Thursday, December 18, 2025
Thursday, December 18, 2025

Today Suddigara Newspaper ಸಮಾಜ ಮತ್ತು ದೇಶದ ಅಭಿವೃದ್ದಿಯಲ್ಲಿಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ

Date:

Today Suddigara Newspaper ಸಮಾಜದಲ್ಲಿ ಜರುಗುವ ಸರಿ-ತಪ್ಪುಗಳನ್ನು ಪತ್ರಿಕೆಗಳಲ್ಲಿ ನ್ಯಾಯಸಮ್ಮ ತವಾಗಿ ಪ್ರಕಟಿಸುವ ಮೂಲಕ ಸಾರ್ವಜನಿಕರಿಗೆ ಸಮರ್ಪಕ ವರದಿ ನೀಡುವ ಕೆಲಸ ಪತ್ರಿಕಾ ಮಾಧ್ಯಮಗಳು ಮಾಡಬೇಕು ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.

ಚಿಕ್ಕಮಗಳೂರು ನಗರ ಹೊರವಲಯದ ಜೀವನ್‌ಸಂಧ್ಯಾ ವೃದ್ದಾಶ್ರಮದಲ್ಲಿ ಟುಡೇ ಸುದ್ದಿಗಾರ ಪತ್ರಿಕೆಯ ದಶಮಾನೋತ್ಸವ ಹಾಗೂ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಪತ್ರಕರ್ತರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುವವರನ್ನು ಗುರುತಿಸಿ ಸಮಾಜಕ್ಕೆ ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಜನರನ್ನು ಸರಿಯಾದ ದಾರಿಗೆ ತರುವ ಹಾಗೂ ಜನ ವಿರೋಧಿ ಕ್ರಮಗಳನ್ನು ಕೈಗೊಂ ಡಾಗ ಅವುಗಳನ್ನು ಬಿಂಬಿಸಿ ಸರಿ ದಾರಿಗೆ ತರುವ ಕೆಲಸವನ್ನು ಮಾಡಬೇಕು ಎಂದರು.

ಟುಡೇ ಸುದ್ದಿಗಾರ ಸಂಪಾದಕ ಬಿ.ಎಂ.ಕುಮಾರ್ ಮಾತನಾಡಿ ಕಳೆದ ಒಂದು ದಶಕದಿಂದಲೂ ಹಲವಾರು ಏರು-ಪೇರುಗಳ ನಡುವೆಯು ಪತ್ರಿಕೆಯನ್ನು ನಡೆಸುತ್ತಾ ಬರಲಾಗಿದ್ದು ಯಾವುದೇ ಆಸೆ-ಆಮಿಷಗಳಿಗೆ ಒಳಗಾ ಗದೇ ಸಮರ್ಪಕ ವರದಿ ನೀಡಿ ಓದುಗರರಿಗೆ ನ್ಯಾಯಸಮ್ಮತ ತೀರ್ಪುಗಳನ್ನು ನೀಡುತ್ತಿದೆ ಎಂದರು.

ಅದಲ್ಲದೇ ಪತ್ರಿಕಾ ಬಳಗದಿಂದ ಹಲವಾರು ಸಾಮಾಜಿಕ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವ ಪ್ರತಿ ವರ್ಷ ಆಚರಣೆಯಲ್ಲಿ ತೊಡಗಿಸಿಕೊಂಡಿದೆ. ನಾಡು, ನುಡಿ ರಕ್ಷಣೆಯ ವಿಚಾರದಲ್ಲಿ ಎಂದಿಗೂ ರಾಜೀಗೊಳಗಾ ಗದೇ ಸಮಗ್ರ ವರದಿ ನೀಡುತ್ತಿದೆ ಎಂದು ತಿಳಿಸಿದರು.

Today Suddigara Newspaper ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಆನಂದ್ ವಹಿಸಿ ದ್ದರು. ಈ ಸಂದರ್ಭದಲ್ಲಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಂ.ನಾರಾಯಣ್, ವಿಗ್ರಹಶಿಲ್ಪಿ ಸಿ. ಎಸ್.ಏಕಾಂತರಾಮು, ಗಣಪತಿ ಸೇವಾ ಸಮಿತಿ ಗೌರವ ಅಧ್ಯಕ್ಷ ಸಿ.ಎಸ್.ಕುಭೇರ, ಮುಖಂಡರುಗಳಾದ ಐ.ಕೆ. ಓಂಕಾರೇಗೌಡ, ಮಾನುಮಿರಾಂಡ, ಎಲ್.ವಿ.ಕೃಷ್ಣಮೂರ್ತಿ, ಅಪ್ಸರ್ ಅಹ್ಮದ್, ಜಯಪ್ರಕಾಶ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...