Harda blast news ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸುಮಾರು 11 ಮಂದಿ ಮೃತಪಟ್ಟು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಹಾರ್ದಾ ಜಿಲ್ಲೆಯ ಬೈರಗಡ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡಿರುವ ನೂರಕ್ಕೂ ಹೆಚ್ಚು ಜನರನ್ನ ಹಾ ನಗರ ಹಾಗೂ ಭೋಪಾಲ್ ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹಾರ್ದಾ ಜಿಲ್ಲಾಧಿಕಾರಿಗಳಾದ ರಿಷಿ ಗಾರ್ಗ್ ಮಾಹಿತಿ ನೀಡಿದ್ದಾರೆ.
ಪಟಾಕಿ ಕಾರ್ಖಾನೆಯಲ್ಲಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಏಕಾಏಕಿ ಸ್ಪೋಟ ಸಂಭವಿಸಿದೆ.
ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಗನ್ ಪೌಡರ್ ಇದ್ದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿಯಾಗಿದ್ದಾರೆ ಸುತ್ತಮುತ್ತಲಿನ ಪ್ರದೇಶ ಆವರಿಸಿಕೊಂಡಿದೆ.
ಸ್ಪೋಟದ ತೀವ್ರತೆ ಕಾರ್ಖಾನೆ ಸಮೀಪ ಇದ್ದ ಸುಮಾರು 50 ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ನೋಡು ನೋಡುತ್ತಿದ್ದಂತೆಯೇ ಬೆಂಕಿಯ ಜಾಲಗಿ ಸಿಲುಕಿದ ಹತ್ತಾರು ಮನೆಗಳು ಸುಟ್ಟಿ ಭಸ್ಮವಾಗಿವೆ.
Harda blast news ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ, ಗಾಯಾಳುಗಳಿಗೆ ತಲ 50,000 ಪರಿಹಾರ ಪ್ರಕಟಿಸಿದ್ದಾರೆ.