Sunday, August 23, 2026
Sunday, August 23, 2026

Jade Math  ಇಂದಿನ ಶಿಕ್ಷಣ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಬೆಳೆಯಬೇಕಿದೆ-ಡಾ.ಮಹಾಂತ ಮಹಾಸ್ವಾಮೀಜಿ

Date:

Jade Math  ಹಿಂದೆ ಬೈಯ್ದು, ಹೊಡೆದು, ಹೆದರಿಸಿ ಪಾಠ ಕಲಿಸುತ್ತಿದ್ದ ದಿನಮಾನಗಳು ಯುಗಾಂತರಗಳಲ್ಲಿ ಬದಲಾವಣೆಯಾಗಿದೆ. ಇಂದಿನ ಕಲಿಯುಗದಲ್ಲಿ ಶಿಷ್ಯನಿಗೆ ಗುರುಗಳು ವಂದಿಸಿ ಬುದ್ದಿ ಕಲಿಸುವುದು ಅನಿವಾರ್ಯವಾಗಿದೆ. ಇಂದಿನ ಶಿಕ್ಷಣ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಬೆಳೆಯಬೇಕಿದೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಗಳು ಹೇಳಿದರು.

ಅವರು ಅನುಪಿನಕಟ್ಟೆ ರಾಮಕೃಷ್ಣ ಆಂಗ್ಲ ಮಾದ್ಯಮ ಗುರುಕುಲ ವಸತಿ ವಿದ್ಯಾಲಯದ ಪಾದಪೂಜೆ ನಂತರದ ಮಕ್ಕಳ ರಂಗೋತ್ಸವ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭದ ಸಾನಿಧ್ಯವನ್ನೂ ವಹಿಸಿ ಮಾತನಾಡುತ್ತಾ, ಇಂದು ಶಿಕ್ಷಕರು ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಶಾಲೆಗೆ ಬನ್ನಿ ಎಂದು ಗೋಗರಿಯುವ ಅನಿವಾರ್ಯತೆ ಬಂದಿದೆ. ಇದು ಆತಂಕದ ಸಂಗತಿ. ಇದರ ನಡುವೆ ಸಂಸ್ಕಾರ ನೀಡುವ ಜೊತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಕಲಿಸುವ ಮಾದರಿ ಶಾಲೆಯಾಗಿ ರಾಮಕೃಷ್ಣ ಗುರುಕುಲ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವೆಂದರು.

ಹಣೆಮುಟ್ಟಿ ಪಾದಕ್ಕೆ ನಮಸ್ಕರಿಸುವಾಗ ನಿಮ್ಮ ಮೂಗಿನಿಂದ ಪೂಜ್ಯರ, ಮಾತಾ-ಪಿತೃಗಳ ಚೈತನ್ಯ ಶಕ್ತಿ ನಿಮ್ಮ ಶ್ವಾಸಕೋಶದ ಮೂಲಕ ಮನಸ್ಸನ್ನು ಮುಟ್ಟುತ್ತದೆ. ಆಗ ಮನಸ್ಸಿನಲ್ಲಿರುವ ಅಂಧಕಾರ, ವಿಕಾರ, ಅಜ್ಞಾನವೆಂಬುದು ಮರೆಯಾಗುತ್ತದೆ ಎಂದ ಅವರು, ದಿನ ಬದಲಾದಂತೆ ವ್ಯವಸ್ಥೆಯು ಬದಲಾಗುತ್ತದೆ. ಆದರೆ ನಮ್ಮಲ್ಲಿ ಮನುಷ್ಯತ್ವ ಮರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶ್ವದೆಲ್ಲೆಡೆ ಯೋಗ ಮನೆಮಾತಾಗಿದೆ. ಭಾರತದ ಸಂಸ್ಕೃತಿಯ ಯೋಗ ಆರೋಗ್ಯ ಕಾಪಾಡು ಜೊತೆಗೆ ಮಾನಸಿಕ ಸ್ಥಿಮಿತತೆಯನ್ನು ನೀಡುತ್ತದೆ. ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಂದಿನ ದಿನಾಂಕ ನಿಗಧಿಯಾಗಲು ಕಾರಣ ಅಂದು ವರ್ಷದ ಎಲ್ಲಾ ದಿನಗಳಿಗಿಂತ ಹೆಚ್ಚು ಸಮಯ ಹಗಲಾಗಿರುತ್ತದೆ. ಬೆಳಕು ಜಾಸ್ತಿ. ಬೆಳಕೊಂದು ಚೈತನ್ಯ ಶಕ್ತಿ ಎಂದರು.

Jade Math  ಶಾಲೆಯ ಮಕ್ಕಳಿಂದ ವಿವಿಧ ಬಗೆಯ ರಂಗೋತ್ಸವ ಮನರಂಜನೆ ನೀಡಿತು. ವಿಶೇಷವಾಗಿ ಯಕ್ಷಗಾನ, ಭರತನಾಟ್ಯ, ಕಲಾತ್ಮಕ ನೃತ್ಯ, ಏಕಪಾತ್ರ ಅಭಿನಯ, ಮನಸೂರಗೊಂಡವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...