JDS Party ಜೆಡಿಎಸ್‌ನ ಸಿ.ಎಂ. ಇಬ್ರಾಹಿಂ ಬಣದ ರಾಷ್ಟ್ರೀಯ ಅಧ್ಯಕ್ಷ ರನ್ನಾಗಿ ಕೇರಳದ ಸಿ.ಕೆ. ನಾಣು ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು ನಗರದ ಕಾಡು- ಗೊಂಡನಹಳ್ಳಿಯಲ್ಲಿ ಇಬ್ರಾಹಿಂ ಬಣದ ರಾಷ್ಟ್ರೀಯ ಸಭೆಯಲ್ಲಿ ನಾನು ಅವರನ್ನು ಸಿ.ಕೆ ನಾನು ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿಕೆ ನಾನು ಅವರು ಮಾತನಾಡಿ ಹಿಂದಿನ ಸಭೆಗಳಲ್ಲಿ ಎಚ್ ಡಿ ದೇವೇಗೌಡರೊಂದಿಗೆ ನಾವು ಇದ್ದೇವೆ. ಆದರೆ ನನ್ನನ್ನು ಅವರು ಉಚ್ಚಾಡಿಸಿದ್ದಾರೆ. ಗಾಂಧಿಯವರ ಜಾತ್ಯತೀತ ಸಿದ್ದಾಂತದ ಮೇಲೆ ನಮ್ಮ ಪಕ್ಷ ನಿಂತಿರುವುದು. ಅದಕ್ಕೆ ವಿರುದ್ಧವಾಗಿ ಇರುವವರ ಜೊತೆ ಸಖ್ಯ ಬೆಳೆಸುವುದು ಸರಿಯೇ ಎಂದು ಅವರಲ್ಲಿ ಕೇಳಲು ಬಯಸುತ್ತೇನೆ ಎಂದರು.
JDS Party ಸಭೆಯಲ್ಲಿ ಮಾತನಾಡಿದ ಇಬ್ರಾಹಿಂ,ಗಾಂಧಿಯವರ ತತ್ವ ಸಿದ್ಧಾಂತ ಮತ್ತು ಜಾತ್ಯತೀತ ಸಿದ್ದಾಂತಗಳಲ್ಲಿ ಜೆಡಿಎಸ್ ನಂಬಿಕೆ ಇಟ್ಟಿದೆ. ಅದಕ್ಕೆ ಪೂರಕವಾಗಿ ಹೊಸ ಅಧ್ಯಕ್ಷರನ್ನ ಆಯ್ಕೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಐವತ್ತು ವರ್ಷ ಅಧಿಕಾರದಲ್ಲಿರಬಹುದು. ಆದರೆ ಜಾತ್ಯತೀತ ಸಿದ್ದಾಂತ ಸೂರ್ಯ ಮತ್ತು ಚಂದ್ರ ಇರುವವರೆಗೂ ಅಜರಾಮರವಾಗಿ ಇರಲಿದೆ ಎಂದರು.
ಜೆಡಿಎಸ್‌ನ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ಸೂರಿ ಅವರು, ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನಾನು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ’ ಎಂದು ಪ್ರಕಟಿಸಿದರು.
