Thursday, December 18, 2025
Thursday, December 18, 2025

State Bank of India ಸೇವಾ ನ್ಯೂನತೆ ಕಾರಣ ಎಸ್ ಬಿ ಐ ಶಾಖೆ ಮ್ಯಾನೇಜರ್ ಗ್ರಾಹಕರೋರ್ವರಿಗೆ ಪರಿಹಾರ ನೀಡಲು ಸೂಚನೆ

Date:

State Bank of India ಸಾಗರ ತಾಲ್ಲೂಕಿನ ಎಡಜಿಗಲೆಮನೆ ಶಾಖೆಯ ಭಾರತೀಯ ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸೇವಾನ್ಯೂನ್ಯತೆ ಕುರಿತು ಆಪಾದಿಸಿ ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಆದೇಶಿಸಿದೆ.

ಆರ್. ಹೇಮಲತಾ ಎಂಬ ಫಿರ್ಯಾದುದಾರರು ಎದುರುದಾರ ಬ್ಯಾಂಕ್‍ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಈ ಖಾತೆಗೆ ಸಂಬಂಧಿಸಿದಂತೆ ಫೋನ್ ಪೇ, ಗೂಗಲ್ ಪೇ ಅಂತಹ ಆನ್‍ಲೈನ್ ಸೇವಾ ಸೌಲಭ್ಯಗಳನ್ನು ಎದುರುದಾರರ ಸಲಹೆ ಮೇರೆಗೆ ಪಡೆದಿರುತ್ತಾರೆ.

ದಿನಾಂಕ 21.08.2021 ರಂದು ಪಿರ್ಯಾದುದಾರರು ತಮ್ಮ ಖಾತೆಯಿಂದ ಈ ಸೌಲಭ್ಯ ಉಪಯೋಗಿಸಿ ಹಣ ತೆಗೆಯಲು ಪ್ರಯತ್ನಿಸಿದಾಗ, “ಓ.ಟಿ.ಪಿ ಸರಿ ಇಲ್ಲದಿರುವ ಕಾರಣ ಮರು ಪ್ರಯತ್ನಿಸಿ” ಎಂಬ ಸಂದೇಶ ಮೊಬೈಲಿಗೆ ಬಂದಿದ್ದರಿಂದ, ಅವರು ಹಣ ಪಡೆಯಲು ಸಾಧ್ಯವಾಗಿರುವುದಿಲ್ಲ. ತದನಂತರದಲ್ಲಿ ರೂ.23,900/-ಗಳನ್ನು ಹೊರತೆಗೆಯಲಾಗಿರುತ್ತದೆ ಎಂಬ ಸಂದೇಶ ಮೊಬೈಲಿಗೆ ಬಂದಿರುತ್ತದೆ. ಈ ಸಂದೇಶ ನೋಡಿ ಗಾಬರಿಗೊಂಡ ಪಿರ್ಯಾದುದಾರರು ತಮ್ಮ ಖಾತೆಯಿಂದ ಹಣ ಕಳುವಾದ ಬಗ್ಗೆ ಎದುರುದಾರರಿಗೆ ತಿಳಿಸಿ, ಈ ಬಗ್ಗೆ ತನಿಖೆ ನಡೆಸಿ ತಮ್ಮ ಹಣ ವಾಪಸ್ಸು ಕಳುಹಿಸುವಂತೆ ಕೋರಿರುತ್ತಾರೆ. ಆದರೆ ಎದುರುದಾರರು ಈ ಬಗ್ಗೆ ನಿರ್ಲಕ್ಷ್ಯತನವನ್ನು ತೋರಿರುತ್ತಾರಲ್ಲದೇ, ಹಣ ಆ ರೀತಿ ತಪ್ಪಾಗಿ ವರ್ಗಾವಣೆಯಾಗಲು ನಾವು ಜವಾಬ್ದಾರರಲ್ಲವೆಂದು ತಿಳಿಸಿರುತ್ತಾರೆ.

ಎದುರುದಾರರು ತಮ್ಮ ಹೇಳಿಕೆಗೆ ಪೂರಕವಾಗಿ ಯಾವುದೇ ದಾಖಲೆ ಅಥವಾ ಸಾಕ್ಷ್ಯಾದಾರಗಳನ್ನು ಹಾಜರು ಪಡಿಸಿರುವುದಿಲ್ಲವಾದ್ದರಿಂದ ಎದುರುದಾರರ ಹೇಳಿಕೆಯನ್ನು ತಳ್ಳಿ ಹಾಕಿದ ಆಯೋಗವು ಪ್ರಕರಣದ ಅಂಶಗಳು, ಸಾಕ್ಷ್ಯಾಧಾರಗಳು ಮತ್ತು ವಾದ ವಿವಾದಗಳನ್ನು ಪರಿಶೀಲಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.

State Bank of India ಎದುರುದಾರರು ಪಿರ್ಯಾದುದಾರರಿಗೆ ರೂ.23,900/-ಗಳನ್ನು ವಾರ್ಷಿಕ ಶೇ.6% ಬಡ್ಡಿಯೊಂದಿಗೆ ಮರುಪಾವತಿಸಬೇಕು, ರೂ.5000/-ಗಳನ್ನು ಪಿರ್ಯಾದುದಾರರಿಗೆ ಉಂಟಾದ ಮಾನಸಿಕ ಹಾನಿಗೆ ಪರಿಹಾರವಾಗಿ ಹಾಗೂ ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು ರೂ.5000/-ಗಳನ್ನು ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ, ಮಹಿಳಾ ಸದಸ್ಯೆ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಸದಸ್ಯ ಬಿ.ಡಿ ಯೋಗಾನಂದ ಭಾಂಡ್ಯ ಇವರ ಪೀಠವು ದಿನಾಂಕ 15.03.2023 ರಂದು ಆದೇಶಿಸಿರುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...