Wednesday, September 16, 2026
Wednesday, September 16, 2026

Shivamogga Police ಅಪರಿಚಿತ ಶವ ಪತ್ತೆ ಬಗ್ಗೆ ಶಿವಮೊಗ್ಗ ರೈಲ್ವೆ ಪೊಲೀಸ್ ಮಾಹಿತಿ

Date:

Shivamogga Police ಶಿವಮೊಗ್ಗ ಹಳೆಯ ರೈಲುನಿಲ್ದಾಣದಲ್ಲಿ ಭದ್ರಾವತಿ ಕಡೆಗೆ ಹೋಗುವ ಕೊನೆಯ ರೈಲ್ವೆ ಟ್ರಾಕ್ ಮೇಲೆ ಸುಮಾರು 30 ವರ್ಷದ ಅಪರಿಚಿತ ಗಂಡಸಿನ ಶವವನ್ನು ಕಂಡ ಕರ್ತವ್ಯದಲ್ಲಿದ್ದ ಕೀ ಮ್ಯಾನ್ ಮಾಹಿತಿ ನೀಡಿದ್ದಾರೆ.

ಶವವು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶೈತ್ಯಗಾರದಲ್ಲಿರುತ್ತದೆ.
ಮೃತ ವ್ಯಕ್ತಿಯ ಚಹರೆ ಸುಮಾರು 5.8 ಅಡಿ ಎತ್ತರ, ಸಾದಾ ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಕಪ್ಪು ಕೂದಲು, ಕುರುಚಲು ಕಪ್ಪು ಗಡ್ಡ ಮೀಸೆ ಬಿಟ್ಟಿರುತ್ತಾನೆ. ನೋಡಲು ಹಿಂದೂ ಮತಸ್ಥನಂತೆ ಕಂಡುಬರುತ್ತಾನೆ. ಮೃತ ವ್ಯಕ್ತಿಯು ಗ್ರೇ ಕಲರ್ ತುಂಬು ತೋಳಿನ ಶರ್ಟ್, ಗ್ರೇ ಕಲರ್ ಮತ್ತು ನೀಲಿ ಬಣ್ಣದ ಬನಿಯನ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಬಟ್ಟೆಗಳು ಹರಿದು ರಕ್ತಮಯವಾಗಿರುತ್ತದೆ.

Shivamogga Police ಈತನ ವಾರಸುದಾರರು ಯಾರದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೂ.ಸಂ: 08182-222974, 9480802124 ನ್ನು ಸಂಪರ್ಕಿಸಬಹುದೆಂದು ರೈಲ್ವೆ ಪೊಲೀಸ್ ಠಾಣೆ ಠಾಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...

B.Y.Raghavendra ಸ್ಥಳೀಯರ ಆಹವಾಲು ಕೇಳದೇ , ವಾಸ್ತವ ಸ್ಥಿತಿ ಅರಿಯದೇ ಕಸ್ತೂರಿ ರಂಗನ್ ವರದಿ ನೀಡಲಾಗಿದೆ- ಬಿ.ವೈ.ರಾಘವೇಂದ್ರ

B.Y.Raghavendra ಕಸ್ತೂರಿ ರಂಗನ್‌ ಸಮಿತಿಯ ಶಿಫಾರಸ್ಸುಗಳಲ್ಲಿ ಕೆಲವು ಮಾರ್ಪಾಡುಗೊಳಿಸಿ, ಅರಣ್ಯ ಭೂಮಿಯೆಂದು...