Ram Mandir ಚಿಕ್ಕಮಗಳೂರು, ನಗರದ ಹಿರೇಮಗಳೂರಿನ ಶ್ರೀ ಕೋದಂಡರಾಮಚoದ್ರ ಸ್ವಾಮಿ ದೇವಾ ಲಯದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆಯನ್ನು ಮನೆಗಳಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಚಾಲನೆ ನೀಡಿ ಮಾತನಾಡಿದ ದೇವಾಲಯ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ಶ್ರೀ ರಾಮ ಜನ್ಮ ಸ್ಥಾನದಲ್ಲಿ ನಿರ್ಮಾಣ ವಾಗುತ್ತಿರುವ ಭವ್ಯ ಮಂದಿರದ ಶ್ರೀ ರಾಮಲಲ್ಲಾ ಪ್ರತಿಷ್ಠಾಪನೆ ಅಂಗವಾಗಿ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆ ವಾರ್ಡಿನ ನಿವಾಸಿಗಳಿಗೆ ತಲುಪಿಸುವ ಗುರಿ ಹೊಂದಿರುವುದು ಉತ್ತಮ ಸಂಗತಿ ಎಂದರು.
ನಿವಾಸಿಗಳಲ್ಲಿ ಭಾವತ್ಮಕ ಸಂಬoಧ ಬೆಳೆಸುವ ನಿಟ್ಟಿನಲ್ಲಿ ದೇವಾಲಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಂತ್ರ ಪಠಿಸಿ ಹಾಗೂ ಆಹ್ವಾನ ಪತ್ರಿಕೆ ಹಂಚಲು ಟ್ರಸ್ಟ್ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿ ಮನಸ್ಸಿನಲ್ಲಿ ರಾಮನಜಪ, ಆರಾಧನಾ ಮನೋಭಾವ ಮೂಡುವಂತ ಸತ್ಕಾರ್ಯಕ್ಕಾಗಿ ಟ್ರಸ್ಟ್ ಹಾಗೂ ಗ್ರಾಮಸ್ಥರು ಮುಂದಾಗಿ ರುವುದು ಒಳಿತು ಎಂದರು.
ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ನೂತನ ವಿಗ್ರಹ ಪ್ರಾಣಪ್ರತಿಷ್ಟೇ ನಡೆಯುತ್ತಿದೆ. ಹೀಗಾಗಿ ಕೋಟ್ಯಂತರ ಹಿಂದೂಗಳು ನಂಬಿಕೊoಡಿರುವ ಪ್ರಕಾರ ರಾಮಮಂದಿರ ಮತ್ತು ರಾಮ ಹುಟ್ಟಿದ್ದು ಅಯೋಧ್ಯೆಯಲ್ಲೇ. ಅಯೋಧ್ಯೆಯ ಚಕ್ರವರ್ಥಿ ದಶರಥ ಮತ್ತು ಕೌಸಲ್ಯರ ಹಿರಿಯ ಪುತ್ರನಾಗಿದ್ದ ರಾಮ, ಮರ್ಯಾದ ಪುರುಷೋತ್ತಮ ಎಂದೇ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.
ಟ್ರಸ್ಟ್ ನಗರ ಸಂಚಾಲಕ ಕೇಶವ ಮಾತನಾಡಿ ಇಂದು ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆಗಳಿಗೆ ವಿಶೇಷ ಪೂಜೆ ಜರುಗಿಸಿ ವಾರ್ಡಿನ ಪ್ರತಿ ಹಿಂದೂಗಳ ಮನೆಗಳಿಗೂ ತಲುಪಿಸುವ ಕಾರ್ಯಕ್ಕೆ ಹೊಸ ವರ್ಷಾರಾಂಭದ ದಿನದಂದು ಚಾಲನೆ ನೀಡಲಾಗಿದೆ.
ಹಿರೇಮಗಳೂರು ಗ್ರಾಮಸ್ಥರು ಮಂತ್ರಾಕ್ಷತೆ ಪಡೆಯುವ ಮೂಲಕ ಶ್ರೀರಾಮನ ಸ್ಮರಣೆಯಲ್ಲಿ ನಿರತರಾಗಬೇಕು ಎಂದು ಹೇಳಿದರು.
Ram Mandir ಈ ಸಂದರ್ಭದಲ್ಲಿ ಸಹಾಯಕ ಅರ್ಚಕ ವೈಷ್ಣವಸಿಂಹ, ಟ್ರಸ್ಟ್ನ ನಗರ ಸಂಯೋಜಕ ಡಾ.ರಾಮಾನುಜ, ನಗರ ಸಂಚಾಲಕರಾದ ಸುನಿಲ್ ಆಚಾರ್ಯ, ಹೆಚ್.ಎಸ್.ಪುಟ್ಟಸ್ವಾಮಿ, ಬಿ.ರೇವನಾಥ್, ಹೆಚ್.ಎಸ್. ಧನಂಜಯ, ರವಿಕುಮಾರ್, ರಾಜು, ಶ್ರೀಮತಿ ರಮಾ ಮೋಹನ್, ಜಯಣ್ಣ, ಮೋಹನ್ ಹಾಗೂ ಗ್ರಾಮಸ್ಥರು, ಹಿಂದೂ ಸಮಾಜ ಭಾಂದವರು, ಉಪಸ್ಥಿತರಿ ದ್ದರು.