Karnataka Sangha Shivamogga ಪ್ರತಿ ವರ್ಷದಂತೆ ಶಿವಮೊಗ್ಗ ಕರ್ನಾಟಕ ಸಂಘವು 2023ನೆಯ ಸಾಲಿನಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನವನ್ನು ನೀಡಲು ಲೇಖಕರಿಂದ ಮತ್ತು ಪ್ರಕಾಶಕರಿಂದ ಕೆಳಕಂಡ ನಿಯಮಗಳಿಗೆ ಒಳಪಟ್ಟಂತೆ ಕೃತಿಗಳನ್ನು ಆಹ್ವಾನಿಸುತ್ತಿದೆ.
*ಮರುಮುದ್ರಣಗೊಂಡ ಕೃತಿಗಳಿಗೆ, ಹಸ್ತ ಪ್ರತಿಗಳಿಗೆ ಮತ್ತು ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ.
*ಈ ಹಿಂದೆ ಕರ್ನಾಟಕ ಸಂಘದ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ, ಇನ್ನಿತರೆ ಯಾವುದೇ ವಿಭಾಗಕ್ಕೆ ಸ್ಪರ್ಧಿಸಬಹುದು.
*ಕರ್ನಾಟಕ ಸಂಘದ ಸದಸ್ಯರು ಭಾಗವಹಿಸುವಂತಿಲ್ಲ.
*ಪುಸ್ತಕ ಬಹುಮಾನಕ್ಕೆ ಪುಸ್ತಕದ ಒಟ್ಟು 4 ಪ್ರತಿಗಳನ್ನು ಕಳುಹಿಸಬೇಕು / ಬಹುಮಾನಕ್ಕೆ ಕಳುಹಿಸಿದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.
*ಅಂಕಣ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಗ್ಗೆ ಕಡ್ಡಾಯವಾಗಿ ದಾಖಲೆ ನೀಡಬೇಕು.
*Karnataka Sangha Shivamogga ಬರಹಗಾರರು/ ಪ್ರಕಾಶಕರು- ಪತ್ರದ ಮುಖೇನ ಸ್ವವಿವರ / ವಿಳಾಸ / ಮೊಬೈಲ್ ನಂ. ಮತ್ತು ಯಾವ ಪ್ರಕಾರಕ್ಕೆ ಸಲ್ಲಿಸುತ್ತಿರುವುದು ಎಂಬ ಬಗ್ಗೆ ಲಿಖಿತವಾಗಿ / ಮುದ್ರಿಸಿ ವಿವರವನ್ನು ಕಳುಹಿಸಬೇಕು.
*ಒಂದು ಪ್ರಕಾರಕ್ಕೆ ಕನಿಷ್ಠ 5 ಕೃತಿಗಳು ಬರದಿದ್ದರೆ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.
*ವಿವಿಧ ಪ್ರಕಾರಕ್ಕೆ ಪುಸ್ತಕ ಕಳಿಸಿದಲ್ಲಿ ಒಂದೊoದು ಪ್ರಕಾರಕ್ಕೂ 4 ಪುಸ್ತಕಗಳು ಪ್ರತ್ಯೇಕವಾಗಿರಬೇಕು.
ಇವರ ಹೆಸರಿನ ಬಹುಮಾನಗಳು ದೊರೆಯಲಿವೆ.
*ಕಾದಂಬರಿ-ಕುವೆoಪು
*ಅನುವಾದ-
ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ
*ಮಹಿಳಾ ಸಾಹಿತ್ಯ -ಶ್ರೀಮತಿ ಎಂ.ಕೆ. ಇಂದಿರಾ
*ಮುಸ್ಲಿ0 ಬರಹಗಾರರು
-ಶ್ರೀ ಪಿ. ಲಂಕೇಶ್
*ಕವನ ಸಂಕಲನ –
ಡಾ. ಜಿ. ಎಸ್. ಶಿವರುದ್ರಪ್ಪ
*ಅಂಕಣ ಬರಹಗಾರರು – ಡಾ. ಹಾ. ಮಾ. ನಾಯಕ
*ಸಣ್ಣ ಕಥಾ ಸಂಕಲನ
- ಡಾ. ಯು. ಆರ್. ಅನಂತಮೂರ್ತಿ
*ನಾಟಕ
-ಡಾ. ಕೆ. ವಿ. ಸುಬ್ಬಣ್ಣ
*ಪ್ರವಾಸ ಸಾಹಿತ್ಯ
-ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತಿç
*ವಿಜ್ಞಾನ ಸಾಹಿತ್ಯ
-ಶ್ರೀ ಹಸೂಡಿ ವೆಂಕಟಶಾಸ್ತಿç
*ಮಕ್ಕಳ ಸಾಹಿತ್ಯ
-ಡಾ. ನಾ. ಡಿಸೋಜ
*ವೈದ್ಯ ಸಾಹಿತ್ಯ
-ಡಾ. ಹೆಚ್. ಡಿ. ಚಂದ್ರಪ್ಪಗೌಡ
ಮೇಲ್ಕಂಡ ಪ್ರಕಾರಗಳ ಸಾಹಿತ್ಯ ಕೃತಿಗಳ (ನಾಲ್ಕು) ಪ್ರತಿಗಳನ್ನು ಸಲ್ಲಿಸಲು ದಿನಾಂಕ 20-03-2024 ರವರೆಗೆ ಕಾಲಾವಕಾಶವಿರುತ್ತದೆ.ನಂತರ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
ಪುಸ್ತಕಗಳನ್ನು ಗೌರವ ಕಾರ್ಯದರ್ಶಿಗಳು, ಕರ್ನಾಟಕ ಸಂಘ, ಬಿ.ಹೆಚ್.ರಸ್ತೆ, ಶಿವಮೊಗ್ಗ-577201 ಇವರಿಗೆ ಅಂಚೆ/ಕೊರಿಯರ್ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು.
ಅತ್ಯುತ್ತಮವೆಂದು ಆಯ್ಕೆ ಆದ ಕೃತಿಗಳಿಗೆ ರೂ: 10,000 (ಹತ್ತು ಸಾವಿರ) ನಗದು ಬಹುಮಾನ ಮತ್ತು ಫಲಕವನ್ನು ನೀಡಿ ಗೌರವಿಸಲಾಗುವುದು.
ಹೆಚ್ಚಿನ ವಿವರಗಳಿಗೆ ಕರ್ನಾಟಕ ಸಂಘದ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ದೂರವಾಣಿ ಸಂಖ್ಯೆ 08182-277406 / 9980159696 / 9590777200