Friday, December 5, 2025
Friday, December 5, 2025

B. Y. Raghavendra ಗೌ.ಅಡ್ವಾಣಿಯವರು ನಮ್ಮಂಥವರಿಗೆ ಸ್ಫೂರ್ತಿ ನೀಡಿದ ಹಿರಿಯ ನಾಯಕರು- ಸಂಸದ ರಾಘವೇಂದ್ರ

Date:

B. Y. Raghavendra ಮಾಜಿ ಉಪ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ಲಾಲಕೃಷ್ಣ ಆಡ್ವಾಣಿಯವರಿಗೆ ದೇಶದ ಅತ್ಯುನ್ನತ ಗೌರವವಾದ ʻಭಾರತ ರತ್ನʼ ಘೋಷಣೆಯಾಗಿರುವುದು ಅತ್ಯಂತ ಸಂತಸ ತಂದಿದೆ ಎಂದು ಶಿವಮೊಗ್ಗ ಸಂಸದರಾದ ಬಿ. ವೈ ರಾಘವೇಂದ್ರ ಅವರು
ಹೇಳಿದ್ದಾರೆ.

B. Y. Raghavendra ದೇಶದ ಹಿತಕ್ಕಾಗಿ ಹಲವು ದಶಕಗಳ ಕಾಲ ಹಗಲಿರುಳು ಶ್ರಮಿಸಿ, ನಾನಾ ಸಂಕಷ್ಟಗಳನ್ನು ದಿಟ್ಟತನದಿಂದ ಎದುರಿಸಿ, ನನ್ನಂತಹ ಅನೇಕರಿಗೆ ಸ್ಫೂರ್ತಿ ಆಗಿರುವವರು ಶ್ರೀ ಲಾಲಕೃಷ್ಣ ಆಡ್ವಾಣಿಯವರು. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ, ಶ್ರೀರಾಮ ಜನ್ಮಭೂಮಿ ಹೋರಾಟ ಸೇರಿದಂತೆ ಇವರ ಅನೇಕ ಚಳುವಳಿಗಳು ಸಮಸ್ತ ದೇಶಭಕ್ತ ಭಾರತೀಯರ ಹೃದಯದಲ್ಲಿ ಸ್ಥಾನ ಪಡೆದಿವೆ. ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ, ಕೇಂದ್ರ ಸರ್ಕಾರದ ವಿವಿಧ ಖಾತೆಗಳ ಸಚಿವರಾಗಿ ಹಾಗೂ ಹೆಮ್ಮೆಯ ಉಪ ಪ್ರಧಾನಿಯಾಗಿ ಇವರು ತೆಗೆದುಕೊಂಡ ನಿರ್ಧಾರಗಳು ದೇಶದ ಕೀರ್ತಿಯನ್ನು ಹೆಚ್ಚಿಸಿವೆ.
ಸನ್ಮಾನ್ಯರ ಶ್ರೇಷ್ಠ ಜೀವನವನ್ನು ಗೌರವಿಸಿ ಈ ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಧಾನಿ ಶ್ರೀ. ನರೇಂದ್ರ ಮೋದಿ
ಯವರಿಗೆ ಹೃತ್ಪೂರ್ವಕ ಪ್ರಶಂಸೆಗಳು ಎಂದು x ಖಾತೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...