Wednesday, July 8, 2026
Wednesday, July 8, 2026

Malanadu Vidya Samasthe Chikmagalur ಮಕ್ಕಳು ಭವಿಷ್ಯದಲ್ಲಿ ಏನಾಗಬೇಕೆಂಬ ಗುರಿ ಹೊಂದಿರ ಬೇಕು‌- ಡಿ.ಎಲ್.ವಿಜಯಕುಮಾರ್

Date:

Malanadu Vidya Samasthe Chikmagalur ವಿದ್ಯಾರ್ಥಿದೆಸೆಯಿಂದಲೇ ಮಕ್ಕಳು ಭವಿಷ್ಯದಲ್ಲ್ಲಿ ಏನಾಗಬೇಕೆೆಂಬ ನಿರ್ದಿ ಷ್ಟ ಗುರಿ ಹೊಂದಿ ಮುನ್ನೆಡೆದರೆ ಯಶಸ್ವಿ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್ ಹೇಳಿದರು.

ಚಿಕ್ಕಮಗಳೂರಿನ ಜ್ಯೋತಿನಗರ ಸಮೀಪ ಮಲೆನಾಡು ವಿದ್ಯಾಸಂಸ್ಥೆ ಪ್ರಾಯೋಗಿಕ ಪ್ರೌಢಶಾಲೆಯ 30ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಶನಿವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

ಬದುಕಿನಲ್ಲಿ ಹಲವಾರು ಏರು-ಪೇರುಗಳಿವೆ. ಎಲ್ಲವನ್ನು ನಿಭಾಯಿಸಿಕೊಂಡು ಹೋಗುವುದು ಮಾನವನ ಸಹಜ ಗುಣ. ಹೀಗಾಗಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಆಸಕ್ತಿಯಿರುವ ವಿಷಯಗಳಲ್ಲಿ ಪರಿಣಿತಿ ಹೊಂದುವ ಮೂಲಕ ಶಕ್ತಿಮೀರಿ ಪ್ರಯತ್ನಿಸಿದರೆ ಖಂಡಿತ ಸಫಲರಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಪ್ರೌಢಶಾಲೆಯಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಪ್ರಾಮಾಣಿಕವಾಗಿ ಪ್ರೋತ್ಸಾಹಿಸುವ ಕಾರ್ಯ ವನ್ನು ಪ್ರಾಂಶುಪಾಲರು ಹಾಗೂ ಶಿಕ್ಷಕರ ವೃಂದ ಮಾಡಲಾಗುತ್ತಿದೆ. ಇಂತಹ ಅವಕಾಶಗಳಿಂದ ಹಿಂದೆ ಸರಿಯದೇ ಮುಕ್ತವಾಗಿ ಭಾಗವಹಿಸಿ ಹುದುಗಿರುವ ಕಲಾಪ್ರತಿಭೆಯನ್ನು ಹೊರಚಿಮ್ಮಿಸಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆ ಸಂಯೋಜಕ ಟಿ.ಜಿ.ಕೃಷ್ಣಮೂರ್ತಿ ಅರಸ್ ಮಾತನಾಡಿ ಪ್ರಾಯೋಗಿಕ ಪ್ರೌಢಶಾಲೆ ಯು ಹಲವಾರು ವರ್ಷಗಳ ಹಿಂದೆಯೇ ಸ್ಥಾಪಿತಗೊಂಡಿತು. ಅಂದಿನ ಕಾಲದಲ್ಲಿ ಶಾಲೆ ನಗರದ ಹೊರವಲಯ ವೆಂದು ಬಿಂಬಿತವಾಗಿತ್ತು. ಸೂಕ್ತ ರಸ್ತೆ ಮತ್ತು ಬೀದಿದೀಪದ ಕೊರತೆಯಿತ್ತು. ಇದೀಗ ನಗರ ಬೆಳೆದಂತೆ ಪ್ರಮುಖ ಭಾಗದಲ್ಲಿ ಒಂದಾಗಿರುವ ಶಾಲೆಗೆ ಸುತ್ತಮುತ್ತಲಿನ ನೂರಾರು ಮಕ್ಕಳು ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.

Malanadu Vidya Samasthe Chikmagalur ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂಇಎಸ್ ಉಪಾಧ್ಯಕ್ಷೆ ರಾಧಾ ಸುಂದರೇಶ್ ಗುಣಮಟ್ಟ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯ ಹಿರಿಯರು ಶಾಲೆಯನ್ನು ಸ್ಥಾಪಿಸಿದ್ದು ಅಂದಿನಿ0ದ ಇಂದಿವರೆಗೂ ಸಾಗುತ್ತಾ ಮೂರು ದಶಕಗಳನ್ನು ಪೂರೈಸಿ ಮುನ್ನೆಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಇದೇ ವೇಳೆ ಪ್ರೌಢಶಾಲೆಯ ೪೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಎಂಇಎಸ್ ಸಹ ಕಾರ್ಯದರ್ಶಿ ಎಸ್.ಶಂಕರನಾರಾಯಣಭಟ್, ಶೈಕ್ಷಣಿಕ ಸಲಹೆಗಾರ ಮಂಜುನಾಥ್‌ಭಟ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೌಸರ್ ಫಾತಿಮಾ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...