Hit & Run New Act ಕೇಂದ್ರ ಸರ್ಕಾರ ಚಾಲಕರಿಗಾಗಿ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆಯ ಹಿಟ್ & ರನ್ ಹೊಸ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಹಾಗೂ ಜಿಲ್ಲಾ ಲಾರಿ ಮಾಲೀಕರ ಸಂಘದ ಮುಖಂಡರುಗಳು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಜಿ.ಕೆ.ಶಿವಾನಂದ್ ಕೇಂದ್ರ ಸರ್ಕಾರ ಚಾಲ ಕರುಗಳಿಗೆ ಜಾರಿಗೆ ಮುಂದಾಗಿರುವ ಕಲಂ ೧೦೬ ಉಪವಿಧಿ ೧ ಮತ್ತು ೨ ಹಿಟ್ & ರನ್ ಹೊಸ ಕಾಯ್ದೆ ಯಿಂದ ಹತ್ತುವರ್ಷ ಜೈಲುಶಿಕ್ಷೆ ಹಾಗೂ ಏಳು ಲಕ್ಷ ದಂಡವನ್ನು ವಿಧಿಸುವ ಕಾನೂನು ಚಾಲಕರಿಗೆ ನುಂಗಲಾರದ ತುತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದೊಮ್ಮೆ ಆಕಸ್ಮಿಕವಾಗಿ ಸಂಭವಿಸುವ ಅಪಘಾತಗಳಿಂದ ಸ್ಥಳದಲ್ಲಿ ಚಾಲಕರಿದ್ದರೆ ಸ್ಥಳೀಯ ಕುಟುಂ ಬಸ್ಥರು ಅಥವಾ ಸ್ನೇಹಿತರು ಚಾಲಕರಿಗೆ ಹಲ್ಲೆಗೆ ಮುಂದಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಇಂತಹ ಪ್ರಕ ರಣಗಳು ಬಹಳಷ್ಟು ನಡೆದಿವೆ. ಜೊತೆಗೆ ಲಕ್ಷಾಂತರ ರೂ.ಗಳ ದಂಡವನ್ನು ಹೊಂದಿಸುವ ಶಕ್ತಿ ಚಾಲಕರಿಗಿಲ್ಲದಿರುವ ಕಾರಣ ಕಾನೂನನ್ನು ಪರಿಶೀಲಿಸಿ ಹಿಂಪಡೆಯಬೇಕು ಎಂದರು.
ಟ್ರೇಡ್ ಯೂನಿಯನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್‌ಶಂಕರ್ ಮಾತನಾಡಿ ಕೇಂದ್ರದ ಹೊಸ ಕಾನೂನು ಜಾರಿಗೊಂಡಲ್ಲಿ ಚಾಲಕರು ಸೇರಿದಂತೆ ಇಡೀ ಕುಟುಂಬವೇ ಬೀದಿ ಬೀಳುವ ಸ್ಥಿತಿಯಿದೆ. ಪ್ರತಿ ನಿತ್ಯವು ಕನಿಷ್ಟ ವೇತನದಲ್ಲಿ ಜೀವನ ನಡೆಸುವವರಿಗೆ ಏಕಾಏಕಿ ಲಕ್ಷಾಂತರ ರೂ. ದಂಡ ವಿಧಿಸಿದರೆ ಬದುಕುಲಾರದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಮುಂದಿನ ಏಪ್ರಿಲ್‌ನಲ್ಲಿ ಹೊಸ ಕಾನೂನನ್ನು ಜಾರಿಗೊಳಿಸುವ ಮಾಹಿತಿ ಹಿನ್ನೆಲೆಯಲ್ಲಿ ಇಂದು ಲಾರಿ, ಟೆಂ ಪೋ, ಆಟೋ ಚಾಲಕರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ನಡೆಸಲಾಗುತ್ತಿದ್ದು ಒಂದು ವೇಳೆ ಕಾನೂನು ಜಾರಿಗೆ ಮುಂದಾದರೆ ದೇಶದ ಲಕ್ಷಗಟ್ಟಲೇ ಮಂದಿ ಚಾಲಕರ ಬದುಕು ದುಸ್ತರವಾಗಲಿರುವ ಕಾರಣ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
Hit & Run New Act ಇದೇ ವೇಳೆ ಕಾಯ್ದೆ ಹಿಂಪಡೆಯುವಿಕೆ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿ ಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಟ್ರೇಡ್ ಯೂನಿಯನ್ ಹಾಗೂ ಲಾರಿ ಸಂಘದ ಮುಖಂಡರುಗಳು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಟ್ರೇಡ್ ಯೂನಿಯನ್ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಖಜಾಂಚಿ ಅಬ್ದುಲ್ ರಫೀಕ್, ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಮಂಜುನಾಥ್, ಲಾರಿ ಸಂಘದ ಉಪಾಧ್ಯಕ್ಷ ಲಾಲುಪಿಂಟೋ, ಖಜಾಂಚಿ ಮುಫೀರ್ ಅಹ್ಮದ್, ನಿರ್ದೇಶಕ ಅಬ್ದುಲ್ ಖನ್ನಿ, ಚಾಲಕರಾದ ಅಹ್ಮದ್ ಬಾಬು, ವೆಂಕಟೇಶ್, ಮುಕುಂದ, ರಮೇಶ್ ಮತ್ತಿತರರು ಹಾಜರಿದ್ದರು.