Wednesday, October 2, 2024
Wednesday, October 2, 2024

Dayavittu Gamanisi Team ‘ದಯವಿಟ್ಟು ಗಮನಿಸಿ’ ಸದ್ದಿಲ್ಲದೇ ಸಾಹಿತ್ಯ ಸೇವೆ

Date:

Dayavittu Gamanisi Team ದಯವಿಟ್ಟು ಗಮನಿಸಿ ಎಂಬ ತಂಡವು ಬೆಂಗಳೂರಿನಲ್ಲಿ ಜುಲೈ 2023ರ ಸುಮಾರಿಗೆ ಅಪರಿಚಿತ ಓದುಗರು ಎಂಬ ಒಂದು ಕಾರ್ಯಕ್ರಮವನ್ನು ಶುರುಮಾಡಿತು. ಹೀಗೆ ಸಾಹಿತ್ಯದ ನಾಡಾದ ಶಿವಮೊಗ್ಗದಲ್ಲೂ ಸಾಹಿತ್ಯ ಅಭಿರುಚಿ ಉಳ್ಳವರನ್ನು ಹೆಕ್ಕಿ ತೆಗೆಯಲು ನವೆಂಬರ್ 2023ರ ಹೊತ್ತಿಗೆ ಅಪೂರ್ವ ಸಂಗಮ ಎಂಬ ತಂಡದಿಂದ ಅಪರಿಚಿತ ಓದುಗರು ಎಂಬ ಕಾರ್ಯಕ್ರಮವು ಪ್ರಾರಂಭವಾಯಿತು.

ಅಪರಿಚಿತ ಓದುಗರು ಎನ್ನುವ ತಂಡವು ಸಾಹಿತ್ಯಾಸಕ್ತ ಓದುಗರೇ ಕಟ್ಟಿಕೊಂಡು ತಿಂಗಳಿಗೊಮ್ಮೆ ಬಿಡುವು ಮಾಡಿಕೊಂಡು ಪ್ರಕೃತಿಯ ಮಡಿಲಲ್ಲಿ ಸೇರಿ ಪುಸ್ತಕ ಓದು, ಚರ್ಚೆ, ವಿಚಾರ ವಿನಿಮಯ, ಸಾಹಿತ್ಯ ಸಂವಾದ, ಹೊಸ ಬರಹಗಾರರ ಪುಸ್ತಕ ಪರಿಚಯ, ಕನ್ನಡ ಸಾಹಿತ್ಯ ಸ್ಪರ್ಧೆ ಹೀಗೆ ಕನ್ನಡ ಸಾಹಿತ್ಯದ ಅಭಿರುಚಿಗೆ ಮತ್ತಷ್ಟು ಮೆರಗು ನೀಡಿ, ಒಂದಷ್ಟು ಸಮಾನ ಮನಸ್ಕ ಅಪರಿಚಿತರ ಪರಿಚಯ ಮಾಡಿಕೊಂಡು ಎಲ್ಲಾ ಸೇರಿ ನಡೆಸಿಕೊಂಡು ಹೋಗುತ್ತಿರುವ ಕಾರ್ಯಕ್ರಮವಾಗಿದೆ.

Dayavittu Gamanisi Team ಅಪೂರ್ವ ಸಂಗಮ ತಂಡದ ಅಪರಿಚಿತ ಓದುಗರ ಮೂರನೇ ಕಾರ್ಯಕ್ರಮದಲ್ಲಿ ಸಾಕಷ್ಟು ಪುಸ್ತಕಗಳ ಚರ್ಚೆ ಹಾಗೂ ಸಂವಾದವು ನಡೆಯಿತು. ಈ ಕಾರ್ಯಕ್ರಮದಲ್ಲಿ ಕಳೆದ 4 ವಾರಗಳ ಸ್ಪರ್ಧೆಗಳಲ್ಲಿ ವಿಜೇತರಾದಂತಹವರಿಗೆ ಪುಸ್ತಕ ಬಹುಮಾನವನ್ನು ವಿತರಿಸಲಾಯಿತು. ಸಣ್ಣ ಕಥೆಗಳ ಬರಹ ಸ್ಪರ್ಧೆಯಲ್ಲಿ ನಾಗಭೂಷಣ್, ಮಧ್ಯಮ ವರ್ಗದವರ ಜೀವನ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಕೀರ್ತನ ಲೋಕೇಶ್, ಕವಿತೆ – ಕವನ ಸ್ಪರ್ಧೆಯಲ್ಲಿ ಅಕ್ಷತಾ ಮೊದಲ ಬಹುಮಾನ, ಕೀರ್ತನ ಲೋಕೇಶ್ ದ್ವಿತೀಯ ಬಹುಮಾನ, ಪ್ರಾಮತ್ ತೃತೀಯ ಬಹುಮಾನ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ನಿಮ್ಮ ಮನಸ್ಸಿನ ಮಾತು ಎಂಬ ಸ್ಪರ್ಧೆಯಲ್ಲಿ ಕೀರ್ತನ ಲೋಕೇಶ್ ಬಹುಮಾನ ಪಡೆದರು. ವಿಜೇತರಿಗೆ ಕಾರ್ಯಕ್ರಮದ ಆಯೋಜಕರಾದ ಗುರುದತ್ತ್ ಎಸ್ ರವರು ಪುಸ್ತಕ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅಪರಿಚಿತ ಓದುಗರು ಉಪಸ್ಥಿತರಿದ್ದು ಪರಿಚಿತ ಓದುಗರಾದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...