Kagodu Thimmappa ಭೂರಹಿತರ ಪರ ಹೋರಾಟದ ರೂವಾರಿಗಳು, ರಾಜ್ಯ ರಾಜಕೀಯದ ಹಿರಿಯ ಮುತ್ಸದ್ದಿಗಳು, ವಿಧಾನಸಭೆಯ ಮಾಜಿ ಸಭಾಪತಿಗಳಾದ ಸನ್ಮಾನ್ಯ ಶ್ರೀ ಕಾಗೋಡು ತಿಮ್ಮಪ್ಪ ಅವರಿಗೆ ಹಾಗೂ ಸಹಕಾರಿ ಕ್ಷೇತ್ರದ ಹಿರಿಯ ಧುರೀಣರು, ಶೈಕ್ಷಣಿಕ ಕ್ಷೇತ್ರದ ಅನುಭವಿಗಳಾದ ಸನ್ಮಾನ್ಯ ಶ್ರೀ ಹರನಾಥರಾವ್ ಅವರಿಗೆ ಅವರ ಜೀವಮಾನ ಸಾಧನೆಯನ್ನು ಗುರುತಿಸಿ ಗೌರವಿಸುವ ಸದುದ್ದೇಶದಿಂದ ಸಾಗರದ “ನಾಗರೀಕ ಅಭಿನಂದನಾ ಸಮಿತಿ” ಯು “ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಸದರಾದ ಬಿ ವೈ ರಾಘವೇಂದ್ರ ಅವರು ಭಾಗವಹಿಸಿ, ಮನದಾಳದ ಮಾತನ್ನು ಸಭಿಕರೊಂದಿಗೆ ವಿನಯಪೂರ್ವಕವಾಗಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಸಚಿವರಾದ ಮಧು ಬಂಗಾರಪ್ಪ ಅವರು, ಶಾಸಕರಾದ ಶ್ರೀ ಗೋಪಾಲಕೃಷ್ಣ , ಮಾಜಿ Kagodu Thimmappa ಶಾಸಕರಾದ ಶ್ರೀ ಹರತಾಳು ಹಾಲಪ್ಪ , ಪ್ರಮುಖರಾದ ಶ್ರೀ ಜಯಂತ್ ಅವರು ಸೇರಿದಂತೆ ಅನೇಕ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

