Brahma Kumaris Shivamogga ಬ್ರಹ್ಮಾಕುಮಾರೀಸ್ ಸದ್ಭಾವನಾ ಸಂಕಲ್ಪ
ದಿವ್ಯ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ದೇವಭೂಮಿ ಭಾರತದ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರದ ಲೋಕಾರ್ಪಣೆಯ ಸುಸಂದರ್ಭದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಲ್ಲಿ ಧ್ಯಾನ ಸತ್ಸಂಗ ನಡೆಯಿತು.
ಸನಾತನ ಧರ್ಮದ 33 ಕೋಟಿ ದೇವತೆಗಳು ನಮ್ಮ ಪೂಜ್ಯರು-ಪೂರ್ವಜರು .
ಇಂದು ಪೂಜ್ಯ ಶ್ರೀರಾಮನ ಅಲೆಯು ಐಕ್ಯತಾ ಭಾವ ಮೂಡಿಸಿದೆ. “ವಸುದೈವ ಕುಟುಂಬಕಂ” ಎಂಬ ಭ್ರಾತೃಭಾವದ ಔದಾರ್ಯ ಕಾಣುತ್ತಿದೆ , ನಾವೆಲ್ಲರೂ ಮರ್ಯಾದಾ ಪುರಷೋತ್ತಮನ ಆದರ್ಶಗಳನ್ನು ಅನುಸರಿಸೋಣ ಎಂದು ಶ್ರೀರಾಮಜೋತಿ ಬೆಳಗಿಸಿದ ಸಂಸ್ಥೆಯ ಮುಖ್ಯಸ್ಥರಾದ ರಾಜಯೋಗಿನಿ ಅನಸೂಯಕ್ಕ ನುಡಿದರು.
ಇದೇ ಸಂದರ್ಭದಲ್ಲಿ ಸದ್ಭಾವನೆ, ಸೋದರತ್ವದ ಆತ್ಮಜಾಗೃತಿಯೊಂದಿಗೆ ರಾಮರಾಜ್ಯದ ಸಂಕಲ್ಪವನ್ನು ಎಲ್ಲರೂ ಸಾಮೂಹಿಕವಾಗಿ ಕೈಗೊಂಡರು.ನಂತರ
ಪ್ರಸಾದ ವಿತರಿಸಲಾಯಿತು.
Brahma Kumaris Shivamogga ಸಂಸ್ಥೆಯ ಅನ್ನಪೂರ್ಣಕ್ಕ, ಮಂಜಪ್ಪ , ಚೆನ್ನಮ್ಮ, ವಿಜಯಕುಮಾರ, ಪ್ರಭಾವತಿ ಇನ್ನಿತರು ಉಪಸ್ಥಿತರಿದ್ದರು.