Kuvempu University ಇತ್ತೀಚೆಗೆ ಸಂವಹನ ತಂತ್ರಜ್ಞಾನದಲ್ಲಿ ವ್ಯಾಪಕವಾದ ಅಭಿವೃದ್ಧಿಗಳಾಗುತ್ತಿವೆ. ಅವುಗಳನ್ನು ಪತ್ರಿಕೋದ್ಯಮದಲ್ಲೂ ಸೂಕ್ತವಾಗಿ ಬಳಸಿಕೊಳ್ಳುವ ಅವಕಾಶವಿದ್ದು, ಪತ್ರಕರ್ತರು ತಂತ್ರಜ್ಞಾನದ ಜೊತೆ ಜೊತೆಗೆ ಪತ್ರಿಕೋದ್ಯಮದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕೆಂದು ಜೀ ನ್ಯೂಸ್ ಮುಖ್ಯ ಸಂಪಾದಕ ರವಿ ಎಸ್ ಗೌಡ ಅವರು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಜಂಟಿಯಾಗಿ ಆಯೋಜಿಸಿದ್ದ ‘ಸುದ್ದಿವಾಹಿನಿಯಲ್ಲಿ ಇನ್‌ಪುಟ್ ನಿಂದ ಔಟ್‌ಪುಟ್ ಪ್ರಕ್ರಿಯೆ’ಯ ಬಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಪೀಳಿಗೆಗೆ ಯಾವಾಗಲೂ ಧಾವಂತದಲ್ಲಿರುತ್ತದೆ. ಎಲ್ಲವೂ ಶೀಘ್ರವಾಗಿ ಲಭಿಸಬೇಕು ಎಂದು ನಿರೀಕ್ಷಿಸುತ್ತಾರೆ.
ಆದರೆ ಸಾಧನೆಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಕ್ರಮಬದ್ಧವಾಗಿ ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನು ಏರಬೇಕು. ಆಗ ಮಾತ್ರ ಸಾಧನೆಯ ಉತ್ತುಂಗದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ.
Kuvempu University ಪತ್ರಿಕೋದ್ಯಮದ ವಿದ್ಯಾರ್ಥಿಗಳು ವೃತ್ತಿರಂಗಕ್ಕೆ ಇಳಿಯುವ ಮೊದಲೇ ಸುದ್ದಿಸಂಸ್ಥೆಗಳ ರಚನೆಯ ಬಗ್ಗೆ ತಿಳಿದುಕೊಂಡಿರಬೇಕು. ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನಿಕ ಜ್ಞಾನಕ್ಕೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗುತ್ತಿದೆ. ಬರವಣ ಗೆಗೆ ಲೇಖನಿ, ಕಾಗದದ ಅನಿವಾರ್ಯತೆ ಮಾಯವಾಗಿದೆ.
ಕಂಪ್ಯೂಟರ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ವರದಿಗಾರರು ತಮ್ಮ ಮೊಬೈಲ್‌ಗಳಲ್ಲೆ ಸುದ್ದಿಗಳನ್ನು ರಚಿಸುತ್ತಿದ್ದಾರೆ. ಮೊಬೈಲ್‌ಗಳನ್ನು ಟೈಪಿಸುವುದಕ್ಕೆ ಅಷ್ಟೆ ಅಲ್ಲದೆ ಧ್ವನಿ ಮೂಲಕ ಟೈಪಿಸುವುದು, ಅನುವಾದ ಮಾಡಿಕೊಳ್ಳಲು, ಮಾಹಿತಿಗಳನ್ನು ಸಂಗ್ರಹಿಸಲು ಹಾಗೂ ಹಂಚಿಕೊಳ್ಳಲು ಬಳಕೆಯಾಗುತ್ತಿದೆ. ಹಲವು ಸುದ್ದಿ ಪೋರ್ಟಲ್‌ಗಳು ಕೂಡ ಮೊಬೈಲ್‌ನಲ್ಲಿಯೇ ನಿರ್ವಹಿಸಲ್ಪಡುತ್ತಿವೆ. ಆದ್ದರಿಂದ ಕಾಲಕಾಲಕ್ಕೆ ವಿದ್ಯಾರ್ಥಿಗಳು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಆರ್ ಸತ್ಯಪ್ರಕಾಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಡಾ. ಸತೀಶ್‌ಕುಮಾರ್, ಡಾ. ವರ್ಗೀಸ್, ಹಿರಿಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷೆ ವಿದ್ಯಾ, ಕಾರ್ಯದರ್ಶಿ ಶರತ್, ಹಿರಿಯ ವರದಿಗಾರ ಜೇಸುದಾಸ್ ಹಾಗೂ ನಿತಿನ್ ಕೈದೋಟ್ಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.