Shimoga Cycling Club ಆರೋಗ್ಯವಂತ ಜೀವನ ನಡೆಸಲು ಶುದ್ಧ ಗಾಳಿ, ನೀರು, ಆಹಾರ ಮುಖ್ಯ. ಉತ್ತಮ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಉತ್ತರ ಪ್ರದೇಶದ ರಾಬಿನ್ ಸಿಂಗ್ ಅಭಿಪ್ರಾಯ ಪಟ್ಟರು.
ದೇಶಾದ್ಯಂತ ಜಾಗೃತಿ ಮೂಡಿಸಲು ಸೈಕಲ್ ಪ್ರವಾಸ ನಡೆಸುತ್ತಿರುವ ರಾಬಿನ್ ಸಿಂಗ್ ಅವರಿಗೆ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್, ಯೂತ್ ಹಾಸ್ಟೆಲ್ ತರುಣೋದಯ ಘಟಕ, ಪರಿಸರ ಪ್ರೇಮಿಗಳ ತಂಡದ ವತಿಯಿಂದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿ, ಕಲುಷಿತ ವಾತಾವರಣ ನಿರ್ಮಾಣ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕಷ್ಟ ಆಗಲಿದ್ದು, ಶುದ್ಧ ನೀರು, ಗಾಳಿ, ಆಹಾರ ಸಿಗುವ ರೀತಿ ನಾವೆಲ್ಲರೂ ನೋಡಿಕೊಳ್ಳಬೇಕು. ದೇಶಾದ್ಯಂತ ಜನರಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಹೆಚ್ಚಾಗಬೇಕು ಎಂದು ತಿಳಿಸಿದರು.
ಮುಂದಿನ ಪೀಳಿಗೆಗೆ ಮನವರಿಕೆ ಮಾಡಿ ಕೊಡುವ ದೃಷ್ಟಿಯಿಂದ ದೇಶದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಿಳವಳಿಕೆ ನೀಡಲು ದೇಶಾದ್ಯಂತ ಸೈಕಲ್ ನಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಕಿಮೀ ಚಲಿಸಿದ್ದೇನೆ ಎಂದರು.
ಜಯವರ್ಧನ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕರು ದೇಶಾದ್ಯಂತ ಈ ರೀತಿ ಸೇವೆ ಸಲ್ಲಿಸುತ್ತಿದ್ದು, ರಾಬಿನ್ ಸಿಂಗ್ ಸೈಕಲ್ ನಲ್ಲಿ ಕನ್ಯಾಕುಮಾರಿಯಿಂದ ಪ್ರಾರಂಭಿಸಿ ಈಗಾಗಲೆ 25 ರಾಜ್ಯ ಪೂರೈಸಿ ಮಾರ್ಚ ಅಂತ್ಯದಲ್ಲಿ ಸ್ವಕ್ಷೇತ್ರ ತಲುಪುವ ನಿರಿಕ್ಷೆಯಲ್ಲಿ ಇದ್ದಾರೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಇಂತಹ ಉತ್ತಮ ಕಾರ್ಯ ಮಾಡಲು ಏಕಾಂಗಿಯಾಗಿ ಸೈಕಲ್ ನಲ್ಲಿ ಪ್ರವಾಸ ಮಾಡುತ್ತಿರುವ ಶ್ರೀಯುತರ ಕಾರ್ಯ ಪ್ರಶಂಸನೀಯ. ಅವರಿಗೆ ಪ್ರೋತ್ಸಾಹ ನೀಡಲು ಶಿವಮೊಗ್ಗ ಜನತೆಯ ಪರವಾಗಿ ವಿವಿಧ ಸಂಘ ಸಂಸ್ಥೆಗಳು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಅಧ್ಯಕ್ಷ ಎಸ್ಎಸ್ ವಾಗೀಶ್ ಮಾತನಾಡಿ ಸನ್ಮಾನಿಸಿದರು.
ತ್ಯಾಗರಾಜ್ ಮಿತ್ಯಾಂತ ಸ್ವಾಗತಿಸಿದರು. ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ನಿರೂಪಿಸಿದರು.
Shimoga Cycling Club ಹರೀಶ್ ಪಾಟಿಲ್ ವಂದಿಸಿದರು. ರಜನಿಕಾಂತ್, ನರಸಿಂಹಮೂರ್ತಿ, ವರುಣ್, ವೆಂಕಟಗಿರಿ, ಜಯವರ್ದನ್, ಶ್ರೀಧರ, ಗುರುರಾಜ್ ಮತ್ತಿತರು ಇದ್ದರು.