Welfare Development Association ಕಳೆದ ಹಲವು ದಶಕಗಳಿಂದ ಹಿಂದುಳಿದಿರುವ ಕುಂಬಾರ ಗುಂಡಯ್ಯ ಜನಾಂಗಕ್ಕೆ ಸರ್ಕಾರದ ಸವಲತ್ತು ಒದಗಿಸಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢಗೊಳಿಸಲು ಮುಂದಾಗ ಬೇಕು ಎಂದು ಶ್ರೀ ಕುಂಬಾರ ಗುಂಡಯ್ಯ ಕ್ಷೇಮಾಭಿವೃದ್ದಿ ಸಂಘವು ಕಡೂರು ಶಾಸಕ ಕೆ.ಎಸ್.ಆನಂದ್ ಅವರನ್ನು ಶುಕ್ರವಾರ ಒತ್ತಾಯಿಸಿದರು.
ಈ ಸಂಬಂಧ ಕಡೂರು ಶಾಸಕರ ಕಚೇರಿಗೆ ತೆರಳಿದ ಸಖರಾಯಪಟ್ಟಣ ಸಮೀಪದ ಹೊಸಹಳ್ಳಿ ಗ್ರಾಮದ ಕ್ಷೇಮಾಭಿವೃಧ್ದಿ ಸಂಘದ ಮುಖಂಡರುಗಳು ಮನವಿ ಸಲ್ಲಿಸಿ ಜನಾಂಗಕ್ಕೆ ಸರ್ಕಾರದ ಸವಲತ್ತುಗಳನ್ನು ಒದಗಿಸ ಬೇಕು ಹಾಗೂ ತಾಲ್ಲೂಕು ಮಟ್ಟದ ಸಂಘ ರಚನೆಗೆ ಸಹಕರಿಸಬೇಕು ಎಂದು ಮನವಿ ಸಲ್ಲಿಸಿದರು.
Welfare Development Association ಈ ವೇಳೆ ಸಂಘದ ಅಧ್ಯಕ್ಷ ಹೆಚ್.ಎಂ.ಪ್ರವೀಣ್‌ಕುಮಾರ್ ಮಾತನಾಡಿ ನಾಗೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಸಮುದಾಯದ 50 ಕುಟುಂಬಗಳು ಜೀವನ ನಡೆಸುತ್ತಾ ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿದೆ. ಆ ನಿಟ್ಟಿನಲ್ಲಿ ಶಾಸಕರು ಸಮುದಾಯಕ್ಕೆ ಸವಲತ್ತು ಒದಗಿಸಿ ಜನಾಂಗದ ಬೆಳವಣಿಗೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಜನಾಂಗಕ್ಕೆ ಈಗಾಗಲೇ ಗ್ರಾಮದಲ್ಲಿ ಯಾವುದೇ ಸಮುದಾಯ ಭವನ ಇಲ್ಲದಾಗಿದೆ. ಆ ನಿಟ್ಟಿನಲ್ಲಿ ಅನುದಾನ ಒದಗಿಸಿಕೊಟ್ಟು ಭವನ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ವಿಶೇಷವಾಗಿ ಶ್ರೀ ತ್ರಿಪದಿ ಬ್ರಹ್ಮ ಸರ್ವಜ್ಞ ಮೂರ್ತಿ ಜಯಂತಿಗೆ ಕುಂಬಾರ ಗುಂಡಯ್ಯ ಜನಾಂಗಕ್ಕೆ ಆಹ್ವಾನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಜಯಪ್ಪ, ಖಜಾಂಚಿ ಹೆಚ್.ಕೆ.ಜಯಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್.ರಾಜು, ಮುಖಂಡರುಗಳಾದ ಕಲ್ಮರುಡಪ್ಪ, ಮರಿಸಿದ್ದಪ್ಪ, ರೇಣುಕಾ, ಹೇಮ ರಾಜು, ಬಸವರಾಜು, ರಮೇಶ್, ವಸಂತ್, ಮಹೇಂದ್ರ ಕುಮಾರ್, ಲೋಕೇಶ್, ಚಂದ್ರಪ್ಪ, ಮೋಹನ್ ಇದ್ದರು.