Hosanagara Gram Panchayat ಹೊಸನಗರದಲ್ಲಾ ಅಂಗನವಾಡಿ ಕೇಂದ್ರಯೊಂದು
ಶಿಥಿಲಾವಸ್ಥೆ ತಲುಪಿದೆ.
ಹೊಸನಗರದಲ್ಲಿ ಅಂಗನವಾಡಿಯ ಬಿರುಕು ಬಿಟ್ಟ ಗೋಡೆಗಳು ಈಗಲೂ ಆಗಲು ಬೀಳಬಹುದಾದಂತ ಮೇಲ್ಚಾವಣಿ ಒಡೆದು ಹಲವು ಚೂರುಗಳಾಗಿ ಅಂಗನವಾಡಿ ಕೇಂದ್ರ ಈಗಲೋ ಆಗಲೋ ಬೀಳುವಂತಾಗಿದೆ.
ಹೊಸನಗರ ತಾಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಸವೆ ಗ್ರಾಮದ ಸರ್ಕಾರಿ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
2010 11ನೇ ಸಾಲಿನ 12 ಮತ್ತು 13ನೇ ಹಣಕಾಸು ಸಾಲಿನಲ್ಲಿ ಮೂರು ಲಕ್ಷ ರೂ ಅನುದಾನದಲ್ಲಿ ಈ ಅಂಗನವಾಡಿ ಕಟ್ಟಡ ನಿರ್ಮಾಣ ಆಗಿದ್ದು ಈ ಭಾಗದ ಹಲವು ಗ್ರಾಮಗಳ ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಈ ಅಂಗನವಾಡಿ ಕೇಂದ್ರಕ್ಕೆ ಮೊರೆ ಹೋಗಿದ್ದರು.
Hosanagara Gram Panchayat ಕಳೆದ ಎರಡು ವರ್ಷಗಳ ಈಚೆಗೆ ಕಟ್ಟಡದಲ್ಲಿ ವ್ಯಾಪಕ ಬದಲಾವಣೆ ಕಂಡು ಬಂದು ದುರಸ್ತಿ ಕಾರ್ಯಕ್ಕೆ ಮುಂದಾಗುವಂತೆ ಹಲವು ಬಾರಿ ಸಿಡಿಪಿಓ ಕಚೇರಿಗೆ ಗ್ರಾಮಸ್ಥರೇ ಮನವಿ ಸಲ್ಲಿಸಿದ್ದರು.
ಆದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಸಹ ಕಟ್ಟಡ ದುರಸ್ತಿಗೆ ಸಂಬಂಧಪಟ್ಟಂತೆ ಇಲಾಖೆಗೆ ಪತ್ರ ಬರೆದು ಹಲವು ತಿಂಗಳು ಕಳೆದಿದೆ.
ಪ್ರಸಕ್ತ ಈ ಅಂಗನವಾಡಿಯು ಪಕ್ಕದ ಸರ್ಕಾರಿ ಶಾಲೆಯ ನಲಿ – ಕಲಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದು ನಾಲ್ಕೈದು ಮಕ್ಕಳು ವ್ಯಾಸಂಗ ನಿರತರಾಗಿದ್ದಾರೆ,ಹಳೆ ಅಂಗನವಾಡಿ ಕಟ್ಟಡವು ಶಿಥಿಲಾವಸ್ತೆ ತಲುಪಿರುವ ಕಾರಣ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಕುರಿತಂತೆ ಆತಂಕದಲ್ಲಿ ದಿನದೊಡುವಂತಾಗಿದೆ.