KPCC Kisan Unit ಕೇಂದ್ರ ಸರ್ಕಾರ ಮಂಡಿಸಿದ ಮದ್ಯಂತರ ಬಜೆಟ್ ರೈತರು ಹಾಗೂ ಬೆಳೆ ಗಾರರಿಗೆ ನಿರಾಶದಾಯಕವಾಗಿದ್ದು ಯಾವುದೇ ಸವಲತ್ತನ್ನು ಒದಗಿಸದೇ ಸಂಕಷ್ಟಕ್ಕೆ ದೂಡಿರುವ ಬಜೆಟ್ ಆಗಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಸಂಚಾಲಕ ಸಿ.ಎನ್.ಅಕ್ಮಲ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಎಚ್ಚೆತ್ತುಕೊಳ್ಳಬೇಕು. ಜನರಿಗೆ ಸ್ಪಂದಿಸದ ಸಂಸದರನ್ನು ಲೋಕಸಭೆಯಲ್ಲಿ ಕಳಿಸುವ ಬದಲು ಸಮರ್ಪ ಕವಾಗಿ ಸ್ಪಂದಿಸುವ ಅಭ್ಯರ್ಥಿಯನ್ನು ಆಯ್ಕೆಗೊಳಿಸಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.
ದೇಶದ ಬೆನ್ನೆಲುಬಾದ ರೈತರ ಸಮಸ್ಯೆಗಳಿಗೆ ಆಲಿಸದ ಕೇಂದ್ರ ಸರ್ಕಾರ ಉದ್ಯಮಿಗಳ ಕೋಟಿಗಟ್ಟಲೇ ಸಾಲ ಮನ್ನಾ ಮಾಡುತ್ತಿದೆ. ಇದರಿಂದ ರೈತರು ಹಾಗೂ ಬೆಳೆಗಾರರಿಗೆ ಕೃಷಿ ಪರಿಕರ ಹಾಗೂ ಬೆಳೆ ನಷ್ಟದ ಪರಿಹಾರವನ್ನು ಒದಗಿಸದೇ ಚೆಲ್ಲಾಟವಾಡುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದು ಕೆಲವೇ ತಿಂಗಳಲ್ಲಿ ಸಂಪೂರ್ಣ ಗ್ಯಾರಂಟಿಯನ್ನು ಘೋ ಷಿಸಿ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ರಾಜ್ಯದ ಜನತೆಗೆ ಪೂರೈಸಿ ಜನಮನ್ನಣೆ ಪಡೆ ದುಕೊಂಡಿರುವ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಹೊಸದೊಂದು ಅಲೆಯನ್ನೇ ಸೃಷ್ಟಿಸಿದೆ ಎಂದಿದ್ದಾರೆ.
KPCC Kisan Unit ಕೇಂದ್ರ ಸರ್ಕಾರದ ಯೋಜನೆಗಳು ಸಾಮಾನ್ಯ ಜನತೆ ಬದುಕಲಾರದ ಸ್ಥಿತಿಗೆ ತಂದೊಡ್ಡಿದೆ. ದಿನಬಳಕೆ ವಸ್ತು ಗಳ ಏರಿಕೆ, ರೈತರ ಕಡೆಗಣನೆ ಸೇರಿದಂತೆ ಅನೇಕ ಸವಲತ್ತುಗಳನ್ನು ಕಸಿದುಕೊಂಡು ಬೀದಿ ಬಿಟ್ಟಂತಾಗಿದೆ ಎಂದ ಅವರು ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜನಸಾಮಾನ್ಯರ ಪೂರಕವಾಗಿರುವ ರಾಜ್ಯಸರ್ಕಾರ ಹಲವಾರು ಜನಪರ ಯೋಜನೆ ಜಾರಿಗೊಳಿಸಿದೆ. ಇಂ ತಹ ಮಾದರಿ ಸರ್ಕಾರವನ್ನು ರಾಜ್ಯದ ಜನತೆ ಬೆಂಬಲಿಸಿ ಆರ್ಶೀವಾದಿಸುತ್ತಿದೆ. ಹೀಗಾಗಿ ದೇಶದ ಪ್ರತಿ ಪ್ರಜೆಗಳಿಗೂ ಸುಲಲಿತ ಆಡಳಿತ ನೀಡುವ ದೃಷ್ಟಿಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ವಿಚಾರದಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಮತ ಚಲಾಯಿಸಬೇಕು ಎಂದು ಹೇಳಿದ್ದಾರೆ.