Thursday, December 18, 2025
Thursday, December 18, 2025

Yuva Nidhi ಯುವನಿಧಿ ಚಾಲನೆಗೆ ಮುನ್ನ ಯುವಜನತೆಯನ್ನ ರಂಜಿಸಿದ ಗಾನಮಂಜರಿ

Date:

Yuva Nidhi ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ರೂಪಿಸಿರುವ ‘ಯುವನಿಧಿ’ ಯೋಜನೆಯ ನೇರ ನಗದು ವರ್ಗಾವಣೆ ಬೃಹತ್ ಕಾರ್ಯಕ್ರಮದ ವೇದಿಕೆಗೆ ಗಣ್ಯರು ಆಗಮಿಸುವ ಮುನ್ನ ನಾಡಿನ ಹೆಸರಾಂತ ಸಂಗೀತಗಾರರು ನಡೆಸಿಕೊಟ್ಟ ತತ್ವಪದ,ಜನಪ್ರಿಯ ಚಿತ್ರಗೀತೆಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಕ-ಯುವತಿಯರು ಲಯಬದ್ಧವಾಗಿ ಹೆಜ್ಜೆ ಹಾಕಿದ್ದು ಕಾರ್ಯಕ್ರಮದ ಸಂತಸ,ಸಂಭ್ರಮಗಳನ್ನು ನೂರ್ಮಡಿಗೊಳಿಸಿತು.

ಸಂತ ಶಿಶುನಾಳ ಶರೀಫರ ‘ಕೋಡಗನ್ನ ಕೋಳಿ ನುಂಗಿತ್ತ’ ,”ತರವಲ್ಲ ತಗೀ ನಿನ್ನ ತಂಬೂರಿ ಸ್ವರ” ತತ್ವಪದಗಳು ಅಜಯ್ ವಾರಿಯರ್ ಮತ್ತು ತಂಡದವರಿಂದ ಅನುರಣಿಸಿದವು, ಸಂತೋಷದೇವ್ ಅವರು ಹಾಡಿದ “ಬೆಳ್ಳಿ ಮೂಡಿತೋ ಕೋಳಿ ಕೂಗಿತೋ” ಡಾ.ರಾಜ್ ಅಭಿನಯದ ಗೀತೆಗೆ ನೆರೆದ ಜನ ಕುಣಿದು ಕುಪ್ಪಳಿಸಿತು, ಅನುರಾಧಭಟ್ ಅವರು “ಅಪ್ಪ ಐ ಲವ್ ಯೂ” , “ಕಣ್ಣು ಹೊಡಿಯಾಕ ಮೊನ್ನೆ ಕಲತನೀ….” ಹಾಡುಗಳು ಕೇಳುಗರ ಮನಗೆದ್ದವು.ಸಮೂಹ ವೃಂದಗಾನದಲ್ಲಿ ಮೂಡಿ ಬಂದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡು ಸಭಾಮಂಟಪದಲ್ಲಿ ಸಂಚಲನ ಉಂಟು ಮಾಡಿತು.”ಗೊಂಬೆ ಹೇಳುತೈತೆ ಮತ್ತೆ ಹೇಳುತೈತೇ ನೀನೆ ರಾಜಕುಮಾರ” ಗೀತೆಯು ಯುವಸಮೂಹವನ್ನು ಭಾವಪರವಶರನ್ನಾಗಿಸಿತು.ಸಾವಿರಾರು ಯುವಜನರು ತಮ್ಮ ಮೊಬೈಲ್‌ಗಳ ಟಾರ್ಚ್ ಬೆಳಗಿ ಡಾ.ಪುನೀತ್ ರಾಜ್‌ಕುಮಾರ್ ಅವರಿಗೆ ಸಮಾರಂಭದಿಂದಲೇ ಗೌರವ ಸೂಚಿಸಿದ್ದು ವಿಶೇಷವಾಗಿತ್ತು.

Yuva Nidhi ಡಾ.ಅನೀಶ್ ವಿದ್ಯಾಶಂಕರ್ ಅವರು ವಯೋಲಿನ್‌ನಲ್ಲಿ ಕನ್ನಡ ಚಿತ್ರಗೀತೆಗಳ ನಾದಸುಧೆ ಹರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...