Yuva Nidhi scheme ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸದರಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ದಿನಾಂಕ: 12-0I-2024 ರಂದು ಶಿವಮೊಗ್ಗ ನಗರದ ಪ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ಚಾಲನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ.ಈ ಕಾರ್ಯಕ್ರಮಕ್ಕೆ ಜಿಲ್ಲೆ ಮತ್ತು ಅಕ್ಕ ಪಕ್ಕದ ಜಿಲ್ಲೆಗಳಿಂದ, ಯವನಿಧಿ ಫಲಾನುಭವಿಗಳು, ಸರ್ಕಾರದ ಮಂತ್ರಿಗಳು, ಶಾಸಕರು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದು ,ಈ ಸಂಬಂಧ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಆಗಮಿಸಲಿರುವ ಸಾರ್ವಜನಿಕ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿ, ತಾತ್ಕಾಲಿಕ ಅಧಿಸೂಚನೆಯನ್ನು ಹೊರಡಿಸಿದ್ದು ಸಾರ್ವಜನಿಕರು ಸಹಕರಿಸಲು ಕೋರಿದೆ.
ಕಾರ್ಯಕ್ರಮಕ್ಕೆ ಆಗಮಿಸಲಿರುವ ವಾಹನಗಳ ಮಾರ್ಗ –
1) ತೀರ್ಥಹಳ್ಳಿ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು –
ನ್ಯೂಮಂಡ್ಲಿ ಎಡಕ್ಕೆ ತಿರು – ಗೋಪಾಳ ಸರ್ಕಲ್ – ಆಲ್ನೋಳ ಸರ್ಕಲ್ ಬಲಕ್ಕೆ ತಿರುಗಿ – ಎ.ಪಿಎಂಸಿ ಒಳಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಎ.ಪಿ.ಎಂ.ಸಿ, ಒಳಭಾಗದಲ್ಲಿ ಪಾರ್ಕಿಂಗ್ ಮಾಡುವುದು.
2) ಸಾಗರ, ಹೊಸನಗರ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು –
ಆಲ್ಗೊಳ ಸರ್ಕಲ್ ಸಾಗರ ರಸ್ತೆ ಅಲ್ಗೊಳ ಸರ್ಕಲ್ ಪೊಲೀಸ್ ಚೌಕಿಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಸೋಮಿನಕೊಪ್ಪ ಆದರ್ಶನಗರ ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡುವುದು.
3) ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು :- ಬಸವಗಂಗೂರು- ಬೊಮ್ಮನಕಟ್ಟೆ ಮಾರ್ಗವಾಗಿ, ಬೊಮ್ಮಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಬೊಮ್ಮನಕಟ್ಟೆ ಎಸ್.ಎಲ್.ಕೆ. ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡುವುದು.
4) ಹೊನ್ನಾಳಿ, ಹರಿಹರ, ದಾವಣಗೆರೆ ಹಾವೇರಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು :- ಸವಳಂಗ – ಬಸವಗಂಗೂರು- ಬೊಮ್ಮನಕಟ್ಟೆ ಮಾರ್ಗವಾಗಿ, ಬೊಮ್ಮಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದೆ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಬೊಮ್ಮನಕಟ್ಟೆ ಎಸ್.ಎಲ್.ಕೆ. ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡುವುದು.
5) ಭದ್ರಾವತಿ, ಚಿಕ್ಕಮಗಳೂರು, ಎನ್.ಆರ್.ಪುರ-ಕೊಪ್ಪ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು :- ಎಂ.ಆರ್.ಎಸ್. ಸರ್ಕಲ್- ಬೈಪಾಸ್ ರಸ್ತೆ ಸಂದೇಶ್ ಮೋಟಾರ್ ಸರ್ಕಲ್ – ನ್ಯೂಮಂಡ್ಲಿ ಸರ್ಕಲ್ ಗೋಪಾಳ ಸರ್ಕಲ್ – ಅಕ್ಟೋಳ, ಸರ್ಕಲ್ ಬಲಕ್ಕೆ – ಎ.ಪಿ.ಎಂ.ಸಿ ಒಳಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದೆ. ಪಾರ್ಕಿಂಗ್ ಸ್ಥಳವಾದ ಎ.ಪಿ.ಎಂ.ಸಿ, ಒಳಭಾಗದಲ್ಲಿ ಪಾರ್ಕಿಂಗ್ ಮಾಡುವುದು.
Yuva Nidhi scheme 6) ಹೊಳೆಹೊನ್ನೂರು ಚನ್ನಗಿರಿ ಚಿತ್ರದುರ್ಗದ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:-
ಹೊಳೆಹೊನ್ನೂರು ಸರ್ಕಲ್ – ಶಂಕರ ಮಠ ಸರ್ಕಲ್ ಕೆ.ಇ.ಬಿ. ಸರ್ಕಲ್- ರೈಲ್ವೆ ನಿಲ್ದಾಣದ ರಸ್ತೆ ಉಷಾ ಸರ್ಕಲ್‌ಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಎನ್.ಇ.ಎಸ್ ಮೈದಾನ, ಶೇಷಾದ್ರಿಪುರಂ ಗೂಡ್ಸ್ ಶೇಡ್, ಸೈನ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
