Wednesday, December 17, 2025
Wednesday, December 17, 2025

Krushimela Hosanagara ಹೊಸನಗರದಲ್ಲಿಹೊಸತೊಂದು ರಾಜ್ಯ ಮಟ್ಟದ ಸುಗ್ಗಿಹಬ್ಬ ಮಾಹಿತಿ ಪೂರ್ಣ ಕೃಷಿಮೇಳ

Date:

Krushimela Hosanagara ಸುಗ್ಗಿಹಬ್ಬ….

ಹೆಸರೇ ಹೇಳುವಂತೆ ಮಣ್ಣಿನ ಮಕ್ಕಳ ದುಡಿಮೆ ,
ಬೆವರಿಗೆ ಬೆಲೆ ಬರುವ ಸಂಭ್ರಮದ ಕ್ಷಣ…
ಸುಗ್ಗಿ ಹಬ್ಬ ಬಂತು
ಅಗ್ಗದ ದಿನ ಬಂತು
ಸಗ್ಗ ಭೂಮಿಗೆ ಬಂತು ನೋಡಣ್ಣ…

ಭತ್ತ, ರಾಗಿ ಕೊಯ್ಲಿಗೆ ಬಂತು.
ಕೊಯ್ದ ಹುಲ್ಲು‌ ಕಣಕ್ಕೆ
ಬಂತು
ಎತ್ತನೋಡಿದರತ್ತ
ಹರುಷ ಕಾಣಣ್ಣ…

ಅಂತ ಕವಿ ಮನದುಂಬಿ ಹಾಡಿದ್ದಾನೆ.
ಅಂತಹ ಸುಗ್ಗಿ ಹಬ್ಬ ಹೊಸನಗರದಲ್ಲಿ‌ ಹೊಸರೂಪದಿಂದ ನಮ್ಮ ನಿಮ್ಮೆಲ್ಲರನ್ನ
ಜನವರಿ 12,13 & 14 ರಂದು ಬರಮಾಡಿಕೊಳ್ಳಲಿದೆ.

ಸುಗ್ಗಿ ಹಬ್ಬ,ಹೊಸನಗರದ ನೆಹರು ಮೈದಾನದ
ವಿಶಾಲ ಆವರಣದಲ್ಲಿ
ನಡೆಯಲಿದೆ.
ಕೃಷಿಕರು, ಕೃಷಿಕರ ಸಾಧನೆ, ಕೃಷಿ ಪರಿಕರ ಕೃಷಿ ಮಾಹಿತಿ, ಆಧುನಿಕ ಕೃಷಿ ಉಪಕರಣಗಳು… ಇಷ್ಟೇ ಅಲ್ಲ…ಅಲ್ಲಿಗೆ ಬಂದರೆ ನಿಮಗೆ
ಗಂಗಾವತಿ ಪ್ರಾಣೇಶ್ ಅವರ ಮಾತಿನ ಕಚಗುಳಿ ಇದೆ.
ಕಿವಿಗೆ ಇಂಪಾಗಿಸುವ ಲಘುಸಂಗೀತ ಕಲಾವಿದರ ತಂಡವೇ ವೇದಿಕೆಯಲ್ಲಿ ತುಂಬಿರುತ್ತದೆ.
ಕೃಷಿ ತಂತ್ರಜ್ಞರಿಂದ ಭರಪೂರ ಮಾಹಿತಿ ಇದೆ. ಕೃಷಿಕರಿಗೆ ಸದ್ಯದ ಉಳುಮೆ ಕುರಿತ
ವಿಚಾರ ಪರಿಚಯಿಸುವವರಿಗೆ..
ಮತ್ತೊಂದು ‌ವಿಶೇಷವಿದೆ…
Krushimela Hosanagara ವಿನೂತನ, ಕುತೂಹಲ‌ ಕತೆಯ ಸಿನಿಮಾ
“ಶಾಖಾಹಾರಿ” ಯ
ಸಾಂಗ್ ರಿಲೀಸ್ ಇದೆ.
ಸಂಪೂರ್ಣ ಮಲೆನಾಡಿನ ನಿಸರ್ಗದ ಮಡಿಲಲ್ಲೇ ಚಿತ್ರೀಕರಿಸಿದ ಚಿತ್ರವಿದು.

ಕೃಷಿ ಸಾಧಕರಿಗೆ
” ವಜ್ರ ಸಮ್ಮಾನ್” ಪುರಸ್ಕಾರ ನೀಡಲಾಗುತ್ತದೆ.
ಇಂತಹ ಸಂದರ್ಭ ಹೊಸನಗರದಲ್ಲಿ ಅದೂ, ರಾಜ್ಯಮಟ್ಟದ “ಕೃಷಿಮೇಳ” ಆಗಿ
ಕಂಗೊಳಿಸಲಿದೆ. ಎಲ್ಲರನ್ನೂ ಕೈಬೀಸಿ‌ ಕರೆದಿದೆ.
ಇದೊಂದು ಅವಕಾಶ ಯಾರಿಗೆ ಅಂತೀರ?
ಕೃಷಿಕ್ಷೇತ್ರದಲ್ಲಿ ತಮ್ಮ
ಉತ್ಪಾದನೆಗಳನ್ನ ಪರಿಚಯ ಮಾಡುವವರಿಗೆ.

ಮಲೆನಾಡಿನ ಗೃಹೋತ್ಪನ್ನಗಳು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ
ಸಣ್ಣ ಕೈಗಾರಿಕೆಯ
ಉತ್ಪನ್ನಗಳನ್ನ ಪರಿಚಯಿಸಲು ಇದೊಂದು ಸುವರ್ಣಾವಕಾಶವಾಗಲಿದೆ.

“ರಾಜ್ಯಮಟ್ಟದ ಕೃಷಿಮೇಳ” ದ ವ್ಯಾಪ್ತಿ ಹೊಂದಿರುವ ಈ ಬೃಹತ್ ಸಾಹಸದ ಹಿಂದೆ ರಾಜೇಶ್ ಕೀಳಂಬಿ ಮಿತ್ರರ ಜೆಸಿ‌ಐ ತಂಡವೇ ಇದೆ.
ಸದಾ ಸಾಮಾಜಿಕ ಪ್ರಗತಿ ಚಿಂತನೆಗೈಯುವ, ಆ ದಿಕ್ಕಿನತ್ತ ಯುವಪೀಳಿಗೆಯನ್ನ
ತಯಾರುಮಾಡುವ
ಈ ಅಂತಾಷ್ಟ್ರೀಯ ಸಂಸ್ಥೆ ನಮ್ಮ ಜೀವನಾಡಿಯಾಗಿರುವ ಕೃಷಿಯ ಬಗ್ಗೆ ಆಮೂಲಾಗ್ರ ಕಾರ್ಯಕ್ರಮ ಸಂಘಟಿಸುತ್ತಿದೆ…

ನೀವೆಲ್ಲರೂ ಬನ್ನಿ..
ಸುಗ್ಗಿಹಬ್ಬ ಯಾನೆ
ಕೃಷಿಮೇಳದಲ್ಲಿ ಪಾಲ್ಗೊಳ್ಳಿ ಎಂದು ಆತ್ಮೀಯವಾಗಿ ಹೇಳಬಯಸುವೆ…..
ನಮಸ್ಕಾರ..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...