Wednesday, September 16, 2026
Wednesday, September 16, 2026

Dattatreya Sivananda Tirtha Guru ಚಿತ್ತ ಬುದ್ಧಿ ಮನಸ್ಸುಗಳ ಏಕಾಗ್ರತೆಯಿಂದ ಭಗವದಾನಂದ ಪ್ರಾಪ್ತಿ- ಎಚ್.ಬಿ.ಮಂಜುನಾಥ್

Date:

Dattatreya Sivananda Tirtha Guru ಚಂಚಲಶೀಲ ಮನಸ್ಸನ್ನು ಬುದ್ಧಿಯಿಂದ ನಿಗ್ರಹಿಸುತ್ತಾ ಚಿತ್ತೈಕಾಗ್ರತೆಯಿಂದ ಅದನ್ನು ಆತ್ಮಾನುಭವದ ಕಡೆಗೆ ಹರಿಸಿದಾಗ ಭಗವದಾನಂದ ಪ್ರಾಪ್ತಿಯಾಗುತ್ತದೆ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ಅವರಿಂದು ಜಯದೇವ ವೃತ್ತದ ಶ್ರೀ ದತ್ತಾತ್ರೇಯ ಶಿವಾನಂದ ತೀರ್ಥ ಗುರು ಆಧ್ಯಾತ್ಮ ಮಂದಿರದಲ್ಲಿ ದತ್ತ ಜಯಂತಿ ಅಂಗವಾಗಿ ಏರ್ಪಾಡಾಗಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬ್ರಹ್ಮ ವಿಷ್ಣು ಪರಮೇಶ್ವರರ ಸಂಯುಕ್ತ ರೂಪವಾದ ದತ್ತಾತ್ರೇಯರ ಸಂಕೇತವೆಂದರೆ ಜ್ನಾನಾರ್ಜನೆಯು ಬ್ರಹ್ಮವಾಗಿಯೂ, ಪಡೆದ ಜ್ಞಾನದ ಉಳಿಸಿಕೊಳ್ಳುವಿಕೆಯು ವಿಷ್ಣುವಾಗಿಯೂ, ಅಜ್ಞಾನ ನಾಶವು ಶಿವ ಸಂಕೇತವಾಗಿ ಶುಭವಾಗುತ್ತದೆ, ಹೀಗಾಗಿಯೇ ದತ್ತಾತ್ರೇಯರು ಪರಮ ಗುರು ಎನಿಸಿಕೊಳ್ಳುತ್ತಾರೆ. ನಿರ್ಗುಣ ನಿರಾಕಾರ ಸತ್ ಚಿತ್ ಆನಂದದಾಯಕ ಪರಬ್ರಹ್ಮ ವಸ್ತುವಿನ ಅನುಭವ ಬರಬೇಕೆಂದರೆ ಋತ ಸತ್ಯಗಳ ಅರಿವಾಗಬೇಕು, ಇದಕ್ಕಾಗಿ ಜ್ಞಾನ ಸೃಷ್ಟಿಯಾಗಬೇಕು, ಸೃಷ್ಟಿಯಾದ ಜ್ಞಾನ ಶಾಶ್ವತವಾಗಿ ಉಳಿಯಬೇಕು, ಅಂತರದಲ್ಲಿ ಬರುವ ಅಜ್ಞಾನವು ನಾಶವಾಗಲೇ ಬೇಕು, ದತ್ತಾತ್ರೇಯ ರೂಪವು ತ್ರಿಮೂರ್ತಿ ಏಕತ್ರದ ಪರಮ ಸತ್ಯ ಸಂಕೇತವಾಗಿದೆ, ಇದನ್ನು ಅರಿತು ಪಾಲಿಸುವುದೇ ನಿಜವಾದ ದತ್ತಾತ್ರೇಯ ಪೂಜೆ ಮತ್ತು ಆರಾಧನೆ ಎನಿಸುತ್ತದೆ ಎಂದರು.

Dattatreya Sivananda Tirtha Guru ಇದೇ ಸಂದರ್ಭದಲ್ಲಿ ಇಂದಿನ ಪುಷ್ಪಾಲಂಕಾರ ಸೇವಾಕರ್ಕರಾದ ಡಾ. ಜಾದವ್ ರನ್ನು ಗೌರವಿಸಿ ಆಶೀರ್ವದಿಸಲಾಯಿತು. ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಶ್ರೀಧರ ಶ್ರೇಷ್ಟಿ, ಶ್ರೀಮತಿ ಗೀತಾ ಶ್ರೀಧರ್, ಅಧ್ಯಾತ್ಮ ಮಂದಿರದ ಶ್ರೀಯುತ ಆರ್ ಜಿ ದತ್ತರಾಜ್ ಮುಂತಾದವರು ಭಾಗವಹಿಸಿದ್ದರು.

ವೇದ ಮೂರ್ತಿ ಶಿವರಾಮ ಶಾಸ್ತ್ರೀ ಮುಂತಾದವರು ಪೂಜಾದಿಗಳನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...