Sports News ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಡಬಲ್ಸ್ ಫೈನಲ್ ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಗೆಲುವು ಸಾಧಿಸಿದೆ. ಜಯದೊಂದಿಗೆ 43 ವರ್ಷದ ಕನ್ನಡಿಗ ರೋಹನ್ ಬೋಪಣ್ಣ ಅವರು ಗ್ರ್ಯಾನ್ ಸ್ಲ್ಯಾಂ ಗೆದ್ದ ಅತಿ ಹಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಕ್ರೀಡೆಯಿಂದ ಬೋಪಣ್ಣ ಅವರು ನಿವೃತ್ತಿ ನಿರ್ಧಾರ ಕೈಗೊಳ್ಳುವ ಸಮಯ ವದು. ಅಂತದ್ರಲ್ಲಿ ಕನ್ನಡಿಗ ರೋಹನ್ ಬೋಪಣ್ಣ 43ನೇ ವಯಸ್ಸಿನಲ್ಲೂ ಎಂದಿನ ಉತ್ಸಾಹದಿಂದ ತರುಣರು ನಾಚುವಂತೆ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದು ವಯಸ್ಸು ಎನ್ನುವುದು ಕೇವಲ ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
Sports News ಬೋಪಣ್ಣ ಗ್ರ್ಯಾನ್ ಸ್ಲಾಮ್ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುಂಚೆ ಈ ದಾಖಲೆ ಡೆನ್ಮಾರ್ಕ್ ನ ಜಿಂಜುಲಿಯನ್ ಹೆಸರಲ್ಲಿತ್ತು. ಅವರು 40ನೇ ವಯಸ್ಸಿನಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. 43 ವರ್ಷದ ಬೋಪಣ್ಣ ಆ ದಾಖಲೆಯನ್ನು ಮುರಿದಿದ್ದಾರೆ. ಎನಿ ಫೈನಲ್ ಪಂದ್ಯದ ಗೆಲುವಿನೊಂದಿಗೆ ಡಬಲ್ ನಲ್ಲಿ ನಂಬರ್ ವನ್ ಪಟ್ಟಕ್ಕೆ ಬೋಪಣ್ಣ ಏರಿದ್ದಾರೆ. ಅಗ್ರ ಶ್ರೀಯಾಂಕ ಪದದ ವಿಶ್ವದ ಅತಿ ಹಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ನಿನ್ನೆ ಮೆಲ್ಬೋರ್ನ್ ನಲ್ಲಿ ಒಂದು ಗಂಟೆ 39 ನಿಮಿಷ ನಡೆದ ಫೈನಲ್ ನಲ್ಲಿ ಬೋಪಣ್ಣ – ಎಬ್ದೆನ್ ಇಟಲಿಯ ಬೊಲೆಲ್ಲಿ- ವವಸ್ಸೋರಿ ಜೋಡಿಯನ್ನು 7-6,7-5 ನೇರ ಸೆಟ್ ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಇದರೊಂದಿಗೆ 3.98 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತವನ್ನು ಈ ಜೋಡಿ ಪಡೆದುಕೊಂಡಿದೆ.