Bharath Jodo Yatra ದಕ್ಷಿಣ ಭಾರತದ ತುದಿಯಾದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಐದು ತಿಂಗಳು ನಡೆದ ಭಾರತ್ ಜೋಡೋ ಯಾತ್ರೆ ಬಳಿಕ ಕಾಂಗ್ರೆಸ್ ನಾಯಕರ ರಾಹುಲ್ ಯವರು 2024ರ ಜನವರಿ 14 ರಿಂದ ಭಾರತ್ ನ್ಯಾಯ ಯಾತ್ರೆ ಕೈಗೊಳ್ಳಲಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ 7ರಿಂದ ಈ ವರ್ಷದ ಜನವರಿ 20ರವರೆಗೆ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ನಡೆದ ಭಾರತ್ ಜೋಡೋ ಯಾತ್ರೆಯೂ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಿತ್ತು.
ಈಗ ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದ ಇಂಪಾಲಿನಿಂದ ಮುಂಬೈವರೆಗಿನ ಈ ಯಾತ್ರೆ 66 ದಿನ ನಡೆಯಲಿದೆ. ಲೋಕಸಭೆ ಚುನಾವಣೆ ಮುನ್ನ ಕೈಗೊಳ್ಳಲಿರುವ ಯಾತ್ರೆಯಲ್ಲಿ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾಗಲಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
Bharath Jodo Yatra ರಾಹುಲ್ ಗಾಂಧಿಯವರ ಈ ಎರಡನೆಯ ತ್ರಿ ಪೂರ್ವದಿಂದ ಪಶ್ಚಿಮದವರೆಗೆ 14 ರಾಜ್ಯಗಳ 85 ಜಿಲ್ಲೆಗಳಲ್ಲಿ 6200 ಕಿಲೋ ಮೀಟರ್ ಕ್ರಮಿಸಲಿದೆ. ಯಾತ್ರೆಯು ಹೈಬ್ರಿಡ್ ಮಾದರಿಯಲ್ಲಿ ಇರಲಿದ್ದು ಬಸ್ ಸಂಚಾರ ಮತ್ತು ಪಾದಯಾತ್ರೆ ಎರಡನ್ನು ಒಳಗೊಂಡಿರಲಿದೆ.
ಯಾತ್ರೆಯು ಮಣಿಪುರ , ನಾಗಾಲ್ಯಾಂಡ್, ಅಸ್ಸಾಂ, ಬಂಗಾಳ, ಬಿಹಾರ, ಜಾರ್ಖಂಡ್, ಮೇಘಾಲಯ, ಓಡಿಸ್ಸಾ ಛತ್ತೀಸ್ಗಡ, ಉತ್ತರ ಪ್ರದೇಶ್ ಮಧ್ಯ ಪ್ರದೇಶ್, ರಾಜಸ್ಥಾನ, ಗುಜರಾತ್, ಮತ್ತು ಮಹಾರಾಷ್ಟ್ರದಲ್ಲಿ ಸಂಚರಿಸಲಿದೆ.
ಇದು ಕೇವಲ ಘೋಷಣೆ ಅಷ್ಟೇ
ಇದರಿಂದ ಜನರನ್ನ ಮೂರ್ಖ ಮಾಡಲು ಆಗುವುದಿಲ್ಲ. ಮೋದಿ ಅವರು ಈಗಾಗಲೇ ನ್ಯಾಯವನ್ನು ಖಚಿತಪಡಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಹೇಳಿದ್ದಾರೆ.