Tuesday, December 16, 2025
Tuesday, December 16, 2025

ಕೆಎಸ್ ಡಿಸಿ ಮತ್ತು ಮಾನ್ಸ್ಟರ್ ಕಂಪನಿ ಒಡಂಬಡಿಕೆ

Date:

ರಾಜ್ಯದಲ್ಲಿರುವ ಕೌಶಲ್ಯಪೂರ್ಣ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯ ಅವಕಾಶಗಳ ಬಗ್ಗೆ ಮಾಹಿತಿ ನೀಡುವ ಜತೆಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವು ನೀಡುವ ಗುರಿಯೊಂದಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆಎಸ್ಡಿಸಿ) ಮತ್ತು ಮಾನ್ಸ್ಟರ್.ಕಾಂ ಕಂಪನಿಗಳು ಶುಕ್ರವಾರ ಒಡಂಬಡಿಕೆಗೆ ಸಹಿ ಹಾಕಿದವು.

ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ‌’ಉದ್ಯೋಗ ಸೃಷ್ಟಿಗೆ ರಾಜ್ಯ ಸರಕಾರವು ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದ್ದು, ನಿರುದ್ಯೋಗ ನಿವಾರಣೆಯೇ ಆದ್ಯತೆಯಾಗಿದೆ. ದೇಶದ ಸಂಘಟಿತ ವಲಯದಲ್ಲಿ 6 ಲಕ್ಷಕ್ಕೂ ಹೆಚ್ಚು ಮತ್ತು ರಾಜ್ಯವೊಂದರಲ್ಲೇ 2.30 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ. ಉದ್ಯೋಗ ಸೃಷ್ಟಿಯ ಮೂಲಕ ಪ್ರತಿಭಾವಂತರು ವಿದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವುದು ನಮ್ಮ ಗುರಿಗಳಲ್ಲಿ ಒಂದಾಗಿದೆ’ ಎಂದರು.

ಒಪ್ಪಂದದಂತೆ ಕೆಎಸ್ಡಿಸಿ ಮತ್ತು ಮಾನ್ಸ್ಟರ್ ಕಂಪನಿ ಪರಸ್ಪರ ಲಿಂಕ್ ಗಳನ್ನು ಹಂಚಿಕೊಳ್ಳಲಿವೆ. ಮಿಗಿಲಾಗಿ ಮಾನ್ಸ್ಟರ್ ಕಂಪನಿಯು ಪ್ರತೀ ತಿಂಗಳು ಸಮೀಕ್ಷೆ ನಡೆಸುವ ಮೂಲಕ ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಉದ್ಯೋಗಗಳಿವೆ ಎನ್ನುವುದನ್ನು ಪಟ್ಟಿ ಮಾಡುತ್ತದೆ. ಇದರ ಆಧಾರದ ಮೇಲೆ ಕೌಶಲ್ಯಾಭಿವೃದ್ಧಿ ನಿಗಮವು ತರಬೇತಿಯ ಸ್ವರೂಪವನ್ನು ನಿರ್ಧರಿಸುತ್ತದೆ ಎಂದು ಅವರು ವಿವರಿಸಿದರು.

ಈ ಒಡಂಬಡಿಕೆಯ ಮೂಲಕ 1.86 ಲಕ್ಷಕ್ಕೂ ಹೆಚ್ಚು ಕೌಶಲ್ಯಪೂರ್ಣ ಉದ್ಯೋಗಾಕಾಂಕ್ಷಿಗಳಿಗೆ ನೆರವು ಸಿಗಲಿದೆ. ಅಲ್ಲದೆ, ಈ ಅಭ್ಯರ್ಥಿಗಳಿಗೆ ಮಾನ್ಸ್ಟರ್.ಕಾಂ ಕಂಪನಿಯು ವಿವಿಧೆಡೆಗಳಲ್ಲಿ ನಡೆಸುವ ಟ್ರಯಂಫ್, ಆಸ್ಪೈರ್, ವೆಲಾಸಿಟಿ ಮುಂತಾದ ನೇಮಕಾತಿ ಮೇಳಗಳಲ್ಲಿ ವಿಶೇಷ ಪ್ರವೇಶಾವಕಾಶ ಲಭ್ಯವಾಗಲಿದೆ. ಅಲ್ಲದೆ, ಮಾನ್ಸ್ಟರ್ ಕಂಪನಿಯ ಜ್ಞಾನ ಸಂಪನ್ಮೂಲಗಳಾದ ವೆಬಿನಾರ್, ಉದ್ಯೋಗ ಸೂಚ್ಯಂಕ ಮತ್ತು ಜ್ಞಾನ ಕೇಂದ್ರಗಳ ನೆರವೂ ದೊರೆಯಲಿದೆ ಅವರು ತಿಳಿಸಿದರು.

ರಾಜ್ಯದಲ್ಲಿ ಸದ್ಯಕ್ಕೆ 11.74 ಲಕ್ಷಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಸೂಕ್ತ ಉದ್ಯೋಗಾವಕಾಶಗಳನ್ನು ಅರಸುತ್ತಿದ್ದು, ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಇನ್ನುಮುಂದೆ ಮಾನ್ಸ್ಟರ್ ಕಂಪನಿಯ ವೃತ್ತಿಸಂಬಂಧಿ ಸೇವೆಗಳು ಸಿಕ್ಕಲಿವೆ. ಈ ಸೇವೆಗಳಲ್ಲಿ ಉದ್ಯೋಗ ಅಂದಾಜು ಪರೀಕ್ಷೆಗಳು ಮುಂತಾದವು ಲಭ್ಯವಿವೆ ಎಂದು ಸಚಿವರು ನುಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಂಪನಿಯ ಸಿಇಒ ಶೇಖರ್ ಗರೀಸಾ, ಈ ಒಡಂಬಡಿಕೆಯಿಂದಾಗಿ ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ನೀಡುವುದರ ಜತೆಗೆ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಅವರಿಗೆ ಕೌಶಲ್ಯಗಳನ್ನು ಪೂರೈಸಬಹುದು; ಅಲ್ಲದೆ, ಶಿಕ್ಷಣ ಸಂಸ್ಥೆಗಳನ್ನು ನೇರವಾಗಿ ಉದ್ದಿಮೆಗಳೊಂದಿಗೆ ಬೆಸೆಯಲಾಗುವುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...