Friday, December 5, 2025
Friday, December 5, 2025

Blood Donation Camp ರಕ್ತದಾನವು ಪುಣ್ಯದ ಕೆಲಸ,ಜೀವವುಳಿಸಿದ ಪುಣ್ಯ ಸಿಗುತ್ತದೆ- ಡಾ.ಪಿ.ನಾರಾಯಣ್

Date:

Blood Donation Camp ರಕ್ತದಾನ ಜೀವ ಉಳಿಸುವ ಶ್ರೇಷ್ಠ ಕಾರ್ಯ ಆಗಿದ್ದು, ರಕ್ತದಾನವು ಪುಣ್ಯದ ಕೆಲಸ. ಜೀವ ಉಳಿಸಿದ ಪುಣ್ಯ ಸಿಗುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ ಹೇಳಿದರು.

ಶಿವಮೊಗ್ಗ ನಗರದ ಎಟಿಎನ್ ಸಿಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಅಭಿರುಚಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಈ ಮಹತ್ತರ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದು ತಿಳಿಸಿದರು.

ರಕ್ತದಾನ ಮಾಡಲು ಜಾತಿ, ಮತ ಬೇಧವಿಲ್ಲ. ಇದು ದೇಶ ಒಟ್ಟು ಗೂಡಿಸುವ ಕೆಲಸ. ವಿದ್ಯಾರ್ಥಿಗಳಿಗೆ ಸಾಮಾಜಿಕ ಬದ್ಧತೆ ಕಲಿಸಲು ಇಂತಹ ಶಿಬಿರ ಅಗತ್ಯ. ರಕ್ತದಾನ ಮಾಡುವ ಮೂಲಕ ಉತ್ತಮ ಕೆಲಸಕ್ಕೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿ ಮಿಡ್‌ಟೌನ್ ರಕ್ತನಿಧಿ ಕೇಂದ್ರ ಅಧ್ಯಕ್ಷ ಡಾ. ಸಂಜಯ್ ಮಾತನಾಡಿ, ರೋಟರಿ ರಕ್ತನಿಧಿ ಈವರೆಗೂ ಎರಡುವರೆ ಲಕ್ಷ ಯುನಿಟ್ ರಕ್ತವನ್ನು ಸಂಗ್ರಹಿಸಿದೆ. ಶಿವಮೊಗ್ಗದ ಶೇ.ಒಂದು ಭಾಗದ ಜನತೆ ರಕ್ತದಾನ ಮಾಡಿದರೂ ವರ್ಷಕ್ಕೆ ಇಪ್ಪತ್ತುನಾಲ್ಕು ಸಾವಿರ ಯುನಿಟ್ ಸಂಗ್ರಹಿಸಬಹುದು. ಆದರೆ ಅಷ್ಟು ಸಂಗ್ರಹ ಆಗುತ್ತಿಲ್ಲ ಎಂದರು.

ಪ್ರಾಚಾರ್ಯೆ ಮಮತಾ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆಯ ಕೆಲಸಕ್ಕೆ ಯಾವಾಗಲು ಮುಂದಿರುತ್ತಾರೆ. ಇತ್ತೀಚೆಗೆ ಎಂಟುನೂರ ಐವತ್ತು ಮಕ್ಕಳು ತಮ್ಮ ಕೊನೆಯ ನಂತರ ಕಣ್ಣು ದಾನ ಮಾಡಲು ಶಂಕರ್ ಕಣ್ಣಿನ ಆಸ್ವತ್ರೆಯಲ್ಲಿ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಶಿವರಾಮಕೃಷ್ಣ ಮಾತನಾಡಿ, ಅಭಿರುಚಿಯಿಂದ ಪ್ರತಿವರ್ಷ ರಕ್ತದಾನ ಶಿಬಿರ ಏರ್ಪಡಿಸಿ, ಜನರಿಗೆ ರಕ್ತದಾನ ನೀಡಲು ಪ್ರೇರಣೆ ನೀಡುತ್ತಿದೆ. ತಕ್ಷಣಕ್ಕೆ ರಕ್ತ ನೀಡಲು ಬರುವುದಿಲ್ಲ. ಎಲ್ಲಾ ಪರೀಕ್ಷೆ ಮಾಡಿದ ಶುದ್ದರಕ್ತ ನಿದಿಯಲ್ಲಿ ಇದ್ದರೆ ತಕ್ಷಣ ಪೂರೈಸಿ ಜೀವ ಉಳಿಸಬಹುದು. ಆದ್ದರಿಂದ ಇಂತಹ ಶಿಬಿರಗಳು ಮುಖ್ಯ ಎಂದರು.

Blood Donation Camp ಸ್ಮೀತ ನಿರೂಪಿಸಿದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಸ್ವಾಗತಿಸಿದರು. ಕುಮಾರ್ ಶಾಸ್ತ್ರೀ ವಂದಿಸಿದರು.

ಈ ಸಂದರ್ಭದಲ್ಲಿ ರಕ್ತ ನಿಧಿಯ ಸತೀಶ್, ಜಗದೀಶ್, ನಾಗರಾಜ್, ಎಸ್.ಎಸ್.ವಾಗೇಶ್, ಶಿವಾನಂದರಾವ್ ಸಾನು, ಸಿ.ಎನ್. ಸುರೇಶ್, ಘನಶಾಮ್, ಪ್ರವೀಣ್ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...