Ayyappa Swami ಚಿಕ್ಕಮಗಳೂರು, ನಗರದ ಶ್ರೀ ವಲ್ಲಭ ಗಣಪತಿ ದೇವಾಲಯದಲ್ಲಿ ಶ್ರೀ ಮಣಿಕಂಠ ಗ್ರೂಪ್‌ನ ಎರಡನೇ ವರ್ಷದ ಅಂಗವಾಗಿ ಶ್ರೀ ಅಯ್ಯಪ್ಪಸ್ವಾಮಿಯನ್ನು ಪ್ರತಿಷ್ಟಾಪಿಸಿ ಸೋಮವಾರ ಸಂಜೆ ವಿಶೇಷ ಪೂಜೆ ಹಾಗೂ ಭಜನೆಯನ್ನು ಅಯ್ಯಪ್ಪಮಾಲಾಧಾರಿಗಳು ನಡೆಸಿದರು.
ಬಳಿಕ ಮಾತನಾಡಿದ ಗುರುಸ್ವಾಮಿ ರಂಗನಾಥ್ ಪ್ರತಿ ವರ್ಷವು ಕನಿಷ್ಟ 24 ದಿನಗಳ ಕಾಲ ಶ್ರೀ ಅಯ್ಯಪ್ಪ ಸ್ವಾಮಿ ಮಾಲೆಧರಿಸಿ ಯುವಕರ ತಂಡವು ಶಬರಿಯಾತ್ರೆಯನ್ನು ಕೈಗೊಳ್ಳಲಾಗುತ್ತಿದ್ದು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ಪೂಜೆ-ಭಜನೆ ನಡೆಸುವ ಮೂಲಕ ತಲ್ಲೀರಾಗಿದ್ದೇವೆ ಎಂದರು.
ಇದೇ ಜ.13 ರಂದು ಸುಮಾರು 15 ಯುವಕರು ಇರುಮುಡಿ ಹೊತ್ತು ಶಬರಿಯಾತ್ರೆಗೆ ತೆರಳಲಿದ್ದು ಜೀವನ ದಲ್ಲಿ ಕಷ್ಟ-ಕಾಪಣ್ಯ ಹಾಗೂ ಇನ್ನಿತರೆ ಮಾನಸಿಕ ಒತ್ತಡಗಳಿಗೆ ಶಬರಿಯಾತ್ರೆಯಲ್ಲಿ ಮುಕ್ತಿ ಸಿಗಲಿದೆ. ಹೀಗಾಗಿ ದೇವರ ನಾಮಜಪಿಸುವ ಮೂಲಕ ನಾಲ್ಕೈದು ದಿನಗಳ ಕಾಲ ಯಾತ್ರೆ ಕೈಗೊಳ್ಳಲಾಗುವುದು ಎಂದರು.
Ayyappa Swami ಈ ಸಂದರ್ಭದಲ್ಲಿ ಮಾಲಾಧಾರಿಗಳಾದ ಸೋಮಶೇಖರ್, ಶಶಿ, ತ್ಯಾಗರಾಜ್, ಮಧು, ಲೋಹಿತ್, ಕಾರ್ತೀಕ್, ಪವನ್, ಜಗದೀಶ್, ಮಹೇಶ್, ಶಶಿ, ಮನು, ಚಂದನ್ ಮತ್ತಿತರರು ಹಾಜರಿದ್ದರು.
