ಡಿ.8ರಂದು ತಮಿಳುನಾಡಿನ ಊಟಿ ಬಳಿ ಸಂಭವಿಸಿದ ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಹುತಾತ್ಮರಾದ ಭಾರತದ ಸಶಸ್ತ್ರಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಅಧಿಕಾರಿಗಳ ಅಂತ್ಯಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ಶುಕ್ರವಾರ ನಡೆಯಿತು.
ಕಾಮರಾಜ್ ಮಾರ್ಗದಲ್ಲಿ ಇರುವಂತಹ ರಾವತ್ ಅವರ ಅಧಿಕೃತ ನಿವಾಸದಲ್ಲಿ ಬಿಪಿನ್ ರಾವತ್ ದಂಪತಿಗಳ ಪಾರ್ಥಿವ ಶರೀರಗಳನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ರಾವತ್ ದಂಪತಿಗಳಿಗೆ ಅಂತಿಮ ನಮನ ಸಲ್ಲಿಸಿದರು.
ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲೀಕಾ ರಾವತ್ ಅವರ ಅಂತಿಮಯಾತ್ರೆ ಉದ್ದಕ್ಕೂ ‘ಚಂದ್ರ-ತಾರೆ ಇರುವವರೆಗೂ ರಾವತ್ ಜೀ ಅಮರ’, ‘ವಂದೇ ಮಾತರಂ’, ‘ಭಾರತ್ ಮಾತಾಕೀ ಜೈ’ ಇಂದು ಜನರು ಘೋಷಣೆಗಳನ್ನು ಕೂಗಿದರು. ರಾವತ್ ದಂಪತಿಗಳ ಅಂತಿಮ ಯಾತ್ರೆ ಉದ್ದಕ್ಕೂ ಸಾವಿರಾರು ಜನರು ನೆರೆದಿದ್ದರು.
ಬ್ರಾರ್ ಸ್ಕ್ವೇರ್ ನಲ್ಲಿ ರಾವತ್ ದಂಪತಿಗಳ ಚಿತೆಗೆ ಸೇನಾಪಡೆಗಳ 800 ಸಿಬ್ಬಂದಿಯು ಹಾಜರಿರುವ ಮೂಲಕ ಸಕಲ ಸೇನಾ ಗೌರವ ಸಲ್ಲಿಸಲಾಯಿತು. ’17 ಗನ್
ಸೆಲ್ಯೂಟ್’ ನ ಭಾಗವಾಗಿ ಫಿರಂಗಿಗಳಿಂದ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.ರಾವತ್ ಅವರ ಇಬ್ಬರು ಪುತ್ರಿಯರು ಪುತ್ರಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಅಗ್ನಿಸ್ಪರ್ಷ ಮಾಡಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.