Thursday, December 18, 2025
Thursday, December 18, 2025

Yuva Nidhi ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಹಿ ಎಕ್ಸ್ಪೋರ್ಟ್ ಸದಾ ಸಿದ್ಧ- ಸುಖವಂತ ಸಿಂಗ್ ಬೈನ್ಸ್

Date:

Yuva Nidhi ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಸತ್ಪ್ರಜೆಗಳನ್ನು ರೂಪಿಸಲು ಅಗತ್ಯವಾದ ಸಹಾಯವನ್ನು ಶಾಹಿ ಎಕ್ಸ್ಪೋರ್ಟ್ ಸದಾ ನೀಡುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಖವಂತ್ ಸಿಂಗ್ ಬೈನ್ಸ್ ತಿಳಿಸಿದರು.

ಶಿವಮೊಗ್ಗ ಸಮೀಪದ ಶಾಹಿ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಯು ನಿಧಿಗೆ ಸರ್ಕಾರಿ ಪ್ರೌಢಶಾಲೆಗೆ ನೀಡಿರುವ ಐದೂವರೆ ಲಕ್ಷ ರೂ ಮೌಲ್ಯದ ವಿಜ್ಞಾನ ಪ್ರಯೋಗಾಲಯ ( ಸ್ಟೆಮ್ ಲ್ಯಾಬ್) ವನ್ನು ಹಸ್ತಾಂತರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅದರ ಸದುಪಯೋಗ ಪಡೆಯುವಂತೆ ಸೂಚಿಸಿದರು.

ನೀವೇ ನಾಳಿನ ಭವಿಷ್ಯದ ನಾಯಕರು. ನಿಮ್ಮ ಬುದ್ಧಿವಂತಿಕೆಯನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಿ. ನಿಮ್ಮ ಬೆಳವಣಿಗೆಗೆ ನಮ್ಮ ಆಡಳಿತ ಮಂಡಳಿ ಸದಾ ಸಹಾಯ ಹಸ್ತ ನೀಡುತ್ತದೆ ಎಂದು ಹೇಳಿದರು.

ಸಂಸ್ಥೆಯ ಮತ್ತೋರ್ವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಅಲಗಪ್ಪನ್ ಅವರು ಮಾತನಾಡುತ್ತಾ ಈ ಶಾಲೆಗೆ ನೀಡಿರುವಂತಹ ಅವಕಾಶಗಳನ್ನು ನಮ್ಮ ಸಂಸ್ಥೆ ಎಲ್ಲೆಡೆ ಮಾಡುತ್ತಿದೆ. ಇಲ್ಲಿನ ಮಕ್ಕಳಿಗೆ ಸದ್ಯದಲ್ಲೇ ಉತ್ತಮವಾದ ಸೈಕಲ್ಗಳನ್ನು ನೀಡುತ್ತೇವೆ. ಮಕ್ಕಳು ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಿ ಎಂದರು.

ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ನಾಗರಾಜ್ ಅವರು ಮಾತನಾಡುತ್ತಾ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಾಹಿ ಎಕ್ಸ್ಪೋರ್ಟ್ಸ್ ಸಹಕಾರ ನೀಡುತ್ತಿರುವುದನ್ನು ಸ್ಲಾಗತಿಸಿ ಇಂತಹ ಲಾಭಗಳಿಂದ ಮಕ್ಕಳಲ್ಲಿ ಪ್ರತಿಭೆ ಪ್ರದರ್ಶಿಸಲು ಹಾಗೂ ಅನೇಕ ಆಲೋಚನಾ ಶಕ್ತಿಗಳನ್ನು ಬೆಳೆಸಲು ಅನುಕೂಲ ಮಾಡಿಕೊಡುತ್ತದೆ ಎಂದರು.

ಶಾಹಿಯ ಎಜಿಎಂ ಲಕ್ಷ್ಮಣ ಧರ್ಮಟ್ಟಿ ಅವರು ಮಾತನಾಡುತ್ತಾ, ಪ್ರಾಯೋಗಿಕ ಕಲಿಕೆಯಿಂದ ಮಾತ್ರ ಓದು ಸುಲಭವಾಗುತ್ತದೆ. ಇಂತಹ ಯೋಜನೆಯಲ್ಲಿ ನಮ್ಮ ಸಂಸ್ಥೆ ವಿಜ್ಞಾನ ಪ್ರಯೋಗಾಲಯವನ್ನು ನೀಡಿದ್ದು ಇದನ್ನು ಬಳಸಿ ನೀವು ಬೆಳೆಯಿರಿ ಎಂದರು.

ಡಯಟ್ ನ ಉಪ ಪ್ರಾಂಶುಪಾಲ ನಾಗರಾಜಪ್ಪ ಅವರು ಮಾತನಾಡುತ್ತಾ ಸರಿಯಾದ ಗುರಿಗಳೊಂದಿಗೆ ಮಕ್ಕಳು ಬೆಳೆಯಬೇಕು ನಿರಂತರವಾದ ಪ್ರಯತ್ನದ ಕಲಿಕೆಯಿಂದ ಯಶಸ್ಸು ಸಾಧ್ಯ ಎಂದರು.

Yuva Nidhi ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣಪ್ಪ ವಹಿಸಿದ್ದು, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಶಾಹಿ ಎಕ್ಸ್ ಪೋರ್ಟ್ ನ ಪ್ರೀತೇಶ, ನಾಗಯ್ಯ, ಪ್ರಮುಖರಾದ ಸೋಮಶೇಖರ್, ಪ್ರಮೀಳಾ, ಕರಿಬಸಪ್ಪ, ಮಂಜುಳಾ, ಭರ್ಮಪ್ಪ, ಸ್ಟೆಮ್ ನ ಧರ್ಮದೇವ್, ನವೀನ್, ಎಸ್‌ಡಿಎಂಸಿ ಪದಾಧಿಕಾರಿಗಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...

Department of Agriculture 2026 ಜನವರಿ 6. ಕೃಷಿ ಇಲಾಖೆಯಿಂದ “ಸಿರಿಧಾನ್ಯ & ಮರೆತು ಹೋದ ಖಾದ್ಯಗಳ ಪಾಕ ತಯಾರಿ” ಸ್ಪರ್ಧೆ

Department of Agriculture ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ...

Shivamogga Police ಶಿಕಾರಿಪುರ- ಚುರ್ಚುಗುಂಡಿಯಿಂದ ಯುವಕ ನಾಪತ್ತೆ, ಪೊಲೀಸ್ ಪ್ರಕಟಣೆ

Shivamogga Police ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...