Saturday, November 16, 2024
Saturday, November 16, 2024

National Girl Child Day ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ & ಗೌರವಿಸುವುದು ಎಲ್ಲರ ಕರ್ತವ್ಯ- ನ್ಯಾ. ಸಿ.ಎನ್.ಚಂದನ್

Date:

National Girl Child Day ಸಮಾಜದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಮಾಡುವುದು, ಅವರನ್ನು ಗೌರವಿಸುವುದು ಪ್ರತಿಯೊಬ್ಬರ ನಾಗರೀಕರ ಕರ್ತವ್ಯವಾಗಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ ಎನ್ ಚಂದನ್ ತಿಳಿಸಿದರು.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಮೇರಿ ಇಮ್ಯಾಕ್ಯುಲೇಟ್ ಶಾಲೆ ಸೇಕ್ರೇಡ್ ಹಾರ್ಟ್ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ -2024 ಪ್ರಯುಕ್ತ (ಬೇಟಿ ಬಚ್ಚಾವೋ ಬೇಟಿ ಪಡಾವೋ) ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ ಕಾರ್ಯಕ್ರಮ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಇರುವ ಕಾಯ್ದೆಗಳ ಹಾಗೂ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

National Girl Child Day ಈ ಕಾರ್ಯಕ್ರಮ ಮಕ್ಕಳಿಗಾಗಿ ಅಲ್ಲ. ಬದಲಾಗಿ ಮಕ್ಕಳನ್ನು ಯಾರು ರಕ್ಷಿಸಬೇಕು ಅವರಿಗೆ ಅರಿವು ನೀಡಬೇಕಾಗಿರುವುದು ಅವಶ್ಯಕತೆ ಇದೆ.

ಮನೆಯೆ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದು ಗಾದೆಯಲ್ಲ ಅದು ವಾಸ್ತವ ಸತ್ಯ. ಮಕ್ಕಳಿಗೆ ಶಿಕ್ಷಣ ನೀಡಲು ತಾಯಿ ಶಿಕ್ಷಣವಂತವಳಾಗಿರಬೇಕು. ಆಗ ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾಳೆ ಆದ್ದರಿಂದ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ವಿದ್ಯಾವಂತರಾಗಬೇಕು ಆಗ ಮಾತ್ರ ಸಮಾನತೆ ಕಾಣಲು ಸಾಧ್ಯವಾಗುತ್ತದೆ ಎಂದರು.

ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಸಾಕ್ಷರತೆ ನಿಗದಿತ ಮಟ್ಟಕ್ಕೆ ತಲುಪಿಲ್ಲ. ಶೇ.100 ರಲ್ಲಿ ಶೇ.62 ರಷ್ಟು ಮಾತ್ರ ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದು ಉಳಿದವರು ಶಾಲೆಯಿಂದ ಹೊರಗೆ ಉಳಿಯುತ್ತಿದ್ದಾರೆ.ಉಳಿದ ಶೇ.38 ಹೆಣ್ಣುಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಕೆಲಸ ಆಗಬೇಕಿಗೆ. ಇದಕ್ಕೆ ಪ್ರತಿಯೊಬ್ಬರು ಶ್ರಮೀಸಬೇಕು

ಎಲ್ಲಿಯವರೆಗೆ ನಮ್ಮ ಮನಸ್ಥಿತಿ ಬದಲಾವಣೆ ಆಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಹೆಣ್ಣಿನ ಶಿಕ್ಷಣ ದೊರೆಯುವುದಿಲ್ಲ ಎಂದರು.

ಭ್ರೂಣಹತ್ಯೆ ನಿಷೇಧ ಕಾನೂನು ಜಾರಿ ಆಗಿದೆ. ಇತ್ತೀಚೆಗೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಕಡಿಮೆ ಆಗಿದೆ ಆದರೆ ಇದರ ಬಗ್ಗೆ ಜಾಗೃತಿ ಅರಿವು ಅಗತ್ಯವಾಗಿದೆ. ನೈತಕತೆ ಎಂಬುದು ಪ್ರತಿಯೊಬ್ಬರಲ್ಲೂ ಇರಬೇಕು. ಹೆಣ್ಣಿಗೆ ನಾವು ಸಾಧಿಸಲು ಅವಕಾಶ ನೀಡಿಲ್ಲ. ಆಕೆಯಲ್ಲಿ ಕೂಡ ಸಾಧಿಸು ಬಲವಿದೆ ಹಾಗೂ ಈಗಿರುವ ಕಾನೂನಿನ ಅಡಿ ಎಲ್ಲರಿಗೂ ಸಮಾನ ಅವಕಾಶ ಇದೆ.

ನಿಮ್ಮ ಹಕ್ಕುಗಳು ಉಲ್ಲಂಘನೆ ಆದ ಸಂದರ್ಭದಲ್ಲಿ ಅದನ್ನು ಕೇಳಿ ಪಡೆವುದು ನಿಮ್ಮ ಹಕ್ಕು ಆಗಿದೆ ಮಹಿಳೆಯರ ರಕ್ಷಣೆಗೆ ಕಾನೂನುಗಳಿವೆ ಅದರ ಬಗ್ಗೆ ಎಲ್ಲರಲ್ಲಿ ಅರಿವು ಇರುವುದು ಅಗತ್ಯವಾಗಿದೆ.

ಬಾಲ್ಯ ವಿವಾಹ ಕಾನೂನಿನಡಿ 18 ವರ್ಷದ ಒಳಗೆ ವಿವಾಹ ನಿಷೇಧವಿದೆ. ಫೋಕ್ಸೋ ಕಾಯ್ದೆ ಬಗ್ಗೆ ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕು. ಶಿಕ್ಷಣದ ಹಕ್ಕು, ವರದಕ್ಷಿಣೆ ಕಿರುಕುಳ ಕಾಯ್ದೆ, ಮಾನವ ಕಳ್ಳಸಾಗಾಣಿಕೆ, ಹೆಣ್ಣು ಮಕ್ಕಳ ಆಸ್ತಿಯ ಹಕ್ಕು ಇತರೆ ಕಾಯ್ದೆಗಳಿದ್ದು, ಗಂಡು ಹೆಣ್ಣು ಸಮಾನರು ಎನ್ನುವ ಕಾನೂನು ಇದೆ.

ನಮ್ಮ ದೇಶದ ಭವಿಷ್ಯ ನಿಮ್ಮ ಕೈಯಲಿದೆ. ಶಾಲೆಗಳಿಂದ ಯಾರು ಹೊರಗೆ ಉಳಿಯಬೇಡಿ ಶಿಕ್ಷಣ ಪಡೆದುಕೊಂಡು ಪ್ರಜ್ಞಾವಂತರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್, ಮಾತನಾಡಿ ಆರೋಗ್ಯ ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಮಹಿಳೆಯರಲ್ಲಿ ಸಾಮಾನ್ಯವಾಗಿರುವ ರಕ್ತಹೀನತೆ ಮುಕ್ತ ಮಾಡುವ ಮಾತ್ರೆಗಳು ಸಾಕಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿದೆ. ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಹಾಗೂ ಅವರ ಆರೋಗ್ಯ ತಪಾಸಣೆ ಕಾರ್ಯಕ್ರಮ ಮಾಡಲಾಗುತ್ತಿದೆ.

ಸರ್ಕಾರದ ವತಿಯಿಂದ ಪ್ರತಿ ಶಾಲೆ, ಹಾಸ್ಟೆಲ್‍ಗಳಲ್ಲಿ ಹೆಣ್ಣುಮಕ್ಕಳಿಗೆ ಶುಚಿ ಪ್ಯಾಡ್ ವಿತರಣೆ, ಬಾಲ್ಯದ ಗರ್ಭಧಾರಣೆ ತಡೆಯುವ ಉದ್ದೇಶದಿಂದ ಸ್ನೇಹ ಕ್ಲಿನಿಕ್ ಆರಂಭ, ಪ್ರತಿ ಆಸ್ಪತ್ರೆಯಲ್ಲಿ ಮಹಿಳೆಯರ ಆರೋಗ್ಯ ಕುರಿತು ವಿಶೇಷ ಗಮನ ನೀಡಲಾಗಿದೆ ಎಂದರು.

ಈ ವೇಳೆ ಬೇಟಿ ಬಚ್ಚವೋ ಬೇಟಿ ಪಡಾವೋ ಪ್ರತಿಜ್ಞಾವಿಧಿ ಯನ್ನು ಬೋಧಿಸಲಾಯಿತು ಮತ್ತು ಬೇಟಿ ಬಚ್ಚವೋ ಬೇಟಿ ಪಡಾವೋ ಸಹಿ ಅಭಿಯಾನಕ್ಕೆ ನ್ಯಾಯಾಧೀಶರಾದ ಸಿ ಎನ್ ಚಂದನ್ ಅವರು ಸಹಿ ಹಾಕುವ ಮೂಲಕ ಚಾಲನೆ ನೀಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತನ್ವಿ , ಪ್ರಜ್ಞಾ, ಅಶ್ವಿನಿ, ಪ್ರಣತಿ, ಸಮೃದ್ದಿ ,ದಿಯಾ ಹಗಡೆ ಇತರೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಚಂದ್ರಪ್ಪ, ಶಿಕ್ಷಣ ಇಲಾಖೆಯ ಹಸನ್, ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಲೂಸಿಯಾ, ಉಪನ್ಯಾಸಕಿ ಡಾ.ಸಂಧ್ಯಾ ಕಾವೇರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಹೊಳಲೂರುನ ನಿವಾಸಿ ನಾಪತ್ತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮಾಹಿತಿ

Shivamogga Police ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಣೆಯಾದವರ ಕುರಿತು...

MESCOM ಗಮನಿಸಿ ನವೆಂಬರ್ 17 ರಿಂದ 20 ವರೆಗೆ ಹಾಡೋನಹಳ್ಳಿ ಸುತ್ತಮುತ್ತ ವಿದ್ಯುತ್ ಸರಬರಾಜಿಲ್ಲ. ನಾಕುದಿನ ಕತ್ತಲೆ!

MESCOM ಹೊಳಲೂರು 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಮಾರ್ಗಗಳಲ್ಲಿ ಲಿಂಕ್...

Shimoga Gayatri Vidyalaya ಪರಿಪೂರ್ಣತೆ ಸಾಧಿಸಲು ಮಕ್ಕಳಿಗೆ ಸಂಸ್ಕಾರ & ಕೌಶಲ್ಯ ಅಗತ್ಯ – ಜಿ‌.ವಿಜಯ ಕುಮಾರ್

Shimoga Gayatri Vidyalaya ಮಕ್ಕಳು ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳಬೇಕಾದರೆ ಸಂಸ್ಕಾರ...

Rotary Shivamogga ರೋಟರಿ ಪೂರ್ವಯುವಶಕ್ತಿ ನವಭಾರತ ನಿರ್ಮಾಣಕ್ಕೆ ಬಹಳ ಪ್ರಮುಖ- ಡಾ.ಪರಮೇಶ್ವರ್ ಡಿ.ಶಿಗ್ಗಾಂವ್

Rotary Shivamogga ರಾಷ್ಟ್ರ ನಿರ್ಮಾಣದಲ್ಲಿ ಯುವ ಶಕ್ತಿಯ ಕೊಡುಗೆ ಅನನ್ಯವಾದುದೆಂದು ರೋಟರಿ...