Swami Vivekananda ಸ್ವಾಮಿ ವಿವೇಕಾನಂದರ 161ನೇ ಜನ್ಮದಿನಾಚರಣೆ ಅಂಗವಾಗಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ನಗರದ ದೋಣಿಕಾಣದ ಕೊಲ್ಲಾಪುರದಮ್ಮನವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಪ್ರದಾಯಿಕವಾಗಿ ಗೋಪೂಜೆಯೊಂದಿಗೆ ಪ್ರಾರಂಭಿಸಲಾಯಿತು.
ಕಾರ್ಯಕ್ರಮದಲ್ಲಿ ದೇಶ ಕಾಯುವ ಯೋಧರಿಗೆ ದುರ್ಗಾ ಸ್ವರೂಪಿಣಿ ಭಾರತ ಮಾತೇ ರಕ್ಷಣೆ ನೀಡಲಿ ಎಂಬ ಉದ್ದೇಶದಿಂದ ರಾಷ್ಟ್ರ ರಕ್ಷಾಯಾಗ ನೆರವೇರಿಸಲಾಯಿತು.
ಬಳಿಕ ಮಾತನಾಡಿದ ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಸ್ವಾಮಿ ವಿವೇಕಾನಂದರ ಹೆಸರು ಹಾಗೂ ಸಾಧನೆ ಕೇಳಿದರೆ ಸಾಕು ಮೈ ರೋಮಾಂಚನಗೊಳ್ಳುತ್ತದೆ. ಕಣಕಣದಲ್ಲೂ ದೇಶ ಭಕ್ತಿಯನ್ನು ತುಂಬಿಕೊoಡಿದ್ದ ಆ ಮಹಾನ್ ಚೇತನ ಭಾರತ ದೇಶದ ವೈಶಿಷ್ಟ್ಯವನ್ನು ವಿಶ್ವಕ್ಕೆ ಪರಿಚಯಿಸಿದವರು ಎಂದರು.
ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವ ಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ. ನನಗೆ ಯುವಕ ರನ್ನು ಕೊಡಿ ನಾವು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎಂದು ಕರೆಕೊಟ್ಟವರು ಎಂದರು.
ವಿಶೇಷವಾಗಿ ಕರ್ತವ್ಯ ನಿರ್ವಹಿಸುವಾಗ ಹೃದಯಾಘಾತಾದಿಂದ ಮರಣ ಹೊಂದಿದ ಕಳಸಾಪುರದ ಯೋ ಧ ಅರುಣ್ ಕುಮಾರ್ ಅವರ ಪಾಲಕರಿಗೆ ಗೌರವ ಸಮರ್ಪಣೆ ಮಾಡಲಾಯಿತು, ಗೋವಿಗಾಗಿ ಸರ್ವ ಸ್ವವನ್ನು ಅರ್ಪಿಸಿ ಗೋ ಸೇವೆ ಮಾಡುತ್ತಿರುವ ಕಾಮದೇನು ಗೋ ಶಾಲೆಯ ಭಗವಾನ್ ರಾಮ್ ರವರಿಗೆ ಗೋ ರಕ್ಷಕ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
Swami Vivekananda ಪುಟಾಣಿಗಳು ಕಿರು ರಾಮಾಯಣ ನಾಟಕ ಮಾಡಿ ನೆರೆದಿದ್ದ ಜನರಿಗೆ ರಂಜಿಸಿದರು ನಂತರ ದಾಸೋಹ ದೊಂದಿಗೆ ಕಾರ್ಯಕ್ರಮವನ್ನು ತುಂಬಾ ಅರ್ಥ ಗರ್ಭಿತವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಾರತ್ ಸ್ವಾಭಿಮಾನ ಟ್ರಸ್ಟ್ ನ ದಿವಾಕರ್ ಭಟ್, ದಾಸ ಸಾಹಿತ್ಯ ಭಜನಾ ಮಂಡಳಿಯ ಉದಯ ಸಿಂಹ, ಕಾಮಧೇನು ಗೋ ಶಾಲೆಯ ಸಂಜಿತ್ ಸುವರ್ಣ, ವಂದೇ ಮಾತರಂ ಟ್ರಸ್ಟನ ವಿನಯ್, ಶಿಕ್ಷಕಿ ಇಂದಿರಾ ಹಾಗು ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.