Saturday, December 6, 2025
Saturday, December 6, 2025

Kanasinakatte Govt Primary School ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವುದು ಕರ್ತವ್ಯ – ಶ್ರೀನಿಧಿ ಹೆಬ್ಬಾರ್

Date:

Kanasinakatte Govt Primary School ನಾಡು ನುಡಿ, ಸಂಸ್ಕೃತಿ ಬೆಳೆಸುತ್ತಿರುವುದು ಹಳ್ಳಿಯ ಕನ್ನಡ ಮಾಧ್ಯಮ ಶಾಲೆಗಳು. ಆದ್ದರಿಂದ ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಯೂತ್ ಫಾರ್ ಸೇವಾ ಮುಖ್ಯಸ್ಥ ಶ್ರೀನಿಧಿ ಹೆಬ್ಬಾರ್ ಹೇಳಿದರು.

ಯೂತ್ ಫಾರ್ ಸೇವಾ, ಗೋ ಗ್ರೀನ್, ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ, ವಂದೇ ಮಾತರಂ ಗುರುಕುಲ, ಧಾರವಾಡ ಜೇನುಗೂಡು, ಮಂಡ್ಯ ಸಂಸ್ಥೆಗಳ ಸಹಯೋಗದಲ್ಲಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕನಸಿನಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಳ್ಳಿಯ ಮಕ್ಕಳಿಗೆ ಪೇಟೆಯ ವಾತಾವರಣ ದೊರಕಿದರೆ, ಕಿಳರೀಮೆ ದೂರವಾಗಿ ಅವರೊಂದಿಗೆ ಸ್ವರ್ಧೆಗೆ ಇಳಿಯಲು ಹುಮ್ಮಸ್ಸು ದೊರಕುತ್ತದೆ. ಆ ನಿಟ್ಟಿನಲ್ಲಿ ಹಲವಾರು ಕೈಗಾರಿಕೋದ್ಯಮಿಗಳು ನೆರವು ನೀಡುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲೂ ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಧಾರವಾಡದ ವಂದೇ ಮಾತರಂನ ಮಧುಸೂದನ್ ಮಾತನಾಡಿ, ನಮ್ಮ ಸಂಸ್ಥೆ ನಿರ್ಗತಿಕ ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ, ಜೀವನ ಕಟ್ಟಿ ಕೊಳ್ಳುವ ಕಲೆ ಕಲಿಸುತ್ತಿದ್ದು, ಸಮಾಜ ಸೇವೆಗೆ ತೊಡಗಿಸಿಕೊಳ್ಳುವ ಬಗ್ಗೆಯೂ ಕಲಿಸಲಾಗುತ್ತದೆ ಎಂದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಸಮಾನ ಮನಸ್ಕರು ಸೇರಿ ಇಂತಹ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು, ಕನ್ನಡ ಪ್ರಾಥಮಿಕ ಶಾಲೆಗಳನ್ನು ಜೀರ್ಣೋದ್ದಾರ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.

ಚೇರ್ಮನ್‌ ಎಸ್.ಎಸ್.ವಾಗೇಶ್ ಮಾತನಾಡಿ, ಈ ಶಾಲೆ ಪ್ರಾರಂಭವಾಗಿ 75 ವರ್ಷ ಪೂರೈಸಿರುವುದು ಹಾಗೂ ನಮ್ಮ ಯೂತ್ ಹಾಸ್ಟ್ರೇಲ್ ಮೈಸೂರಿನಲ್ಲಿ ಪ್ರಾರಂಭಗೊಂಡು ಅಮೃತ ವರ್ಷ ಆಚರಿಸುತ್ತಿರುವುದು ಸಂತೋಷದ ಸಂಗತಿ. ಈ ಸಂದರ್ಭದಲ್ಲಿ ನಮ್ಮ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿರುವುದಾಗಿ ತಿಳಿಸಿದರು.

Kanasinakatte Govt Primary School ಗೋಗ್ರೀನ್ ಶ್ವೇತಾ ಆಚಾರ್ಯ, ಅರ್ಶಿಕ ದೀಪಕ್, ವಿಜಯಲಕ್ಷ್ಮೀ ಕಾರ್ತಿಕ್, ನಿರಂಜನಿ ರವೀಂದ್ರ, ಯೂತ್ ಸೇವಾದ ಶೋಭ, ಹರೀಶ್, ಯೂತ್ ಹಾಸ್ಟೇಲ್ಸ್ ನ ಎಂ.ಪಿ.ನಾಗರಾಜ್, ಸುರೇಶ್ ಕುಮಾರ್, ಯೂಥ್ ಹಾಸ್ಟೆಲ್ ಜಿಲ್ಲಾ ಘಟಕ ಕಾರ್ಯದರ್ಶಿ ಪ್ರಶಾಂತ್, ಶಾಲೆಯ ಮುಖ್ಯ ಶಿಕ್ಷಕರು, ಅಧ್ಯಾಪಕರು, ಗ್ರಾಮಸ್ಥರು ಭಾಗವಹಿಸಿ ಹಳ್ಳಿಶಾಲೆಗೆ ಉತ್ತಮವಾಗಿ ಬಣ್ಣಹಚ್ಚಿ ಸಾಧಕರ ಭಾವಚಿತ್ರಗಳನ್ನು ಗೋಡೆಮೇಲೆ ಮೂಡಿಸಿ ಅಲಂಕರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...