Wednesday, July 8, 2026
Wednesday, July 8, 2026

Dr. Ambedkar ದಲಿತರು ಶೌರ್ಯ ಸ್ವಾಭಿಮಾನಿಗಳಾಗಿ ಸಂವಿಧಾನದ ಹಕ್ಕುಗಳಿಗೆ ಹೋರಾಡಬೇಕು- ಟಿ.ಎಚ್.ಹಾಲೇಶಪ್ಪ

Date:

Dr. Ambedkar ಶೌರ್ಯ, ಸ್ವಾಭಿಮಾನ, ಸತ್ಯಪಥದ ನಿಷ್ಠೆಯೇ ದಲಿತರ ಸಂಕೇತಗಳು, ಸ್ವಾಭಿಮಾನವಿಲ್ಲದ ಹೋರಾಟಗಳಿಗೆ ಇತಿಹಾಸವಿರುವುದಿಲ್ಲ. ದಲಿತರು ಶೌರ್ಯ ಸ್ವಾಭಿಮಾನಿಗಳಾಗಿ ಸಂವಿಧಾನಿಕ ಹಕ್ಕುಗಳಿಗೆ ಹೋರಾಡಬೇಕಿದೆ. ಅಲ್ಲದೇ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ ಎಂದು ಡಿ.ಎಸ್.ಎಸ್ ಅಂಬೇಡ್ಕರ್‌ವಾದ ಜಿಲ್ಲಾ ಪ್ರಧಾನ ಸಂಚಾಲಕರು ಆದ ಟಿ.ಹೆಚ್ ಹಾಲೇಶಪ್ಪ ತಿಳಿಸಿದರು.

ಇಂದು ಶಿವಮೊಗ್ಗ ನಗರದ ದಲಿತ ಸಂಘರ್ಷ ಸಮಿತಿ-ಅಂಬೇಡ್ಕರ್ ವಾದದ ಜಿಲ್ಲಾ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಭೀಮ ಕೋರೆಗಾವ ವಿಜಯೋತ್ಸವ ನೆನಪಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಷ್ಟೋ ಶೋಷಣೆ ಅನ್ಯಾಯಗಳಾದರು ಅವುಗಳನ್ನು ಮೆಟ್ಟಿ ನಿಂತು ಸ್ವಾಭಿಮಾನಿಗಳಾಗಿ ಸತ್ಯದ ಹಾದಿಯಲ್ಲಿ ಮನ್ನಡೆಯಬೇಕು. ಈ ಜಗತ್ತಿನಲ್ಲಿ ಭೂಮಿಗಾಗಿ ಅಧಿಕಾರಕ್ಕಾಗಿ ಸ್ವಾರ್ಥಕ್ಕಾಗಿ ಯುದ್ಧಗಳಾಗಿವೆ ಸಮಷ್ಟಿ ಪ್ರಜ್ಞೆ ಆತ್ಮಾಭಿಮಾನದ ಸಂಕೇತಗಳ ಉಳಿವಿಗಾಗಿ ನಡೆದ ಯುದ್ಧವೇ ಭೀಮಕೋರೆಗಾವ್ ಯುದ್ದ ಕೇವಲ ಎಂಬ ಶಬ್ದಕ್ಕೆ ಮಿಗಿಲಾಗಿ ಐದುನೂರು ಮಹಾರ್ ಸೈನಿಕರು ವೀರ ಚೇತನ ಸಿದ್ದನಾಕನ ಸಾರಥ್ಯದಲ್ಲಿ ಪೇಳ್ವೆ ಬಾಜಿರಾಯನ ಇಪ್ಪತ್ತೆಂಟು ಸಾವಿರ ಸೈನಿಕರಿಗೆ ಎದುರಾಗಿ ಯುದ್ಧ ಮಾಡಿ ವಿಜಯದ ಪತಾಕೆಯನ್ನು ಹಾರಿಸಿದರು.

ಈ ದೇಶದ ಸ್ವಾಭಿಮಾನಿ ದಲಿತರು ಇಂತಹ ಕೆಚ್ಚೆದೆಯ ಶೌರ್ಯದ ಮೂಲ ನಿವಾಸಿಗಳಾದ ನಾವುಗಳು ನಮ್ಮ ಸ್ವಾಭಿಮಾನದ ಬದುಕಿಗಾಗಿ ಗೌತಮ ಬುದ್ಧರ ಹಾದಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದಲ್ಲಿ ಅಡಿಯಲ್ಲಿ ಪ್ರೋ. ಬಿ. ಕೃಷ್ಣಪ್ಪ ನವಹೋರಾಟದ ಹಾದಿಯಲ್ಲಿ ನಂಬಿಕೆಯಿಟ್ಟು ನವಭೀಮ ಭಾರತ ನಿರ್ಮಿಸಬೇಕಾಗಿದೆ. ನಾವೆಂದಿಗೂ ಮಾನಸಿಕ ಗುಲಾಮರಾಗದೇ ಮೌಡ್ಯದಿಂದ ಹೊರಬರಬೇಕು ಎಂದರು.

ಈಗಿನ ಪರಿಸ್ಥಿತಿಯಲ್ಲಿ ದಲಿತರಲ್ಲದವರು, ದಲಿತರ ಮುಖವಾಡ ಧರಿಸಿ ದಲಿತರ ವಿರುದ್ಧವೇ ಮಾತನಾಡುತ್ತಿರುವುದು ಅಸಹ್ಯವಾಗುತ್ತಿದೆ. ದುರಾಭಿಮಾನವನ್ನೇ ಸ್ವಾಭಿಮಾನವೆಂದು ಮೆರೆಯುತ್ತಿರುವವರ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದರು.

Dr. Ambedkar ದಲಿತರ ಏಳಿಗೆ ದಲಿತರ ಕೈಯಲ್ಲೇ ಇದೆ ನಮಗೆ ನಾವೇ ದಾರಿದೀಪವಾಗಬೇಕು, ಕತ್ತಲೆಯಲ್ಲಿರುವ ದಲಿತರ ಬಾಳಿಗೆ ಬೆಳಕಾಗಬೇಕು. ಹೋರಾಟ ಕೇವಲ ಅಸ್ಥಿತ್ವಕ್ಕೆ ಮಾತ್ರ ಸೀಮಿತವಾಗದೇ ಬಡವರ, ಶೋಷಿತರ, ಮಹಿಳೆಯರ ಸ್ವಾಭಿಮಾನವನ್ನು ರಕ್ಷಿಸುವಂತಾಗಬೇಕು ಎಂದರು. ತಾಳ್ಮೆ, ವಿವೇಕ ಸರಳವಾದ ತರ್ಕಬದ್ಧ ಆಲೋಚನೆಗಳು ನಮ್ಮಲ್ಲಿ ಬೆಳೆಯಬೇಕು. ಕಾರ್ಯಕರ್ತರು ಎಂದಿಗೂ ಮೈಮರೆಯಬಾರದು. ಮಹಾನ್ ನಾಯಕ ಸಿದ್ದನಾಕರ ಧೈರ್ಯ, ಸಾಹಸ ನಮಗೆ ಆದರ್ಶವಾಗಬೇಕು. ದಲಿತರೆಂಬ ಸುಳ್ಳು ಹಣೆಪಟ್ಟಿ ಕಟ್ಟಿಕೊಂಡಿರುವ ಕುತಂತ್ರಿಗಳಿಗೆ ನಮ್ಮ ಹೋರಾಟದ ಮೂಲಕ ಉತ್ತರಿಸಬೇಕಾಗಿದೆ. ನಾವುಗಳು ಯಾರ ಅಧೀನವು ಅಲ್ಲ ದಾಸರೂ ಅಲ್ಲ ಸ್ವಾಭಿಮಾನ ಚೇತನ ಸಿದ್ದನಾಕರ ವಂಶಸ್ಥರು ಎಂದರು.

ಕಾರ್ಯಕ್ರಮದಲ್ಲಿ ಎಂ.ಆ‌ ಶಿವಕುಮಾರ್, ಎ.ಡಿ ಆನಂದ್, ಹುಣಸೋಡು ಶೇಷಪ್ಪ, ಪರಮೇಶ್ ಸಂತೆಕಡೂರು, ಸೂಗೂರು ಪರಮೇಶ್, ಜಗ್ಗು, ಮುತ್ತು, ಪೈಲ್ವಾನ್ ಈಶ್ವರಪ್ಪ, ಮಾಚೇನಹಳ್ಳಿ ರುದ್ರಮ್ಮ, ಲತಾ ಬಿದರೆ, ರಾಧ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...

B.Y. Raghavendra ಮನೆ ಬಾಗಿಲಿಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನುನೀಡಿ- ಬಿ.ವೈ.ರಾಘವೇಂದ್ರ

B.Y. Raghavendra ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ...