Bhima Koregaon Victory ಗ್ರಾಮೀಣ ಸೊಬಗಿನ ಜೋಡೆತ್ತಿನ ಗಾಡಿ ಕ್ರೀಡೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅತಿಹೆಚ್ಚು ಯುವಕರು ಉತ್ತೇಜನ ನೀಡುತ್ತಾ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ವಿಜಯ್‌ಕುಮಾರ್ ಹೇಳಿದರು.
ಮಾಗಡಿ ಗ್ರಾಮದ ಸಮೀಪದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಪ್ರಯುಕ್ತ ಏರ್ಪಡಿ ಸಿದ್ದ ಪ್ರಥಮ ವರ್ಷದ ರಾಜ್ಯಮಟ್ಟದ ಜೋಡೆತ್ತಿನಗಾಡಿನ ಸ್ಪರ್ಧೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪರಂಪರೆ ಹೆಚ್ಚಿಸಲು ಇಂತಹ ಜೋಡಿ ಎತ್ತಿನ ಗಾಡಿಯ ಓಟದ ಸ್ಪರ್ಧೆಯನ್ನು ಆಯೋಜಿ ಸಿರುವುದು ಖುಷಿಯ ಸಂಗತಿ. ರಾಜ್ಯದ ಅನೇಕ ಜಿಲ್ಲೆಗಳಿಂದ ಆಗಮಿಸಿದ ಜಾನುವಾರುಗಳನ್ನು ವಿಶಿಷ್ಟ ರೀತಿಯಲ್ಲಿ ಶೃಂಗರಿಸಿ ಕ್ರೀಡೆಯಲ್ಲಿ ಕರೆತಂದಿರುವುದು ಸಂತಸ ಎಂದರು.
ಮುಗುಳುವಳ್ಳಿ ಗ್ರಾ.ಪಂ. ಮಾಜಿ ಅದ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ ಗ್ರಾಮೀಣ ಭಾಗದ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮಸ್ಥರು ಹಾಗೂ ಯುವಕರು ಜೋಡೆತ್ತಿನಗಾಡಿ ಸ್ಪರ್ಧೆಯನ್ನು ಆಯೋಜಿ ಸಿರುವುದು ಒಳ್ಳೆಯ ವಿಷಯ. ಜೊತೆಗೆ ರೈತಾಪಿ ವರ್ಗದ ಜೋಡಿ ಎತ್ತಿನಗಾಡಿ ಸ್ಪರ್ಧೆ ನೋಡುಗರರಿಗೆ ಇನ್ನಷ್ಟು ಮನರಂಜನೆ ನೀಡಲಿದೆ ಎಂದು ತಿಳಿಸಿದರು.
Bhima Koregaon Victory ಸ್ಪರ್ಧೆಯ ಆಯೋಜಕ ಕಾಂತರಾಜು ಮಾತನಾಡಿ ಕೋರೆಗಾಂವ್ ವಿಜಯೋತ್ಸವ ಜೋಡೆತ್ತಿನ ಸ್ಪರ್ಧೆಯ ನ್ನು ಆಯೋಜಿಸಿದ್ದು ಸುಮಾರು ೫೦ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ. ಪ್ರಥಮ ಬಹುಮಾನ 60 ನಗದು, ಪಾರಿತೋಷಕ, ದ್ವಿತೀಯ 40 ಸಾವಿರ ನಗದು ಪಾರಿತೋಷಕ, ತೃತೀಯ 30 ಸಾವಿರ ನಗದು ಪಾರಿತೋಷಕ ಹಾಗೂ ನಾಲ್ಕನೇ ಸ್ಥಾನಕ್ಕೆ 20 ಸಾವಿರ ನಗದು ಪಾರಿತೋಷಕ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್, ಉಮೇಶ್, ಗ್ರಾಮದ ಹಿರಿಯ ಮುಖಂಡ ಎಂ.ಎಸ್.ಮಂಜುನಾಥ್, ಆಯೋಜಕರಾದ ನವೀನ್, ಪುನೀತ್, ಮುಖಂಡರುಗಳಾದ ಕುರುವಂಗಿ ವೆಂಕಟೇಶ್, ಕೇಶವ ಮತ್ತಿತರರು ಹಾಜರಿದ್ದರು