Kannada Sahitya Parishath ಡಿಸೆಂಬರ್ 29ರಂದು ಶಿವಮೊಗ್ಗ ತಾಲೂಕು ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಿವಮೊಗ್ಗ ನಗರದ ಗುರುಪುರದಲ್ಲಿರುವ ಬಿ. ಜಿ. ಎಸ್. ವಸತಿ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಸಮ್ಮೇಳನದಲ್ಲಿ ಕಥೆ, ಕವನ, ಪ್ರಬಂಧ ಗೋಷ್ಠಿಯನ್ನು ಏರ್ಪಡಿಸಿದೆ. ಈ ಗೋಷ್ಠಿಯಲ್ಲಿ ಪ್ರೌಢಶಾಲೆಯಲ್ಲಿ ಮತ್ತು ಪಿ.ಯು. ಕಾಲೇಜು ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದು. ಹೆಸರನ್ನು ಡಿಸೆಂಬರ್ 20ರೊಳಗೆ ನೋಂದಣಿಮಾಡಿಕೊಳ್ಳಬೇಕು.
ಮಕ್ಕಳು ತಮ್ಮ ಹೆಸರು, ದೂರವಾಣಿ ಸಂಖ್ಯೆ, ಯಾವ ವಿಚಾರದ ಗೋಷ್ಠಿಯಲ್ಲಿ ಭಾಗವಹಿದ್ದಾರೆ. ಕಥೆ, ಕವನ, ಪ್ರಬಂಧ ಎಷ್ಟು ಬರೆದಿದ್ದಾರೆ ಎಷ್ಟು ಸಮಯದಿಂದ ಬರೆಯುತ್ತಿದ್ದಾರೆ, ಪುಸ್ತಕ ಪ್ರಕಟವಾಗಿದೆಯೇ, ಪತ್ರಿಕೆಗಳಲ್ಲಿ, ಸಂಪುಟಗಳಲ್ಲಿ ಪ್ರಕಟಿಸಿದ್ದರೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.
ಹಾಗೆಯೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದ್ದು, ಸಾಹಿತ್ಯ ಸಾಂಸ್ಕೃತಿಕವಾಗಿ
ಗುರುತಿಸಿಕೊಂಡಿದ್ದು, ಸಾಹಿತ್ಯದಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ನೀಡುವುದು ಸಾಹಿತ್ಯ ಕೃತಿ ಪ್ರಕಟಿಸಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಆಸಕ್ತ ಮಕ್ಕಳ ಮಾಹಿತಿಯನ್ನು ನೀಡುವುಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ. ಅಧ್ಯಕ್ಷರಾದ ಡಿ. ಮಂಜುನಾಥ ಅವರು ಕೋರಿದ್ದಾರೆ.
Kannada Sahitya Parishath ಹೆಚ್ಚಿನ ಮಾಹಿತಿಗಾಗಿ
ಜಿಲ್ಲಾ ಸಮಿತಿ, ಆರ್.ಟಿ.ಓ. ಕಚೇರಿ ರಸ್ತೆ,
ಶಿವಮೊಗ್ಗ
9449552795
ಮಹಾದೇವಿ, ಅಧ್ಯಕ್ಷರು, ಕಸಾಪ, ಶಿವಮೊಗ್ಗ ತಾ
8073052370
ಮಂಜಪ್ಪ ಕೆ. ಎಸ್
ಪ್ರಧಾನ ಕಾರ್ಯದರ್ಶಿ
9449921957
ಡಿ. ಗಣೇಶ್,
ಕಾರ್ಯದರ್ಶಿ, ಜಿಲ್ಲಾ ಕಸಾಪ
*9901331667 ಇವರನ್ನು ಸಂಪರ್ಕಿಸಬಹುದಾಗಿದೆ.