Wednesday, October 2, 2024
Wednesday, October 2, 2024

College of Veterinary Medicine ಕಾಗಿನೆಲ್ಲಿಯಲ್ಲಿ ಜಾನುವಾರು ಆರೋಗ್ಯ ಸಮಗ್ರ ತಪಾಸಣಾ ಶಿಬಿರ

Date:

College of Veterinary Medicine ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ
ಕೇಂದ್ರ ಶಿವಮೊಗ್ಗ ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇದರ ವತಿಯಿಂದ ಹಮ್ಮಿಕೊಂಡ ಕರ್ನಾಟಕ ಸರ್ಕಾರದ ಕೃಷಿ
ಇಲಾಖೆಯ “ಸಾವಯವ ಸಿರಿ” ಯೋಜನೆಯಡಿ ಗೋಗರ್ಭ ಯೋಜನೆಯ
ಕಾರ್ಯಕ್ರಮವನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ
ಸೇವಾ ಇಲಾಖೆ, ಶಿವಮೊಗ್ಗ , ಕೃಷಿ ಇಲಾಖೆ, ಶಿವಮೊಗ್ಗ ಮತ್ತು ಹಾಲು
ಉತ್ಪಾದಕರ ಸಹಕಾರ ಸಂಘ, ಕಾಗಿನೆಲ್ಲಿ ಗ್ರಾಮ ಇವರ
ಸಹಯೋಗದೊಂದಿಗೆ ಜಾನುವಾರುಗಳ ಸಮಗ್ರ ಆರೋಗ್ಯ
ತಪಾಸಣೆ ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಶಿಕಾರಿಪುರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ
ನಿರ್ದೇಶಕರಾದ ಡಾ: ರವಿಕುಮಾರ್ ಇವರು ವಿಶೇಷ ಆಸ್ತೆಯಿಂದ ಆಯೋಜಿಸಿದರು.

ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ, ಶಿವಮೊಗ್ಗದ ಜಂಟಿ
ನಿರ್ದೇಶಕರಾದ ಶ್ರೀಮತಿ ಜಿ.ಸಿ. ಪೂರ್ಣಿಮಾ ಹಾಗೂ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ, ಶಿಕಾರಿಪುರ ಇದರ ಸಹಾಯಕ ನಿರ್ದೇಶಕರಾದ ಶ್ರೀ ಕಿರಣ್ ಕುಮಾರ್ ಹರ್ತಿ, ಕೃಷಿ ಅಧಿಕಾರಿ ಶ್ರೀ ಕೆ.ನಾಗಪ್ಪ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ರಿವಾರ್ಡ್ ಯೋಜನೆ ಪ್ರವೇಶ ದ್ವಾರ ಚಟುವಟಿಕೆಯಡಿ ಅವಶ್ಯಕ ಖನಿಜ ಮಿಶ್ರಣ ಮತ್ತಿತರ
ಔಷಧ ನೀಡಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಸಾವಯವ ಸಿರಿ ಯೋಜನೆಯ ಪ್ರಧಾನ
ಸಂಶೋಧಕ ಮತ್ತು ಪ್ರಾಧ್ಯಾಪಕರಾದ ಡಾ ಎನ್.ಬಿ.ಶ್ರೀಧರ, ಡಾ:
ಸಂತೋಷ್ ಶಿಂಧೆ ಮತ್ತು ಡಾ: ರುದ್ರೇಶ್ ತಜ್ಞರಾಗಿ ಅನುತ್ಪಾದಕ
ರಾಸುಗಳ ತಪಾಸನೆ ಮತ್ತು ಚಿಕಿತ್ಸೆಯಲ್ಲಿ ಭಾಗವಹಿಸಿದರು.
ಶಿಕಾರಿಪುರದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖ್ಯೆಯ ಪಶುವೈದ್ಯಾಧಿಕಾರಿಗಳಾದ ಡಾ: ಸುನಿಲ್ ಕುಮಾರ್ ಕೆ. ಎಂ., ಡಾ: ಹರೀಶ್, ಡಾ: ಸಂತೋಶ್, ಡಾ: ಶಿವಕುಮಾರ್ ಇವರು ಭಾಗವಹಿಸಿದ್ದರು.

ಶ್ರೀ ತ್ಯಾಗರಾಜ್, ಚೇತನ್ ಮತ್ತು ಸಂತೋಷ್ ಇವರು ಸಹಕರಿಸಿದರು.

ವಿವಿಧ ಕಾರಣಗಳಿಂದ ಅನುತ್ಪಾದಕವಾಗಿರುವ ಒಟ್ಟು ೮೬ ರಾಸುಗಳಿಗೆ ವಿಶೇಷ
ಚಿಕಿತ್ಸೆಯನ್ನು ನೀಡಲಾಯಿತು.

College of Veterinary Medicine ರೈತರಿಗೆ ಆಧುನಿಕ ಪಶುಪಾಲನೆಯ ಬಗ್ಗೆ ಗೋಪಾಲ ಗೋಷ್ಟಿಯ ಮೂಲಕ ಮಾಹಿತಿ ನೀಡಲಾಯಿತು.

ರೈತರಿಗೆ ನಿಗದಿತ ಸಮಯದಲ್ಲಿ ತಜ್ಞರು ಸೂಚಿಸಿದ ಚಿಕಿತ್ಸೆಯನ್ನು
ಜಾನುವಾರುಗಳಿಗೆ ಮಾಡಿಸಿ ಅವುಗಳನ್ನು ಉತ್ಪಾದನೆಯತ್ತ
ಸಾಗುವಂತೆ ಮಾಡಬೇಕೆಂದು ಮನವರಿಕೆ ಮಾಡಿಕೊಡಲಾಯಿತು.

ವಿವಿಧ ಗ್ರಾಮಗಳಲ್ಲಿ ಈ ಬಗೆಯ 223 ವಿಶೇಷ ಚಿಕಿತ್ಸಾ
ಶಿಬಿರಗಳನ್ನು ಏರ್ಪಡಿಸಿ ಈ ವರೆಗೆ ಸರಾಸರಿ 9774 ಜಾನುವಾರುಗಳನ್ನು
ಚಿಕಿತ್ಸಾ ಮಾಡಿದ್ದು ಅವುಗಲ್ಲಿ ಶೇ:73.58 ರಷ್ಟು ರಾಸುಗಳು
ಗರ್ಭಧರಿಸಿವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...