Thursday, October 3, 2024
Thursday, October 3, 2024

Chikmagalur City Municipal Council ಚಿಕ್ಕಮಗಳೂರು ನಗರ ಸಭೆ ಕೆಲವು ಆದೇಶಗಳು ಅವೈಜ್ಞಾನಿಕ ಹಿನ್ನೆಲೆಯಿರುವ ಕಾರಣ ರದ್ದುಪಡಿಸಲು ಮನವಿ

Date:

Chikmagalur City Municipal Council ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕೆಲವು ಅವೈಜ್ಞಾನಿಕ ಆದೇಶ ಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ವರ್ತಕರ ಸಂಘದ ಮುಖಂಡರುಗಳು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಟಿ.ಸಿ.ಚಂದ್ರಶೇಖರ್ ನಗರದ ಎಂ.ಜಿ.ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಶುಲ್ಕ ವಸೂಲಾತಿ ಹಕ್ಕನ್ನು ಖಾಯಂಗೊಳಿಸಬಾರದು, ಕಸದ ಬಿಲ್ಲನ್ನು ಏಕಾಏಕಿ ಏರಿಸಿ ರುವುದಲ್ಲದೇ ಒಂದೊಂದು ದರವನ್ನು ವಿಧಿಸಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದರು.
ಅದಲ್ಲದೇ ಟ್ರೇಡ್ ಲೈಸೆನ್ಸ್ ಸಂಬಂಧ ಹಾಸನ, ಶಿವಮೊಗ್ಗ ನಗರವ್ಯಾಪ್ತಿಯಲ್ಲಿ ಅತಿಕಡಿಮೆ ದರದಲ್ಲಿ ಶುಲ್ಕ ವಿದೆ. ಆದರೆ ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ 03 ರಿಂದ 05 ಪಟ್ಟು ಹೆಚ್ಚಿಸಿರುವುದು ಸರಿಯಲ್ಲ. ಹೀಗಾಗಿ ಈ ಹಿಂದಿನ ಟ್ರೇಡ್ ಲೈಸೆನ್ಸ್ನ ಶುಲ್ಕವನ್ನು ಕಡ್ಡಾಯಗೊಳಿಸಬೇಕು ಎಂದರು.

ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಎಂ.ಜಿ.ರಸ್ತೆಯು ಮೆರವಣಗೆ ಅಥವಾ ಜಾಥಾ ಸಮಯದಲ್ಲಿ ಇಡೀ ರಸ್ತೆಯನ್ನೇ ಬೆಳಿಗ್ಗಿನಿಂದ ಸಂಜೆಯವರೆಗೂ ಬಂದ್ ಮಾಡಲಾಗುತ್ತಿದೆ. ಇದರಿಂದ ವ್ಯಾಪಾರ ವಹಿವಾಟು ಕುಂಠಿತ ವಾಗಿದೆ ಎಂದು ಅಸಮಾಧಾನ ಹೊರಹಾಕಿದ ವರ್ತಕರು ಕನಿಷ್ಟ ಮರ‍್ನಾಲ್ಕು ಗಂಟೆಗೆ ಮಾತ್ರ ಮೆರವಣ ಗೆ ಸೀಮಿ ತಗೊಳಿಸಿ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ನಗರ ಸಮೀಪದಲ್ಲಿ ಹಲವಾರು ಸೂಪರ್‌ಮಾರ್ಕೆಟ್‌ಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಣ್ಣಪುಟ್ಟ ದಿನಸಿ, ಕಿರಣ , ಸ್ಟೇಷನರಿ ಸೇರಿದಂತೆ ಇನ್ನಿತರೆ ಅಂಗಡಿದಾರರು ವ್ಯಾಪಾರ ಕುಟುತ್ತಾ ಸಾಗುತ್ತಿದೆ. ಇದರ ಬೆನ್ನಲ್ಲೇ ಜೀರೋ ಪಾರ್ಕಿಂಗ್, ರಸ್ತೆ ಬಂದ್‌ಗೊಳಿಸಿದರೆ ವರ್ತಕರ ಜೀವನ ತೀವ್ರ ಸಂಕಷ್ಟ ಸಿಲುಕಲಿದೆ ಎಂದು ಹೇಳಿದರು.

Chikmagalur City Municipal Council ಆ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕೈಗೊಂಡಿರುವ ಆದೇಶವನ್ನು ಹಿಂಪಡೆದು ಸ್ಥಳೀಯ ವರ್ತಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ತನೋಜ್‌ಕುಮಾರ್, ಖಜಾಂಚಿ ಸತಿಶ್, ಸಹ ಕಾರ್ಯದರ್ಶಿ ಸಿ.ಆರ್.ರಮೇಶ್, ವಕ್ತಾರ ಅಶೋಕ್‌ಕುಮಾರ್, ಜಂಟಿ ಕಾರ್ಯದರ್ಶಿ ಹರೀಶ್, ಸದಸ್ಯರಾದ ಕುಮಾರ್, ನಾಗ ರಾಜ್, ಉಮೇಶ್, ಪ್ರೇಮ್‌ಕುಮಾರ್, ರಘು, ಅಮರ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...