International Mountain Day ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಇಂದು ಶಿವಮೊಗ್ಗದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆಯ ನೂತನ ಜಿಲ್ಲಾ ಮುಖ್ಯ ಕಛೇರಿಯು ಇಂದು ಶಿವಮೊಗ್ಗ ನಗರದ ಬಸ್ಟ್ಯಾಂಡ್ ಹಿಂಭಾಗದ ಕೆಎಎಸ್ಆರ್ಟಿಸಿ ಡಿಪೋ ಸರ್ಕಲ್ ನ ಬಳಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದ ಉದ್ಘಾಟನೆಗಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿ ದಂತಹ ” ಶ್ರೀಯುತ ಎನ್ ಮಾಲತೇಶ್ ” ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ( ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ.)” ಶ್ರೀಯುತ ಅಖಿಲ್ ರಜಾ ಮಿಸ್ಬಾಯಿ ಮೌಲಾನ” ರವರು. ” ಶ್ರೀಯುತ ಫಾದರ್ ವೀರೇಶ್ ಮೋರಾಸ್ ” ರವರು ಮಾಜಿ ಪೊಲೀಸ್ ಅಧಿಕಾರಿಗಳಾದಂತಹ ” ಶ್ರೀಯುತ ದಾನಂ ” ರವರು. ಮಾಜಿ ಪೊಲೀಸ್ ಮಹಿಳಾ ಅಧಿಕಾರಿಯಾಗಿದ್ದಂತಹ “ಶ್ರೀಮತಿ ಶರಾವತಿ ” ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ನಿರ್ದೇಶಕರುಗಳಾದ ” ಶ್ರೀಯುತ ಅಬ್ದುಲ್ ರಜಾಕ್ ” ರವರು “ಶ್ರೀಯುತ ಸಂತೋಷ್ ಕುಮಾರ್ ಹೊನ್ನೆಗುಂಡಿ ” ರವರು ” ಶ್ರೀಯುತ ಅಬೂಬಕ್ಕರ್ ” ರವರು ” ಶ್ರೀಯುತ ಎ.ಮೈಕಲ್ ಕೆನಿತ್ ” ರವರು ಈ ಕಾರ್ಯಕ್ರಮದಲ್ಲಿದ್ದು ಮಾನವ ಹಕ್ಕುಗಳು ಮತ್ತು ಅಪರಾಧ ನಿಯಂತ್ರಣ ದ ಬಗ್ಗೆ ಬಹಳಷ್ಟು ಚರ್ಚೆಗಳನ್ನು ಮಾಡಿದರು.
ಹಾಗೆಯೇ ಆಗಮಿಸಿದ್ದಂತಹ ಸಾರ್ವಜನಿಕರಿಗೆ ಮತ್ತು ಸದಸ್ಯರುಗಳಿಗೆ ಗಾಂಜಾ ನಿರ್ಮೂಲನೆ , ಸಮಾಜದ ಪಿಡುಗುಗಳು ಮತ್ತು ಮಾನವ ಹಕ್ಕುಗಳ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು.
ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದಂತಹ ಎ . ಝೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಯ ಕರಾಟೆ ಕ್ರೀಡಾಪಟುವಳಾದ ಪ್ರೀತಮ್ ವಿ , ಶೀತಲ್ ಸುಸೈನ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
International Mountain Day ಈ ಸಂದರ್ಭದಲ್ಲಿ ಹಾಜರಿದ್ದಂತಹ ಜಿಲ್ಲಾ ಪಾಧಿಕಾರಿಗಳಾದ ಶ್ರೀಯುತ ನವೀನ್ ಎಸ್ , ಶ್ರೀಯುತ ನಾಸಿಫ್ ಅಹಮ್ಮದ್ , ಮಂಜುನಾಥ್ , ಸಾಧಿಕ್ , ಡಾಕ್ಟರ್ ಅಲಿರಝಾ ಜಿ.
ಹಾಗೂ ಡಾಕ್ಟರ್ ಅoಜುಮ್ ಸುಲ್ತಾನ ನಂತರ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಫಲಕಗಳನ್ನು ಹಿಡಿದು ವಾಹನಗಳಲ್ಲಿ ಮಂಡಳಿಯ ಸರ್ಕಲ್ ಬಸ್ಟಾಂಡ್ ಸರ್ಕಲ್ ಗೋಪಿ ಸರ್ಕಲ್ ಮಹಾವೀರ ಸರ್ಕಲ್ ನಿಂದ ಹೊರಟು ನಂತರ ಬಸ್ಟ್ಯಾಂಡಿಗೆ ಬಂದು ತಲುಪಿ ಮಾನವ ಹಕ್ಕುಗಳ ಪರ ಘೋಷಣೆಯನ್ನು ಕೂಗಿ ನಂತರ ಸಾರ್ವಜನಿಕರಿಗೆ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.