Tuesday, November 26, 2024
Tuesday, November 26, 2024

Ramakrishna Vidyashram Trust ಶಿವಮೊಗ್ಗ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ಶಾಲೆಯಲ್ಲಿಜನ್ಮದಾತರ ಪಾದಪೂಜೆ ಕಾರ್ಯಕ್ರಮ

Date:

Ramakrishna Vidyashram Trust ಹಿಂದಿನಿಂದಲೂ ರಾಜ್ಯದಲ್ಲೇ ಮಾದರಿಯಾದ ಜನ್ಮದಾತರ ಪಾದಪೂಜೆ ಕಾರ್ಯಕ್ರಮ ನಡೆಸುತ್ತಿರುವ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ವಸತಿ ಶಾಲೆಯಲ್ಲಿ ಈ ವರ್ಷವೂ 2024ರ ಜನವರಿ ಒಂದರಂದು ಜನ್ಮದಾತರಿಗೆ ಪಾದಪೂಜೆ, ರಂಗೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆಯ ಬೃಹತ್ ಶಾಲಾ ಆವರಣದಲ್ಲಿ ಬೆಳಗ್ಗೆ 8 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಜನ್ಮದಾತರ ಪಾದಪೂಜೆ ಸಮಾರಂಭದಲ್ಲಿ ಸುಮಾರು ಸಾವಿರ ಮಕ್ಕಳು, ಅವರ ಪೋಷಕರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಡಾ.ಮಹಂತ ಮಹಾಸ್ವಾಮಿಗಳು ಸಾನಿದ್ಯವಹಿಸಲಿದ್ದು, ಸಾಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜ್ಞಾನಾನಂದ ಜೀ ಮಹಾರಾಜ್ ರವರು ಉಪಸ್ಥಿತರಿರುತ್ತಾರೆ.

Ramakrishna Vidyashram Trust ಕಾರ್ಯಕ್ರಮದಲ್ಲಿ ವಿಶೇಷವಾಗಿ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಜಿ. ಎಚ್. ವೆಂಕಟೇಶ್, ಹಾಗೂ ಶಾಲೆಯ ಸಾಧಕ ಹಿರಿಯ ವಿದ್ಯಾರ್ಥಿ ಡಾ. ವಿನಯ್ ಕೆ ಅಲಗುಂಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಟ್ರಸ್ಟ್ ಅಧ್ಯಕ್ಷ ಡಾ. ನಾಗೇಶ್ ಡಿ.ಆರ್. ನಾಗೇಶ್ ಅಧ್ಯಕ್ಷತೆ ವಹಿಸಿರುವ ಕಾರ್ಯಕ್ರಮದಲ್ಲಿ ಸದಸ್ಯರಾದ ಡಿ. ಎಂ. ದೇವರಾಜು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ ಅವರು ಉಪಸ್ಥಿತರಿರುತ್ತಾರೆ. ರಾಜ್ಯದಲ್ಲಿ ಪಾದಪೂಜೆಯಂತಹ ಕಾರ್ಯಕ್ರಮವನ್ನು ಮೊಟ್ಟಮೊದಲು ಆರಂಭಿಸಿದ್ದ ರಾಮಕೃಷ್ಣ ವಿದ್ಯಾನಿಕೇತನ, ಇಲ್ಲಿಯವರೆಗೆ ಪ್ರತಿ ವರ್ಷದ ಮೊದಲ ದಿನದಂದು ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಇಲ್ಲಿನ ಗುರುಕುಲ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ರಾಜ್ಯದ ಹಾಗೂ ಹೊರರಾಜ್ಯದ ಮಕ್ಕಳ ಪೋಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಡೀ ದಿನ ಈ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...