Agricultural Retailers Association ರೈತರಿಗೆ ನೆರವಾಗುವ ಜೊತೆಗೆ ವ್ಯಾಪಾರಕ್ಕೂ ಅಡ್ಡಿಯಾಗದ ರೀತಿ ಯಲ್ಲಿ ವ್ಯವಹಾರ ನಡೆಸಿದರೆ ಮಾತ್ರ ಕೃಷಿಪರಿಕರಗಳ ವ್ಯಾಪಾರಸ್ಥರು ಮುಂದಿನ ದಿನದಲ್ಲಿ ಬದುಕಲು ಸಾಧ್ಯ ಎಂದು ಕೃಷಿ ಮತ್ತು ಪರಿಕರ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದರು.
ಚಿಕ್ಕಮಗಳೂರು ನಗರದ ಐ.ಜಿ.ರಸ್ತೆ ಸಮೀಪ ಜಿಲ್ಲಾ ಕೃಷಿ ಪರಿಕರ ಮತ್ತು ಮಾರಾಟಗಾರ ಸಂಘದ ವತಿಯಿಂದ ಏರ್ಪಡಿಸಿದ್ದ ಹೊಸವರ್ಷದ ನೂತನ ಕ್ಯಾಲೆಂಡರನ್ನು ಸೋಮವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
Agricultural Retailers Association ರಾಜ್ಯಾದ್ಯಂತ ಕೃಷಿಪರಿಕರಗಳ ವ್ಯಾಪಾರಸ್ಥರು ವ್ಯವಹಾರ ನಡೆಸುತ್ತಿದ್ದು ಕೆಲವು ಜಿಲ್ಲೆಗಳಲ್ಲಿ ಸಂಘಟನೆಗಳಿಲ್ಲ. ಆ ನಿಟ್ಟಿನಲ್ಲಿ ರಾಜ್ಯಸಂಘದ ಸಹಕಾರ ಪಡೆದುಕೊಂಡು ಜಿಲ್ಲಾ ಮಟ್ಟದಲ್ಲಿ ಸಂಘ ಸ್ಥಾಪಿಸಿದರೆ ವ್ಯಾಪಾರದ ಸಮಸ್ಯೆ ಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ರೂಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ರೈತರು ಹಾಗೂ ಕೃಷಿ ಪರಿಕರಗಳ ಜೊತೆ ಅನೋನ್ಯ ಸಂಬಂಧವಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಬ್ಸಿಡಿ ದರದಲ್ಲಿ ಪರಿಕರ ವಿತರಿಸಲಾಗುತ್ತಿದೆ. ಆದರೆ ವ್ಯಾಪಾರಸ್ಥರು ಆಧಾಯಗೊಂಡರೆ ಮಾತ್ರ ಮಾರಾಟ…