Gangotri Independent Pre-Graduate College ವಿದ್ಯಾರ್ಥಿಗಳು ಪಠ್ಯವನ್ನು ಮಾತ್ರ ಅಧ್ಯಯನ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ತೋರಿದಾಗ ಅದು ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಶಿವಮೊಗ್ಗದ ಗಂಗೋತ್ರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ರೂಪಾ ಪುಣ್ಯಕೋಟಿ ಹೇಳಿದರು.
ಅವರು ಕಾಲೇಜಿನ ಸಭಾಂಗಣದಲ್ಲಿ ಫೆಡರಲ್ ಬ್ಯಾಂಕ್ ವತಿಯಿಂದ ನಡೆದ ಸ್ಪೀಕ್ ಫಾರ್ ಇಂಡಿಯಾ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಹಲವು ಮಹತ್ವದ ಅಂಶಗಳನ್ನು ಕಲಿಯುವ ಸಂಗತಿ ಇರುತ್ತದೆ. ಇಂದಿನ ಮಕ್ಕಳು ಪೋಷಕರ ಒತ್ತಡದಿಂದ ಕೇವಲ ಪಠ್ಯ ಕ್ರಮದ ಜೀವನಕ್ಕೆ ಒಗ್ಗಿ ಹೋಗಿದ್ದಾರೆ. ಇದರಿಂದ ಅವರ ನಿಜವಾದ ಪ್ರತಿಭೆ ಹೊರಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಸಕ್ರಿಯರಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಒಳ್ಳೆಯದನ್ನು ನೀಡುವುದಕ್ಕಿಂತಹ ಕೆಟ್ಟ ಅಂಶಗಳನ್ನು ಹೆಚ್ಚು ಬಿತ್ತರ ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಅಂತಹ ಸಂದೇಶಗಳಿಗೆ ನಮ್ಮ ಮಕ್ಕಳು ಬೇಗನೇ ಮಾರು ಹೋಗುತ್ತಿದ್ದಾರೆ. ಒಳ್ಳೆಯ ಸಂವಹನ ಅಂಶವಾಗಬೇಕಾಗಿದ ಸಾಮಾಜಿಕ ಜಾಲತಾಣ ಹಲವು ಕೃತ್ಯಗಳ ಪ್ರಚೋದನ ತಾಣವಾಗಿ ಮಾರ್ಪಟ್ಟಿರುವುದು ಆತಂಕಕಾರಿ ಅಂಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣ ಬಳಸುವ ಕುರಿತು ಸರಕಾರದ ಹಲವು ಸಂಸ್ಥೆಗಳು ನಿರಂತರವಾಗಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಲೇ ಇವೆ. ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾಜಿಕ ಜಾಲತಾಣದಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಆದರೆ, ಸಮೀಕ್ಷೆಯೊಂದರ ಪ್ರಕಾರ ಅತಿ ಹೆಚ್ಚು ಅಪರಾಧ ಪ್ರಕರಣಗಳು ಜಾಲತಾಣಗಳ ಪ್ರಚೋದನೆಗಳಿಂದಲೇ ನಡೆಯುತ್ತಿದೆ ಎಂಬ ಸಂಗತಿ ನಿಜಕ್ಕೂ ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ. ಇದರ ಬಗ್ಗೆ ಪೋಷಕರು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
Gangotri Independent Pre-Graduate College ವಿದ್ಯಾರ್ಥಿ ಜೀವನವನ್ನು ಅತ್ಯಂತ ಸಂತೋಷದಿಂದ ಹಾಗೂ ಸಮಚಿತ್ತದಿಂದ ಕಳೆಯಬೇಕಾದ ಸಂದರ್ಭದಲ್ಲಿ ಮಕ್ಕಳು ಒತ್ತಡದಿಂದ ಬದುಕುವಂತಾಗಿದೆ. ಅದಕ್ಕೆ ಇಂದಿನ ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್ ಗೇಮಗಳು ಬಹುತೇಕ ಕಾರಣವಾಗಿದೆ. ಇದರ ಬಗ್ಗೆ ಮಕ್ಕಳ ಮೊದಲೇ ಎಚ್ಚೆತ್ತುಕೊಂಡರೆ ಮುಂದಿನ ದಿನಗಲ್ಲಿ ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಪ್ರತೀಕ್ಷಾ, ದ್ವೀತಿಯ ಬಹುಮಾನವನ್ನು ಶ್ರೇಯಾ ತೃತೀಯ ಬಹುಮಾನವನ್ನು ಈಶ್ವರಿ ಅವರು ಪಡೆದುಕೊಂಡರು ಸಮಾಧಾನಕಾರ ಬಹುಮಾನವನ್ನು ಮೈತ್ರಿ ಹಾಗೂ ಮೈತ್ರಿ ಪಡೆದರು.
ಚರ್ಚಾ ಸ್ಫರ್ಧೆಯನ್ನು ಸ್ಪೀಕ್ ಫಾರ್ ಇಂಡಿಯಾ ಪರವಾಗಿ ಸೂರಜ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಜಯಲಕ್ಷ್ಮೀ, ಅಹಮದ್ ಷರೀಫ್, ಶ್ವೇತಾ, ಶ್ರೀಕಾಂತ್, ವಿದ್ಯಾಶ್ರೀ, ಅಮಿತ್ ಇದ್ದರು. ಕಾರ್ಯಕ್ರಮ ನಿರೂಪಣೆಯನ್ನು ಉಪನ್ಯಾಸಕಿ ಸಮ್ರೀನ್ ನಡೆಸಿಕೊಟ್ಟರು.