂಗ್ರೆಸ್ ಪಕ್ಷದ ನೂತನ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಪೂಜೆ ನೆರವೇರಿಸುವ ಮುಖಾಂತರ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು.

ಈ ಕುರಿತು ಮಾತನಾಡಿದ ಕಟ್ಟಡ ಸಮಿತಿ ಅಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ನೂತನ ಭವನವು ಅಂದಾಜು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ತ್ವರಿತವಾಗಿ ಕಟ್ಟಡ ಪೂರ್ಣಗೊಳಿಸಲು ತೀರ್ಮಾನ ಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

K. J. George ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಪಕ್ಷದ ನೂತನ ಭವನಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದು ಇದೀಗ ಸಚಿವರ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪಕ್ಷದಲ್ಲೂ ಹಲವು ಮುಖಂಡರ ನೇತೃತ್ವದಲ್ಲಿ ಕಟ್ಟಡ ಸಮಿತಿ ಸ್ಥಾಪಿಸಿ ಭವನ ನಿರ್ಮಾಣದಲ್ಲಿ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ. ಅಂಶುಮoತ್, ಕಟ್ಟಡ ಸಮಿತಿಯ ಖಜಾಂಚಿ ಕೆ.ಎಸ್.ಶಾಂತೇಗೌಡ, ಸಂಚಾಲಕ ಎಂ.ಸಿ.ಶಿವಾನoದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಪಕ್ಷದ ಮುಖಂಡರುಗಳಾದ ಗಾಯತ್ರಿ ಶಾಂತೇಗೌಡ, ಕೆ.ಮಹಮ್ಮದ್, ನಯಾಜ್, ಕೆ.ವಿ. ಮಂಜುನಾಥ್, ಅನ್ಸರ್ ಆಲಿ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...

B.Y.Raghavendra ಸ್ಥಳೀಯರ ಆಹವಾಲು ಕೇಳದೇ , ವಾಸ್ತವ ಸ್ಥಿತಿ ಅರಿಯದೇ ಕಸ್ತೂರಿ ರಂಗನ್ ವರದಿ ನೀಡಲಾಗಿದೆ- ಬಿ.ವೈ.ರಾಘವೇಂದ್ರ

B.Y.Raghavendra ಕಸ್ತೂರಿ ರಂಗನ್‌ ಸಮಿತಿಯ ಶಿಫಾರಸ್ಸುಗಳಲ್ಲಿ ಕೆಲವು ಮಾರ್ಪಾಡುಗೊಳಿಸಿ, ಅರಣ್ಯ ಭೂಮಿಯೆಂದು...