Thursday, December 18, 2025
Thursday, December 18, 2025

Swami Vivekananda ಸ್ವಾಮಿ ವಿವೇಕಾನಂದರು ವಿಶ್ವಚೇತನ- ಸವಿತಾ ಮಾಧವ

Date:

Swami Vivekananda ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆಯವರು ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಚೇಂಬರ್ ಆಪ್ ಕಾಮರ್ಸಿ್ನ ಅಡ್ವಾನ್ಸ್ ಸ್ಕಿಲ್ ಅಕಾಡೆಮಿಯ ಸಿ.ಇ.ಓ ಆಗಿರುವ ಶ್ರೀಮತಿ ಸವಿತಾ ಮಾಧವ ರವರು ಬೆಳಗ್ಗೆ ದೀಪ ಬೆಳಗಿಸಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ಉದ್ಘಾಟಿಸಿ “ಸ್ವಾಮಿ ವಿವೇಕಾನಂದರು ವಿಶ್ವಚೇತನ. ಅವರ ತತ್ವ ಆದರ್ಶಗಳು ನಮಗೆ ಮಾದರಿ ಇಂದಿನ ಯುವ ಸಮುದಾಯವನ್ನು ಸಶಕ್ತವಾಗಿಸುವುದು ಮತ್ತು ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಅರಿಯುವಂತೆ ಮಾಡುವುದು ಅವರ ಉದಾತ್ತ ಉದ್ದೇಶವಾಗಿತ್ತು. ವಿವೇಕಾನಂದರ ಹೆಸರು ಕೇಳಿದೊಡನೆ ನಮ್ಮೊಳಗೆ ಶಕ್ತಿ, ಆತ್ಮ ವಿಶ್ವಾಸ ತುಂಬುತ್ತದೆ. ತ್ಯಾಗ, ಸೇವೆ, ಆಧ್ಯಾತ್ಮ ದೃಷ್ಟಿ ಅವರ ಜೀವನದ ಮೂಲತತ್ವವಾಗಿತ್ತು. ಭಾರತದ ಕೀರ್ತಿಯನ್ನು ವಿಶ್ವದೆತ್ತರಕ್ಕೆ ಏರಿಸಿದ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶವನ್ನು ನಮ್ಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಾಗಲೇ ಇಂತಹ ಕಾರ್ಯಕ್ರಮಗಳನ್ನು ಸಾರ್ಥಕತೆ ಪಡಯುತ್ತವೆ ಎಂದರು.

Swami Vivekananda ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತಿç “ಇಂದಿನ ಯುವಕರು ಆದರ್ಶಗಳನ್ನು ರೂಡಿಸಿಕೊಳ್ಳುವ ಅವಶ್ಯಕತೆಯಿದೆ. ತಮ್ಮ ಮುಂದಿರುವ ಭ್ರಮೆಯ ಜಗತ್ತಿನಿಂದ ವಾಸ್ತವ ಪ್ರಜ್ಞೆಗೆ ಮರಳಬೇಕಾಗಿದೆ. ನಮ್ಮ ದೇಶದ ನಾಡಿನ ಮಹಾ ಪುರುಷರ ಜೀವನ ಸಿದ್ಧಾಂತಗಳನ್ನು ಅರ್ಥೈಸಿಕೊಂಡು ಬಾಳಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಬದುಕು ಯುವ ಜನತೆ ಮಾರ್ಗದರ್ಶಕವಾಗಲಿ” ಎಂದರು.

ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ ರವರು ಎಲ್ಲರನ್ನು ಸ್ವಾಗತಿಸಿದರು. ವಂದನೆಯನ್ನು ಜಿಲ್ಲಾ ಸ್ಥಾನಿಕ ಆಯುಕ್ತರಾದ ಜಿ.ವಿಜಯಕುಮಾರ ರವರು ನಿರ್ವಹಿಸಿದರು, ಎ.ಎಸ್.ಒ.ಸಿ ಭಾರತಿ ಡಾಯಸ ರವರು ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಡಿಟಿಸಿ ಶಿವಶಂಕರ್, ಹೆಚ್.ಕ್ಯೂ.ಸಿ ಕೆ.ರವಿ, ಎಲ್.ಎ.ಕಾರ್ಯದರ್ಶಿ ಎ.ವಿ. ರಾಜೇಶ, ಸಿ.ಎಂ.ಪರಮೇಶ್ವರ್, ಮಲ್ಲಿಕಾರ್ಜುನ ಕಾನೂರು, ಚಂದ್ರಶೇಖರಯ್ಯ ನಗರ ಶಾಲೆಯ 75ಗೈಡ್ಸ್, ರೋರ‍್ಸ್, ರೇಂರ‍್ಸ್ ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...